Asianet Suvarna News Asianet Suvarna News

'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಇನ್ಸ್‌ಪೆಕ್ಟರ್ ದೇವ್ ನಿಜಕ್ಕೂ ಯಾರು ಗೊತ್ತಾ?

ನೋಡೋಕೆ ಹೀರೋ ಆದರೆ ಮಾಡುತ್ತಿರುವುದು ವಿಲನ್ ಪಾತ್ರ. ಹಿಟ್ಲರ್ ಕಲ್ಯಾಣ ದೇವ್ ಯಾರು ಗೊತ್ತಾ? 

Zee Kannada Hitler Kalyana fame Shaurya Shashank Umber talks about cop dev role vcs
Author
Bangalore, First Published Sep 26, 2021, 2:43 PM IST

ಜೀ ಕನ್ನಡ(Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ(Hitler Kalyana) ಧಾರಾವಾಹಿಯ ಜನಪ್ರಿಯತೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ಪಾತ್ರಧಾರಿಗೂ ಪ್ರಾಮುಖ್ಯತೆ ನೀಡಲಾಗಿದೆ. ಸಂಭಾಷಣೆ ಹಾಗೂ ಸಂಗೀತ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಟ ದಿಲೀಪ್‌ ರಾಜ್‌ರನ್ನು ಸಾಲ್ಟ್ ಆಂಡ್ ಪೆಪ್ಪರ್(Salt and Pepper) ಲುಕ್‌ನಲ್ಲಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಇನ್‌ಸ್ಪೆಕ್ಟರ್ ದೇವ್‌ ಎಲ್ಲರ ಗಮನ ಸೆಳೆದಿದ್ದಾರೆ.  

ಇನ್‌ಸ್ಪೆಕ್ಟರ್ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಶೌರ್ಯ ಶಶಾಂಕ್ ಉಂಬ್ರೆ(Shaurya Shashank Umbre). ಈಟೈಮ್ಸ್‌ ಟಿವಿ ಜೊತೆ ಮಾತನಾಡಿರುವ ದೇವ್ ತಮ್ಮ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ. ''ಆರಂಭದಿಂದಲೂ ನನ್ನನ್ನು ಹಿಟ್ಲರ್ ಕಲ್ಯಾಣ ಪ್ರಾಜೆಕ್ಟ್‌ ತುಂಬಾ ಪ್ರೇರಿಸಿದೆ. ನಾನು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಎಲ್ಲಾ ಶೋಗಳಲ್ಲಿ ಇರುವ ಹಾಗೆ ನಾನಲ್ಲ, ನಾನೊಬ್ಬ ಕೆಟ್ಟ ಪೊಲೀಸ್(Police) ಅಧಿಕಾರಿ. ನಾನು ಮದುವೆ ಆಗಿದ್ದರೂ ಪ್ಲೇ ಬಾಯ್ ರೀತಿ ವರ್ತಿಸುವೆ.  ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೆಲಸ ಮಾಡುತ್ತಿರುತ್ತೀನಿ. ಈ ಪಾತ್ರಕ್ಕೆ ನಾನು ನನ್ನ ಸಂಪೂರ್ಣ ಲುಕ್ ಬದಲಾಯಿಸಿಕೊಂಡಿರುವೆ. ನನ್ನಲ್ಲಿ ತುಂಬಾ ದೊಡ್ಡ ಬದಲಾವಣೆ ಆಗಿದೆ. ನನ್ನ ಗುಂಗರು ಕೂದಲನ್ನು ಕತ್ತಿರಿಸಿ ಹೇರ್ ಸೆಟ್ ಮಾಡಿಸಿರುವೆ. ಸ್ಟೈಲಿಶ್ ವರ್ಷನ್ ಆಫ್ ಪೊಲೀಸ್ ಲುಕ್ ಪ್ರಯತ್ನಿಸಬೇಕು ಎಂಬುದು ನನ್ನ ಆಸೆ' ಎಂದು ಶೌರ್ಯ ಶಶಾಂಕ್ ಮಾತನಾಡಿದ್ದಾರೆ. 

ಹಿಟ್ಲರ್ ಕಲ್ಯಾಣದ ಎಡವಟ್ಟು ಸುಂದರಿ ಮಲೈಕಾ ವಸುಪಾಲ್‌

'ಈ ಹಿಂದೆ ನಾನು ಕಾಣಿಸಿಕೊಂಡಿರುವ ಪಾತ್ರಗಳಿಗಿಂತ ಇದು ತುಂಬಾ ವಿಭಿನ್ನವಾಗಿದೆ. ಫ್ಯಾಮಿಲಿ  ಅವರ ಮುಂದೆ ತುಂಬಾನೇ ಸೈಲೆಂಟ್ ಆಗಿರುವ ಹುಡುಗ ಬೇರೆ ಸಮಯದಲ್ಲಿ ಪ್ಲೇ ಬಾಯ್(Play Boy). ಡ್ಯೂಟಿ ಸಮಯ ಹೊರತುಪಡಿಸಿದಾಗ ಮಾತ್ರ ಅವನ ನಿಜವಾದ ಮುಖ ರಿವೀಲ್ ಆಗುವುದು. ದೇವ್‌ಗೆ ಕಾನೂನು(Law) ಸೂಪರ್ ಆಗಿ ಗೊತ್ತಿದೆ ಹೀಗಾಗಿ ಅವನ ಎಲ್ಲಾ ತಪ್ಪುಗಳನ್ನು ಮುಚ್ಚು ಹಾಕುತ್ತಾನೆ. ತುಂಬಾ ಶೇಡ್ ಕಾಣಿಸುತ್ತದೆ. ಎಜಿ ಜೊತೆ ಒಂದು ರೀತಿ, ಲೀಲಾ ಜೊತೆ ಒಂದು ರೀತಿ, ಕೆಲಸದಲ್ಲಿದ್ದಾಗ ಒಂದು ರೀತಿ ಹೀಗೆ ಬದಲಾವಣೆ ಇರುತ್ತದೆ' ಎಂದಿದ್ದಾರೆ.

'ಹಿಟ್ಲರ್ ಕಲ್ಯಾಣ' ಮೆಹಂದಿ ಕಾರ್ಯಕ್ರಮದಲ್ಲಿ ನಟಿ ನಮ್ರತಾ ಗೌಡ ಡ್ಯಾನ್ಸ್!

'ವೃತ್ತಿ(career) ಜೀವನದಲ್ಲಿ ಎಲ್ಲರಿಗೂ ಕಷ್ಟ ಇರುತ್ತದೆ. ನಿಜ ಹೇಳಬೇಕು ಅಂದ್ರೆ ನಾನು ಈಗಲೂ ನನ್ನು ಕಷ್ಟ ಪಡುತ್ತಿರುವ ಕಲಾವಿದ ಎಂದು ಪರಿಗಣಿಸುವೆ. ಕೆಲವೊಮ್ಮೆ ಮೇಕರ್‌ಗಳ ನಿರ್ಧಾರವನ್ನು ಕೂಡ ಪರಿಗಣಿಸಬೇಕಾಗುತ್ತದೆ. ಕೆಲವೊಂದು ಪಾತ್ರಗಳಿಗೆ ಅದಕ್ಕೆ ತಕ್ಕ ಹಾಗೆ ಮುಖ ಹುಡುಕುತ್ತಾರೆ. ಅದನ್ನು ನಾವು ಗೌರವಿಸಬೇಕು. ನನಗೆ ಅವಕಾಶಗಳು ಸಿಕ್ಕರೆ ಬ್ಯಾಕ್ ಟು ಬ್ಯಾಕ್ ಸಿಗುತ್ತದೆ ಇಲ್ಲವಾದರೆ ಯಾವುದೂ ಇರುವುದಿಲ್ಲ. ಸರಿಯಾದ ಸಮಯ ಹಾಗೂ ಅವಕಾಶ(Opportunity) ಮುಖ್ಯವಾಗುತ್ತದೆ.  ಲಕ್ ನಿಜ ವರ್ಕೌಟ್ ಆಗುತ್ತದೆ. ನನಗೆ ಬರುವ ಪ್ರತಿಯೊಂದು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವೆ. ಯಾವ ಪಾತ್ರವಾದರೇನು? ವಿಲನ್ ಅಥವಾ ಹೀರೋ ಎರಡಕ್ಕೂ ಸೈ.  ನೆಗೆಟಿವ್ ಕ್ಯಾರೆಕ್ಟರ್‌ಗೆ ಪ್ರಮುಖ್ಯತೆ ಹೆಚ್ಚು ನೀಡುವೆ ಏಕೆಂದರೆ ಆಕ್ಟಿಂಗ್(Acting) ಹೆಚ್ಚಿರುತ್ತದೆ' ಎಂದು ಶೌರ್ಯ ಮಾತನಾಡಿದ್ದಾರೆ.

 

Follow Us:
Download App:
  • android
  • ios