ಜನರ ಸೇವೆ ಮಾಡುವುದಕ್ಕೆ ಇಷ್ಟವಿಲ್ಲದ, ಕಾಲಹರಣ ಮಾಡುವ ಸರ್ಕಾರಿ ಅಧಿಕಾರಿಗಳು ಇಲಾಖೆ ಬಿಟ್ಟು ಹೋಗಿ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನಲ್ಲಿ ಗಾಂಧಿ ಸಂಕಲ್ಪ ಯಾತ್ರೆ ನಡೆಸಿದ್ದಾರೆ.

ಮಂಗಳೂರು(ಅ.20): ಜನರ ಸೇವೆ ಮಾಡುವುದಕ್ಕೆ ಇಷ್ಟವಿಲ್ಲದ, ಕಾಲಹರಣ ಮಾಡುವ ಸರ್ಕಾರಿ ಅಧಿಕಾರಿಗಳು ಇಲಾಖೆ ಬಿಟ್ಟು ಹೋಗಿ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಅಧಿಕಾರಿಗಳಿಗೆ ಹೇಳಿದ್ದಾರೆ.

ಶನಿವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನಲ್ಲಿ ಗಾಂಧಿ ಸಂಕಲ್ಪ ಯಾತ್ರೆ ನಡೆಸಿದ ಅವರು, ನಂತರ ಕಮಲಶಿಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.

ಮಂಗಳೂರು: ಪಂಪ್‌ವೆಲ್‌ನಲ್ಲೇ ನಿರ್ಮಾಣವಾಗಲಿದೆ ಸರ್ವಿಸ್‌ ಬಸ್‌ ನಿಲ್ದಾಣ..!

ಮರವಂತೆ ಬಂದರು ಮತ್ತು ಗಂಗೊಳ್ಳಿ ಜೆಟ್ಟಿಕಾಮಗಾರಿಗಳ ವಿಳಂಬ, ಕಳಪೆ ಕಾಮಗಾರಿಯದ ಬಗ್ಗೆ ಮೀನುಗಾರ ನಾಯಕರ ದೂರಿಗೆ ತೀವ್ರ ಆಕ್ರೋಶಗೊಂಡ ಸಂಸದರು, ಇಂತಹ ಅನಗತ್ಯವಾಗಿ ವಿಳಂಬವನ್ನು ತಾನು ಸಹಿಸುವುದಿಲ್ಲ. ಸರ್ಕಾರಿ ಕೆಲಸದಲ್ಲಿ ಆಸಕ್ತಿ ಇದ್ದರಷ್ಟೇ ಇರಿ, ಇಲ್ಲದಿದ್ದರೇ ಇಲಾಖೆ ಬಿಟ್ಟು ಹೋಗಿ ಎಂದರು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ವಿಳಂಬಕ್ಕೆ ಎಂಜಿನಿಯರ್‌ ನೋಟಿಸ್‌ ನೀಡಿ ಎಂದು ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಬೈಂದೂರು ಕ್ಷೇತ್ರದ ಮೊಬೈಲ್‌ ನೆಟ್‌ವರ್ಕ್ ಕೆಲಸ ಮಾಡದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊಬೈಲ್‌ ಸೇವೆ ಒದಗಿಸುತ್ತಿರುವ ಕಂಪೆನಿಗೆ ಸಮಸ್ಯೆ ಬಗೆಹರಿಸಲು ಕಾನೂನು ತೊಡಕುಗಳನ್ನು ಪರಿಹರಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಜಂಟಿ ಕಾರ್ಯದರ್ಶಿ ಶ್ರೀರಂಗಯ್ಯ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್‌, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್‌, ಉಪವಿಭಾಗಾಧಿಕಾರಿ ರಾಜು ಮುಂತಾದವರಿದ್ದರು.

ಹಠಾತ್ ಮಳೆಗೆ 10 ಎಕರೆಗೂ ಹೆಚ್ಚು ಭತ್ತ ಬೆಳೆ ನಾಶ, ರೈತರಿಗೆ ಹತಾಶೆ