ಉಡುಪಿ(ನ.06): ನರೇಂದ್ರ ಮೋದಿಯಂತ ಸುಳ್ಳುಗಾರ ಭಾರತದ ಇತಿಹಾಸದಲ್ಲಿ ಕಂಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು, ಆದಾಯ ದುಪ್ಪಟ್ಟಾಯ್ತಾ..? ಕಪ್ಪುಹಣ ತಂದ್ರಾ? ಅದೂ ಇಲ್ಲ. ಸುಳ್ಳು ಹೇಳಿ ಭಾವನಾತ್ಮಕ ಬವಾಷಣ ಮಾಡ್ತಾರೆ. ದೇಶದ ಆರ್ಥಿಕ ಸ್ಥಿತಿ ಇಷ್ಟು ಯಾವತ್ತೂ ಹದಗೆಟ್ಟಿಲ್ಲ ಎಂದಿದ್ದಾರೆ.

ಮೋದಿಯನ್ನು ಹಾಡಿ ಹೊಗಳಿದ ಅನರ್ಹ ಶಾಸಕ

ನಿರುದ್ಯೋಗ ಸಮಸ್ಯೆ ಬಿಗಡಾಯಿಸಿದೆ. ಐವತ್ತು ವರ್ಷದಲ್ಲಿ ಇಷ್ಡು ನಿರುದ್ಯೋಗ ಯಾವತ್ತೂ ಇರಲಿಲ್ಲ. ಕಾಂಗ್ರೆಸ್ ಮಾಡದ್ದನ್ನು ಮಾಡಿದೀನಿ ಅಂತಾರೆ. ಏನು ಮಾಡಿದ್ದಾರೆ ಅಂತ ಹೇಳಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

'ಈ ಆಸಾಮಿ ತಲೆ ಆಡಿಸ್ಕೊಂಡ್ ಬಂದ್ರು'

ಟ್ರಂಪ್ ಮೋದಿನ ರಾಷ್ಟ್ರಪಿತ ಅಂದ್ರು. ದೇಶದ ರಾಷ್ಡ್ರಪಿತ ಮಹಾತ್ಮಾ ಗಾಂಧೀಜಿ ಒಬ್ಬರೇ. ನರೇಂದ್ರ ಮೋದಿನ ಜನ ರಾಷ್ಟ್ರಪಿತ ಅಂತ ಕರೆದಿದ್ದಾರಾ...? ಟ್ರಂಪ್ ವಿರುದ್ದ ಮೋದಿ ಅಲ್ಲೇ ಪ್ರತಿಭಟನೆ ಮಾಡ್ಬೇಕಿತ್ತು. ದೇಶಕ್ಕೊಬ್ರೇ ಮಹಾತ್ಮ ಅಂತ ಹೇಳಬೇಕಿತ್ತು. ಈ ಆಸಾಮೀ ತಲೆ ಆಡಿಸ್ಕೊಂಡು ಬಂದಿದಾರೆ ಎಂದು ಕಿಡಿ ಕಾರಿದ್ದಾರೆ.

ಇವರ ಪಕ್ಷದಲ್ಲಿ ಒಬ್ಬರೂ ಸ್ವಾತಂತ್ರ್ಯ ಹೋರಾಟಗಾರರಿಲ್ಲ. ಈಗ ವಲ್ಲಭ ಬಾಯಿ ಪಟೇಲ್ರನ್ನು ಹಿಡ್ಕೊಂಡಿದ್ದಾರೆ. ಸರ್ದಾರ್ ಪಟೇಲ್ ಒಬ್ಬಾ ಕಟ್ಟಾ ಕಾಂಗ್ರೇಸಿಗ, ಆರ್ ಎಸ್ ಎಸ್ ವಿರೋಧಿ. ಈಗ ಗಾಂಧೀಜಿ ನ ಹಿಡ್ಕೊಂಡಿದಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆಯ ಪ್ರತಿಮೆ ಮಾಡ್ತಾರೆ. ಇವರಿಗೆ ಗಾಂಧೀಜಿ ಬಗ್ಗೆ ಏನು ಗೊತ್ತು..? ಈಗ ಅಂಬೇಡ್ಕರ್‌ನ್ನು ಹಿಡ್ಕೊಂಡಿದಾರೆ ಎಂದು ಆರೋಪಿಸಿದ್ದಾರೆ.

ಸಮ-ಬೆಸ ವಾಹನ ಸಂಚಾರ ದೆಹಲಿ ಮಾಲಿನ್ಯಕ್ಕೆ ಮದ್ದೇ?

ಸಂವಿಧಾನ ಬದಲು ಮಾಡ್ತೇವೆ ಅಂದೋರಿಗೆ ನೈತಿಕತೆ ಇದೆಯಾ..? ಎಲ್ಲಾ ರಾಜಕೀಯ ಪಕ್ಷದ ಇತಿಹಾಸ ಗೊತ್ತಿರಬೇಕು. ಇಲ್ದಿದ್ರೆ ಇತ್ತಗೂ ಸೈ ಅತ್ತಗೂ ಸೈ ಆಗುತ್ತೆ. ಕಾಂಗ್ರೆಸ್ ಕಾರ್ಯಕರ್ತರು ಎಲ್ಲವನ್ನೂ ಓದ್ಕೋಬೇಕು ಎಂದು ಆರ್ ಎಸ್ ಎಸ್ ಬಗ್ಗೆ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆ. ಸಾವರ್ಕರ್ ಸೇರಿದಂತೆ ಯಾರೂ ಸ್ವಾತಂತ್ರ್ಯ ಹೊರಾಟ ಮಾಡಿದವರಲ್ಲ. ಸ್ವಾತಂತ್ರ್ಯ ಹೋರಾಟ ಮಾಡಿದ್ದು ಕಾಂಗ್ರೇಸ್ ನವರು ಎಂದು ಹೇಳಿದ್ದಾರೆ.