ಉಡು​ಪಿ(ಅ.25): ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯಂಗವಾಗಿ ಬಿಜೆಪಿ ಸಂಕಲ್ಪ ಪಾದಯಾತ್ರೆ ಮಾಡಿ ಸಂಭ್ರಮಿಸುತ್ತಿದ್ದರೆ, ಕಾಂಗ್ರೆಸ್‌ ಗಾಂಧೀಜಿ ಅವರನ್ನು ಮರೆತು, ಡಿ.ಕೆ.ಶಿವಕುಮಾರ್‌ ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಸಂಭ್ರಮಿಸುತ್ತಿದೆ ಎಂದು ರಾಜ್ಯ ಬಂದರು, ಮೀನುಗಾರಿಕೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.

ಉಡು​ಪಿ​ಯಲ್ಲಿ ಗುರುವಾರ ಗಾಂಧಿ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನೂರು ವರ್ಷಗಳಿಗೂ ಅಧಿಕ ಇತಿಹಾಸ ಇರುವ ಕಾಂಗ್ರೆಸ್‌ ತನ್ನ ಚೌಕಟ್ಟು, ನಿಯಮಗಳನ್ನು ಮೀರಿ, ವಿಚಾರಧಾರೆಗಳನ್ನು ಬಿಟ್ಟು ಡಿ.ಕೆ.ಶಿವಕುಮಾರ್‌ ಸೇರಿದಂತೆ ಅನೇಕ ಆರೋಪಿಗಳನ್ನು ಬೆಂಬಲಿಸುತ್ತಿದೆ, ಇಂತಹ ಬೇಜವಾಬ್ದಾರಿ ನಡವಳಿಕೆ ಕಾಂಗ್ರೆಸ್‌ ತನ್ನ ಕೊನೆಗಾಲವನ್ನು ತಲುಪಿದೆ ಎಂಬುದನ್ನು ತೋರಿಸುತ್ತಿದೆ ಎಂದು ವಿಶ್ಲೇ​ಷಿ​ಸಿ​ದ್ದಾರೆ.

ಉಡುಪಿ: ಶಾಸಕರಿಂದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ..!

ರಾಜ್ಯದಲ್ಲಿ ನಡೆಯುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿಯೂ ಬಿಜೆಪಿ ಮಹಾರಾಷ್ಟ್ರದಂತೆ ಪ್ರಚಂಡ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.