ಪುಟ್ಟಕ್ಕನ ಮಕ್ಕಳು ಧಾರವಾಹಿಲ್ಲಿ ಸ್ನೇಹಾಳಿಗೆ ಕಂಠಿ 2ನೇ ಬಾರಿಗೆ ತಾಳಿ ಕಟ್ಟಿದ್ದಾನೆ. ಇದರ ಬೆನ್ನಲ್ಲೇ ಸ್ನೇಹಾ-ಕಂಠಿಯ ಹಳೆಯ ಬೆಡ್‌ಡರೂಂ ಸೀನ್‌ಗಳ ವಿಡಿಯೋ ವೈರಲ್‌ ಆಗುತ್ತಿದೆ.

ಬೆಂಗಳೂರು (ಸೆ.20): ಕನ್ನಡದ ಕಿರುತೆರೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿದ ಜೀ ಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪುಟ್ಟಕ್ಕನ ಮಗಳು ಸ್ನೇಹಾಳಿಗೆ ಕಂಠಿ 2ನೇ ಬಾರಿಗೆ ತಾಳಿ ಕಟ್ಟಿದ್ದಾನೆ. ನಾನು ಉತ್ತಮವಾಗಿ ಓದಿ ಐಎಎಸ್‌ ಅಧಿಕಾರಿ ಆಗ್ತೀನೆಂದು ಹೇಳುತ್ತಿದ್ದ ಸ್ನೇಹಾಗೆ ಬಲವಂತವಾಗಿ ತಾಳಿ ಕಟ್ಟಿದ್ದ ಕಂಠಿ, ಈಗ ಅವಳ ಒಪ್ಪಿಗೆಪಡೆದುಕೊಂಡೇ ತಾಳಿ ಕಟ್ಟಿದ್ದಾನೆ. ಇದರ ಬೆನ್ನಲ್ಲಿಯೇ ಸ್ನೇಹಾ ಮತ್ತು ಕಂಠಿಯ ಹಳೆಯ ಬೆಡ್‌ಡರೂಂ ಸೀನ್‌ಗಳ ಫೋಟೋ ಮತ್ತು ವಿಡಿಯೋ ಹರಿದಾಡುತ್ತಿವೆ.

ಕನ್ನಡ ಕಿರುತೆರೆಯ ನಂಬರ್‌ ಒನ್‌ ಸ್ಥಾನವನ್ನು ಪಡೆದ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೂಡ ಒಂದಾಗಿದೆ. ಇದನ್ನು ಜನರು ಸಂಜೆ ವೇಳೆ ಟಿವಿಯಲ್ಲಿ ನೋಡುವುದು ಮಾತ್ರವಲ್ಲದೇ ಜೀ5 ಒಟಿಟಿ ಮೂಲಕ ಮುಗಿದು ಹೋದ ಅಧ್ಯಾಯಗಳನ್ನು ಮೊಬೈಲ್‌ನಲ್ಲಿ ನೋಡುತ್ತಾರೆ. ಪ್ರತಿನಿತ್ಯ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಧಾರವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಕೂಡ ಒಂದಾಗಿದೆ. ಇಲ್ಲಿ ಗಂಡ ಬಿಟ್ಟು ಹೋದರೂ 3 ಹೆಣ್ಣು ಮಕ್ಕಳನ್ನು ಬೆಳೆಸಿದ ಪುಟ್ಟಕ್ಕ, ಆಕೆಯ ಮಕ್ಕಳ ಮದುವೆ ಮಾಡಿಕೊಡುವಾಗ ಪಡುವ ಕಷ್ಟಗಳನ್ನು ತೋರಿಸಲಾಗಿದೆ. ಮಕ್ಕಳು ವಯಸ್ಸಿಗೆ ಬಂದು ಪ್ರೀತಿ ಪ್ರೇಮದಲ್ಲಿ ಸಿಲುಕಿದ ಬಗ್ಗೆ ದೃಶ್ಯಗಳು ಕೂಡ ಧಾರಾವಾಹಿ ಪ್ರಿಯರ ಮನಸ್ಸನ್ನು ಸೆಳೆದಿದ್ದವು. ಇದರಲ್ಲಿ ಸ್ನೇಹಾ- ಕಂಠಿ ಲವ್‌ಸ್ಟೋರಿ ಹಾಗೂ ಮದುವೆ ಕೂಡ ಹೆಚ್ಚು ವೀಕ್ಷಣೆ ಪಡೆದಿತ್ತು.

ರಾಮಾಚಾರಿ ಧಾರವಾಹಿ: 'ಚಾರು'ಗೆ ಅಳುವ ಪಾತ್ರ ಬೇಡ, ಸರಪಟಾಕಿ ಪಾತ್ರ ಕೊಡಿ! ಅಭಿಮಾನಿಗಳ ಡೈರೆಕ್ಟ್‌ ಹಿಟ್

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಾಯಕ ಕಂಠಿ ಅಂದ್ರೆ ಸೀರಿಯಲ್ ಪ್ರಿಯರಿಗೆ ಖಂಡಿತಾ ಅಚ್ಚುಮೆಚ್ಚು. ಮಿಸ್ಸು, ಮಿಸ್ಸು ಅಂತಾ ಸ್ನೇಹ ಹಿಂದೆ ಬಿದ್ದಿರುವ ಕಂಠಿ, ಶ್ರೀ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ. ಪುಟ್ಟಕ್ಕನ ಮಕ್ಕಳು ಸೀರಿಯಲ್ (Puttakkana Makkalu Serial) ಖ್ಯಾತಿಯ ನಟ ಶ್ರೀ, ಕಂಠಿ ಸದ್ಯ ಕಿರುತೆರೆಯ ಜನಪ್ರಿಯ ನಟ ಜೊತೆಗೆ ಹೆಂಗಳೆಯರ ಫೆವರೆಟ್ ಹೀರೋ ಆಗಿದ್ದಾನೆ. ಮಿಸ್ಸು ಮಿಸ್ಸು ಎನ್ನುತ್ತಾ ಸ್ನೇಹಾ ಹಿಂದೆ ಬಿದ್ದು, ಸುಳ್ಳು ಹೇಳಿ ಪ್ರೀತಿಸಿ, ಆಕೆಯನ್ನು ಬಿಟ್ಟಿರಲಾಗದೆ ಹೇಳದೇ ಕೇಳಿ ಮದುವೆಯಾಗಿ, ಈಗ ಒಪ್ಪಿಗೆ ಪಡೆದು ಎರಡನೇ ಬಾರಿಗೆ ತಾಳಿ ಕಟ್ಟಿದ್ದಾನೆ.

ಐಎಎಸ್‌ ಕನಸು ನನಸಾಗುತ್ತಾ, ಇಲ್ಲ ಕನಸಾಗಿಯೇ ಉಳಿಯುತ್ತಾ.! 
ಇನ್ನು ಕಂಠಿ ಹಾಗೂ ಸ್ನೇಹಾ ಪರಸ್ಪರ ಒಪ್ಪಿಗೆಯಿಂದಲೇ ಮದುವೆ ಆದಂತಾಗಿದೆ. ಇನ್ನು ಅತ್ತೆ ಬಂಗಾರಮ್ಮನ ಮನೆಯನ್ನು ತನ್ನ ಮನೆಯೆಂದು ತಿಳಿದಿರುವ ಸ್ನೇಹಾ ತನ್ನ ಜೀವನದ ಕನಸಾದ ಐಎಎಸ್‌ ಓದುತ್ತಾಳಾ ಎನ್ನುವುದು ವೀಕ್ಷಕರ ಕುತೂಹಲವಾಗಿದೆ. ಕಂಠಿಯ ಅಜ್ಜಿ ಮನೆಗೆ ಬಂದಿದ್ದು, ಇವರಿಬ್ಬರಿಗೂ ಸಂಸಾರವನ್ನು ಆರಂಭಿಸಲು ಫಸ್ಟ್‌ನೈಟ್‌ ಏರ್ಪಡಿಸುತ್ತಾಳೆ. ನಂತರ ಸ್ನೇಹಾಗೆ ಮಗುವಾದರೆ ಅವಳ ಓದಿನ ಕನಸು ಕನಸಾಗಿಯೇ ಉಳಿಯಲಿದೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.

View post on Instagram

ಭರ್ಜರಿ ಬ್ಯಾಚುಲರ್ಸ್‌ ಗೋಪಿಕೆಯರ ನಡುವೆ ಕೃಷ್ಣಲೋಲನಾದ ಕುರಿಗಾಹಿ ಹನುಮಂತ
ವೀಡಿಯೋದ ಮೂಲ ಎಲ್ಲಿದೆ ಗೊತ್ತಾ? 
ಸ್ನೇಹಾ ಮನಃಪೂರ್ವಕವಾಗಿ ಒಪ್ಪಿಗೆ ನೀಡಿದ್ದರೂ ತನ್ನ ತಾಯಿ ಪುಟ್ಟಕ್ಕನಿಗೋಸ್ಕರ ಮತ್ತೊಮ್ಮೆ ಮನೆಯಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ತಾಯಿಯೇ ಹೇಳಿದಳೆಂದು ಸಂಸಾರವನ್ನೂ ಆರಂಭಿಸುತ್ತಾಳೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಇದರ ನಡುವೆ ಕೆಲವರು, ಸ್ನೇಹಾ ಹಾಗೂ ಕಂಠಿಯ ನಡುವೆ ನಡೆದ ಕಪಲ್‌ ಮೇಕ್ ಓವರ್ ಮತ್ತು ಪರಿಕಲ್ಪನೆಯ ಚಿತ್ರೀಕರಣದ ವೀಡಿಯೋವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಕಳೆದ ವರ್ಷ ಸ್ವತಃ ಸ್ನೇಹಾ (ಸಂಜನಾ ಬುರ್ಲಿ) ತನ್ನ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದ ವಿಡಿಯೋವನ್ನು ಪುನಃ ಹಂಚಿಕೊಂಡಿದ್ದಾರೆ. ಇನ್ನು ಈ ವೀಡಿಯೋದಲ್ಲಿ ಇಬ್ಬರೂ ಪರಸ್ಪರ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಬೆಡ್‌ರೂಮ್‌ ಸೀನ್‌ ಪಡ್ಡೆಗಳಿಗೆ ತುಸು ಹೆಚ್ಚೇ ಉದ್ರೇಕವನ್ನು ನೀಡುತ್ತದೆ.