ಶಿವಸೇನೆಯಿಂದ ಬಾಳ ಠಾಕ್ರೆ ಆಶಯ ಮಣ್ಣುಪಾಲು: ಶೋಭಾ
ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಶಿವಸೇನೆಗೆ ಈಗಲೂ ಅವಕಾಶ ಇದೆ. ಅದನ್ನು ಬಿಟ್ಟು ಕಾಂಗ್ರೆಸ್ ಅಥವಾ ಎನ್‌ಸಿಪಿ ಜೊತೆ ಕೈಜೋಡಿಸಿದರೆ ಯಾವ ಆಶಯದಿಂದ ಬಾಳ ಠಾಕ್ರೆಯವರು ಶಿವಸೇನೆಯನ್ನು ಹುಟ್ಟು ಹಾಕಿದ್ದರೂ ಆ ಆಶಯವೇ ಮಣ್ಣುಪಾಲಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ(ನ.13): ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಶಿವಸೇನೆಗೆ ಈಗಲೂ ಅವಕಾಶ ಇದೆ. ಅದನ್ನು ಬಿಟ್ಟು ಕಾಂಗ್ರೆಸ್ ಅಥವಾ ಎನ್‌ಸಿಪಿ ಜೊತೆ ಕೈಜೋಡಿಸಿದರೆ ಯಾವ ಆಶಯದಿಂದ ಬಾಳ ಠಾಕ್ರೆಯವರು ಶಿವಸೇನೆಯನ್ನು ಹುಟ್ಟು ಹಾಕಿದ್ದರೂ ಆ ಆಶಯವೇ ಮಣ್ಣುಪಾಲಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಮತ್ತು ಶಿವಸೇನೆ 3 ದಶಕಗಳಿಂದ ಕೊಡು-ಕೊಳ್ಳುವ ದೋಸ್ತಿಗಳಾಗಿದ್ದೇವೆ, ಜೊತೆಯಾಗಿ ಹಿಂದುತ್ವದ ಆಧಾರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ, ಗೆದ್ದಿದ್ದೇವೆ. ಕೇಂದ್ರದಲ್ಲಿಯೂ ಪಾಲುದಾರರಾಗಿದ್ದೇವೆ. ಆದರೂ ಶಿವಸೇನೆ ಯಾಕೆ ಹೀಗೆ ಮಾಡುತ್ತಿಗೆ ಗೊತ್ತಿಲ್ಲ ಎಂದು ಸಂಸದೆ, ಇನ್ನೂ ಅವಕಾಶ ಇದೆ, ಮಹಾರಾಷ್ಟ್ರದಲ್ಲಿ ಪಾಲುದಾರರಾಗಿ ಸರ್ಕಾರ ರಚಿಸಬೇಕು, ಮುಂದೆಯೂ ಪಾಲುದಾರರಾಗಿ ಮುಂದುವರಿಯಬೇಕು ಎಂದು ಆಶಿಸಿದ್ದಾರೆ.
ಬ್ಲೂಫ್ಲಾಗ್ ವಿಸ್ತರಣೆಗೆ ಯೋಜನೆ:
ಪ್ರಧಾನಿ ಮೋದಿ ಅವರು ಸ್ವತಃ ಚೆನ್ನೈಯಲ್ಲಿ ಬೀಚ್ ಸ್ವಚ್ಛ ಮಾಡುವ ಮೂಲಕ ದೇಶದ ಬೀಚುಗಳ ಸ್ವಚ್ಛತೆಯ ಯೋಜನೆಗೆ ಚಾಲನೆ ನೀಡಿದ್ದಾರೆ. ಇಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಅವರು ಚಾಲನೆ ನೀಡಿದ್ದಾರೆ. ಇದು ಕೇವಲ 1 ದಿನದ ಕಾರ್ಯಕ್ರಮವಲ್ಲ, ದೇಶದ ಎಲ್ಲಾ ಬೀಚುಗಳನ್ನು ಸ್ವಚ್ಛಗೊಳಿಸುವ ಯೋಜನೆಯಾಗಿದೆ ಎಂದಿದ್ದಾರೆ.
ಕೊಡಗು: ರಸ್ತೆ ದಾಟುತ್ತಿದ್ದ ವೃದ್ಧೆ ಮೇಲೆ ಹರಿದ ಬಸ್, ಸ್ಥಳದಲ್ಲೇ ಸಾವು
ಈಗಾಗಲೇ ಕಾಪು ಬೀಚಿಗೆ ಬ್ಲೂಫ್ಲಾಗ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ 8 ಕೋಟಿ ರು. ಅನುದಾನ ಬಂದಿದೆ. ಇನ್ನೂ 2 ಕೋಟಿ ರು. ಬರಲಿದೆ. ಈ ಯೋಜನೆಯನ್ನು ಪಡುಕರೆ ಬೀಚಿಗೂ ವಿಸ್ತರಿಸಲು ಪ್ರಸ್ತಾಪ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ ಎಂದಿದ್ದಾರೆ.
ಪ್ಲಾಸ್ಟಿಕ್ ಕ್ಯಾನ್ ತ್ಯಾಜ್ಯದಿಂದ 'ಸುಲಭ್' ಶೌಚಾಲಯ