Asianet Suvarna News Asianet Suvarna News

Udupi: ದೇವಾಲಯಗಳ ನಗರಿ ಉಡುಪಿಯಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ!

ಉಡುಪಿ ಜಿಲ್ಲೆಯಲ್ಲಿ ಕಳ್ಳರ ಕೈಚಳಕ ಭಾರಿ ದೊಡ್ಡ ಪ್ರಮಾಣದಲ್ಲಿ ಶುರುವಾಗಿದೆ. ಮನೆಗಳು ಮಾತ್ರವಲ್ಲ ದೇವಾಲಯಗಳು ಕೂಡ ಕಳ್ಳ ಕಾಕರ ಕಾಟವನ್ನು ಅನುಭವಿಸುತ್ತಿದೆ. ಕಳೆದು ಐದು ವರ್ಷಕ್ಕೆ ಹೋಲಿಸಿದರೇ 2022 ರಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ರಾತ್ರಿ ಮನೆ ಕಳ್ಳತನ, ಹಗಲು ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗಿವೆ.

Beware of thieves in Udupi the city of temples sat
Author
First Published Dec 10, 2022, 4:10 PM IST

ಉಡುಪಿ (ಡಿ.10) : ಕೃಷ್ಣನೂರಿನಲ್ಲಿ ಕಳ್ಳರ ಕೈಚಳಕ ಭಾರಿ ದೊಡ್ಡ ಪ್ರಮಾಣದಲ್ಲಿ ಶುರುವಾಗಿದೆ. ಮನೆಗಳು ಮಾತ್ರವಲ್ಲ ದೇವಾಲಯಗಳು ಕೂಡ ಕಳ್ಳ ಕಾಕರ ಕಾಟವನ್ನು ಅನುಭವಿಸುತ್ತಿದೆ. ಪ್ರತಿದಿನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದೆ. ಕಳೆದು ಐದು ವರ್ಷಕ್ಕೆ ಹೋಲಿಸಿದರೇ 2022 ರಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ರಾತ್ರಿ ಮನೆ ಕಳ್ಳತನ, ಹಗಲು ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರ ವರದಿಯಿಂದ ತಿಳಿದುಬಂದಿದೆ.

ಕೋವಿಡ್ ಅವಧಿಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇಂದಿಗೂ ಆಮೆಗತಿಯಲ್ಲಿ ಚೇತರಿಕೆ ಕಾಣುತ್ತಿದೆ. ಆರ್ಥಿಕ ಚಟುವಟಿಕೆ ಆರಂಭವಾದ ಕೂಡಲೇ ಕಳ್ಳರು ಜಾಗೃತರಾಗಿದ್ದು ತಮ್ಮ ಕೈ ಚಳಕವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಿದ್ದಾರೆ. ಇಷ್ಟದರೂ ಜನರು ಜಾಗೃತಗೊಂಡಿಲ್ಲ. ಪೋಲಿಸ್ ಇಲಾಖೆ ಕಳ್ಳತನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ, ಸಾರ್ವಜನಿಕರ ನಿರ್ಲಕ್ಷ್ಯವೂ ಕಳ್ಳರಿಗೆ ವರದಾನವಾಗಿದೆ. ಮನೆಯಲ್ಲಿ ಬೆಲೆ ಬಾಳುವ ಒಡವೆ ಮತ್ತು ಹಣವನ್ನು ಬಿಟ್ಟು ಹೋಗಬೇಡಿ ಎಂದರೂ, ಆಭರಣ ಮತ್ತು ಹಣವನ್ನು ಬಿಟ್ಟು ಹೋದ ಪರಿಣಾಮ, ಮಾಲೀಕ ವಾಪಸಾಗುವ ವೇಳೆ ಮನೆಯಲ್ಲಿದ್ದ ಚಿನ್ನ, ಹಣ ಕಳ್ಳರ ಪಾಲಾಗಿರುತ್ತದೆ. ಹೆಚ್ಚಾಗಿ ಜನ ಪ್ರವಾಸ ಆರಂಭಿಸಿದ್ದು, ವಾಸವಿಲ್ಲದ ಮನೆಗಳು ಸುಲಭವಾಗಿ ಕಳ್ಳರ ಕಣ್ಣು ಕುಕ್ಕುತ್ತಿವೆ.

Bengaluru: ಮನೆಗಳ್ಳತನ ಮಾಡುತ್ತಿದ್ದ ಚಾಲಾಕಿ ದಂಪತಿ ಬಂಧನ

ಖಾಸಗಿ ಫೈನಾನ್ಸ್ ಸಂಸ್ಥೆಗಳ ಸಹಕಾರ: ಕಳ್ಳರು ಕದ್ದಿರುವ ವಸ್ತುಗಳನ್ನು ಖಾಸಗಿ ಫೈನಾನ್ಸ್ ಸಂಸ್ಥೆಗಳಲ್ಲಿ ಅಡಮಾನ ಇಡುತ್ತಾರೆ. ಈ ವೇಳೆ ಅವರಿಂದ ಯಾವುದೇ ದಾಖಲೆ ಪಡೆಯದೇ, ಕಡಿಮೆ ಮೊತ್ತಕ್ಕೆ ಆಭರಣಗಳನ್ನು ಕೆಲವು ಖಾಸಗಿ ಸಂಸ್ಥೆಗಳು ಅಡಮಾನ ಇರಿಸಿಕೊಂಡಿರುವ ಪ್ರಕರಣಗಳು ನಡೆದಿದೆ. ಜೊತೆಗೆ ಪೋಲಿಸ್ ತನಿಖೆಗೆ ಸಹಕಾರವನ್ನು ನೀಡುವುದಿಲ್ಲ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇವಾಲಯಗಳಲ್ಲಿ ಉತ್ಸವ, ಜಾತ್ರೆ, ಕೋಲಗಳು ಈಗ ಹೆಚ್ಚಾಗಿ ನಡೆಯುತ್ತದೆ. ದೂರದ ಪ್ರವಾಸಿಗರು ಉತ್ಸವಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಈ ವೇಳೆ ಭಕ್ತರ ಸೋಗಿನಲ್ಲಿ ಆಗಮಿಸುವ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸುತ್ತಾರೆ. ಕೃಷ್ಣ ಮಠದಲ್ಲಿಯೂ ಪ್ರವಾಸಿಗರು ಹಣ ಮತ್ತು ಚಿನ್ನಾಭರಣವನ್ನು ಕಳ್ಳತನ ನಡೆದ ಪ್ರಕರಣ ದಾಖಲಾಗಿದ್ದವು. ಇತ್ತೀಚಿಗೆ ಕೃಷ್ಣ ಮಠದಲ್ಲಿ ಕಳ್ಳನೊಬ್ಬನನ್ನು ಜನರೇ ಹಿಡಿದು ಪೊಲೀಸರಿಗೆ ಕೊಟ್ಟಿದ್ದಾರೆ.

 

ನಿರ್ಮಾಣ ಹಂತದ ಕಟ್ಟಡದಲ್ಲಿ ಅಡಗಿ ಮನೆಗಳಿಗೆ ಕನ್ನ!

ಪ್ರವಾಸಿಗರು ಎಚ್ಚರದಿಂದಿರಿ: ಉಡುಪಿ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದರೂ ಪೋಲಿಸರು ಪ್ರಕರಣಗಳನ್ನು ಭೇದಿಸುತ್ತಿದ್ದಾರೆ. ತಮಿಳುನಾಡು ಸೇರಿದಂತೆ ಹೊರ ರಾಜ್ಯದ ಮತ್ತು ಹೊರ ಜಿಲ್ಲೆಯ ಖದೀಮರನ್ನು ಬಂಧಿಸಿದ್ದಾರೆ. ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು ಎಲ್ಲಿಯೂ ಮೈ ಮರೆತು ಓಡಾಡಬಾರದು. ತಮ್ಮ ವಸ್ತುಗಳು ಹಾಗು ಚಿನ್ನಾಭರಣಗಳ ಮೇಲೆ ನಿಗಾ ಇಟ್ಟುಕೊಳ್ಳಬೇಕು. ಯಾರಾದರೂ ಅನುಮಾನಸ್ಪದ ವ್ಯಕ್ತಿಗಳನ್ನು ಗಮನಿಸಿದರೇ ಹತ್ತಿರದ ಪೋಲಿಸ್ ಠಾಣೆ ಅಥವಾ ಪ್ರವಾಸಿ ಸ್ಥಳದಲ್ಲಿ ಕರ್ತವ್ಯ ನಿರತ ಪೋಲಿಸರಿಗೆ ಮಾಹಿತಿ ನೀಡಿ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಹೇಳಿದ್ದಾರೆ.

ಕಳೆದ ಐದು ವರ್ಷದಲ್ಲಿ ಜಿಲ್ಲೆಯಲ್ಲಿ ಉಪ ವಿಭಾಗವಾರು ದಾಖಲಾದ ಪ್ರಕರಣಗಳು

ಉಡುಪಿ ಉಪವಿಭಾಗ

ವರ್ಷ                           2017    2018    2019    2020    2021    2022

ಮನೆ ಕಳ್ಳತನ ಹಗಲು    3           3          5         2          7           10

ಮನೆ ಕಳ್ಳತನ ರಾತ್ರಿ       32         36       32       17         35         38

ಕಳ್ಳತನ                        48         46        55       35         56         80

ದರೋಡೆ                      11         15        8        16          7          10

ಕುಂದಾಪುರ ಉಪವಿಭಾಗ

ವರ್ಷ                           2017    2018    2019    2020    2021    2022

ಮನೆ ಕಳ್ಳತನ ಹಗಲು    2          2          5          1          0          2

ಮನೆ ಕಳ್ಳತನ ರಾತ್ರಿ      13        24         17        11        13        20

ಕಳ್ಳತನ                        29       41         57         15        28       32

ದರೋಡೆ                     7          16         5           7          3         6

ಕಾರ್ಕಳ ಉಪವಿಭಾಗ

ವರ್ಷ                           2017    2018    2019    2020    2021    2022

ಮನೆ ಕಳ್ಳತನ ಹಗಲು    5          1          2           0         6          2

ಮನೆ ಕಳ್ಳತನ ರಾತ್ರಿ       24        25       14         14        21        29

ಕಳ್ಳತನ                        26        37        52         17       19        34

ದರೋಡೆ                      8          9         8            6         1          3
 

Follow Us:
Download App:
  • android
  • ios