ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಒಂದು ಸಮಯದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಅರ್ಯವರ್ಧನ್- ಅನು ಸಿರಿಮನೆ ಪರಿಚಯವಾದ ರೀತಿ, ಕೆಲಸ ಗಿಟ್ಟಿಸಿಕೊಂಡ ಶೈಲಿ ಎಲ್ಲವೂ ವೀಕ್ಷಕರ ಗಮನ ಸೆಳೆಯಿತು. ಇಬ್ಬರು ಪ್ರೀತಿಸುವುದು ಖಚಿತ ಆಂತ ಗೊತ್ತಿತ್ತು. ಆದರೆ ಆರ್ಯವರ್ಧನ್‌ಗೆ ಮದುವೆ ಆಗಿದೆ, ಮೊದಲ ಹೆಂಡತಿ ಹೆಸರೇ ರಾಜನಂದಿನಿ ಎಂಬುದಾಗಿ ಒಂದೊಂದೇ ಸತ್ಯ ಹೊರಬರುತ್ತಿವೆ. 

'ಜೊತೆ ಜೊತೆಯಲಿ' ರಾಜನಂದಿನಿ ಪಾತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಹಾಟ್‌ ನಟಿ? 

ಅರ್ಯ ಹಳೇ ಜೀವನದ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳುತ್ತಿದ್ದ ಅನು ಸಿರಿಮನೆ, ಇದೀಗ ಅರ್ಯವರ್ಧನ್ ಮನೆ ಮಗನಲ್ಲ ಅಳಿಯ, ಇಡೀ ಆಸ್ತಿ ರಾಜನಂದಿನಿ ಹಾಗೂ ಹರ್ಷವರ್ಧನ್‌ಗೆ ಸೇರಿದ್ದು, ನಿಜವಾದ ಹೆಸರು ಸಂಜಯ್‌ ಪಾಟೀಲ್‌ ಎಂದು ತಿಳಿದು ಕೊಂಡಿದ್ದಾಳೆ. ಆರ್ಯ ಅಸಲಿ ಜೀವನದ ಬಗ್ಗೆ ತಿಳಿದುಕೊಳ್ಳಲೇ ಬೇಕು ಎಂದು ಜೇಂಡೆ ಸಹಾಯ ಪಡೆದುಕೊಂಡು, ಸೌದತ್ತಿ ಕಡೆ ಹೊರಟಿದ್ದಾಳೆ.

ಅರ್ಯವರ್ಧನ್ ಬಾಲ್ಯ ಹೇಗಿತ್ತು, ಜೇಂಡೆ ಜೊತೆ ಸ್ನೇಹ ಬೆಳೆದದ್ದು ಹೇಗೆ ಎಂದು ತಿಳಿದುಕೊಂಡ ಅನುಗೆ ರಾಜನಂದಿನಿ ಪಾತ್ರ ಎಂಥದ್ದು, ಸಂಜಯ್ ಪಾಟೀಲ್‌ ಆರ್ಯವರ್ಧನ್ ಅಗಿ ಬದಲಾಗಿದ್ದು ಯಾಕೆ? ಸಂಜಯ್‌ಗೆ ತಂದೆ ತಾಯಿ ಇದ್ದಾರಾ? ಎಂದು ಕಾಡುತ್ತಿರುವ ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ. 

ಸೇಫ್ಟಿ ಪ್ಯಾಡ್ ಕೊಡೋ ಹುಡುಗನ ಪ್ರೀತಿಸಿ, ಕಾಂಡೋಮ್ ಕೊಡೋನನ್ನಲ್ಲ ಎಂದ ನಟಿ 

ರಾಜನಂದಿನಿ ಪಾತ್ರಕ್ಕೆ ರಾಧಾ ಮಿಸ್:
ವೀಕ್ಷಕರಿಗೆ ರಾಜನಂದಿನಿ ಪಾತ್ರ ಪರಿಚಯ ಮಾಡಿಕೊಡುವ ಸಮಯ ಬಂದಿದೆ. ಸಂಜಯ್ ಪಾಟೀಲ್ ಆರ್ಯವರ್ಧನ್‌ ಆಗಿ ಬದಲಾದ ಮೇಲೆ ರಾಜನಂದಿನಿ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಕೆಲವು ದಿನಗಳಿಂದೆ 'ನಿನ್ನಿಂದಲೇ' ಚಿತ್ರದ ನಟಿ ಎರಿಕಾ ಫರ್ನಾಂಡಿಸ್‌ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ನಿರ್ದೇಶಕರು ಆರೂರು ಜಗದೀಶ್‌ ಇನ್ನೂ ಪಾತ್ರದ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದರು. ಆದರೆ, ಕೆಲ ಮೂಲಗಳ ಪ್ರಕಾರ ರಾಜನಂದಿನಿ ಪಾತ್ರಕ್ಕೆ ರಾಧಾ ರಮಣ ಖ್ಯಾತಿಯ ರಾಧಾ ಮಿಸ್ ಅಲಿಯಾಸ್ ಕಾವ್ಯಾ ಗೌಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳುಕೇಳಿ ಬರುತ್ತಿದೆ.

ಕಾವ್ಯಾ ಗೌಡ ಮತ್ತು ಆರೂರು ಜಗದೀಶ್ ಈ ವಿಚಾರದ ಬಗ್ಗೆ ಎಲ್ಲಿಯೂ ಖಚಿತ ಪಡಿಸಿಲ್ಲ. ಸೀರಿಯಲ್ ನೋಡಿಯೇ ಈ ಪಾತ್ರಕ್ಕೆ ಯಾವ ನಟಿ ಜೀವ ತುಂಬುತ್ತಾರೆ ಎಂಬುದನ್ನು ಕಾದು ನೋಡಬೇಕು.