Asianet Suvarna News

ಮುಕ್ತಾಯವಾಗುತ್ತದೆ 'ಬ್ರಹ್ಮಗಂಟು' ಧಾರಾವಾಹಿ; ನಟ ಭರತ್ ಭಾವುಕ ಪೋಸ್ಟ್!

ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿರುವ ಧಾರಾವಾಹಿಗೆ ಬ್ರೇಕ್. ಭಾವುಕ ಪತ್ರ ಬರೆದ ನಟ ಭರತ್ ಬೋಪಣ್ಣ. 

Zee kannada Brahmagantu daily soap to go off air vcs
Author
Bangalore, First Published Jul 8, 2021, 2:32 PM IST
  • Facebook
  • Twitter
  • Whatsapp

ಸುಮಾರು ನಾಲ್ಕು ವರ್ಷಗಳಿಂದ ಜೀ ಕನ್ನಡ ವಾಹಿನಿಯ ವೀಕ್ಷಕರನ್ನು ಮನೋರಂಜಿಸುತ್ತಿರುವ 'ಬ್ರಹ್ಮಗಂಟು' ಧಾರಾವಾಹಿ ಮುಕ್ತಾಯವಾಗುತ್ತಿದೆ. ಒಂದು ಸಾವಿರಕ್ಕೂ ಹೆಚ್ಚು ಎಪಿಸೋಡ್ ಪ್ರಸಾರ ಹಾಗೂ ವಾರದಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆದಿರುವ ಹೆಗ್ಗಳಿಕೆ ಈ ಧಾರಾವಾಹಿಯದ್ದು. ಇದೀಗ ಪ್ರಸಾರ ನಿಲ್ಲಿಸುತ್ತಿರುವುದ ಬಗ್ಗೆ ನಟ ಭರತ್ ಬೊಪಣ್ಣ ಬರೆದುಕೊಂಡಿದ್ದಾರೆ. 

4 ವರ್ಷ ಪೂರೈಸಿದ ಬ್ರಹ್ಮಗಂಟು ಧಾರಾವಾಹಿ! 

'ಬ್ರಹ್ಮಗಂಟು ಧಾರಾವಾಹಿಯ ಕೊನೆ ಶೆಡ್ಯೂಲ್ ಮುಗಿಸಿರುವೆ. ನಾಲ್ಕಕ್ಕೂ ಹೆಚ್ಚು ವರ್ಷಗಳ ಜರ್ನಿ, ಸಾವಿರಕ್ಕೂ ಹೆಚ್ಚಿನ ಎಪಿಸೋಡ್ ಈಗ ಅಂತ್ಯವಾಗುತ್ತಿದೆ. ಇದೊಂದು ಅದ್ಭುತ ಪಯಣ. ಈ ಪ್ರಾಜೆಕ್ಟ್‌ ನನಗೆ ಸದಾ ಸ್ಪೆಷಲ್ ಆಗಿರುತ್ತದೆ.  ಶ್ರುತಿ ನಾಯ್ಡು, ರಮೇಶ್ ಇಂದಿರಾ ಸರ್ ಹಾಗೂ ಜೀ ಕನ್ನಡ ವಾಹಿನಿ ನನ್ನನ್ನು ನಂಬಿ ಈ ಅವಕಾಶ ಮತ್ತು ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದಗಳು. ನೀವು ನನ್ನ ಮೇಲಿಟ್ಟ ಭರವಸೆ ಹಾಗೂ ನಂಬಿಕೆಯನ್ನು ನಾನೂ ಪೂರ್ತಿಗೊಳ್ಳಿಸಿರುವೆ, ಎಂದು ಭಾವಿಸುತ್ತೇನೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಸಹ ಕಲಾವಿದರಿಗೂ ಧನ್ಯವಾದಗಳು. ಅದರಲ್ಲೂ ನಿರ್ದೇಶಕ ಪ್ರತಾಪ್, ತಂತ್ರಜ್ಞರು, ಲೈಟ್ ಆಫೀಸರ್‌ ನಿಮ್ಮೆಲ್ಲರ ಸಪೋರ್ಟ್‌ನಿಂದ ಈ ಧಾರಾವಾಹಿ ಯಶಸ್ವಿಯಾಗಿ ಪ್ರಸಾರವಾಗಿದೆ. ನಮಗೆ ಇಷ್ಟೊಂದು ಪ್ರೀತಿ ತೋರಿಸಿದ ಕರ್ನಾಟಕದ ಜನರಿಗೆ ಧನ್ಯವಾದಗಳು. ಮತ್ತೊಂದು ಒಳ್ಳೆ ಪ್ರಾಜೆಕ್ಟ್ ಮೂಲಕ ಕಮ್‌ಬ್ಯಾಕ್ ಮಾಡುವೆ. ಕೊನೆಯ ಸಂಚಿಕೆಯನ್ನು ನೋಡುವುದು ಮರೆಯಬೇಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುವೆ,' ಎಂದು ಭರತ್ ಬರೆದುಕೊಂಡಿದ್ದಾರೆ.

ಹಿಂದಿ ಧಾರಾವಾಹಿ 'Badho Bahu' ರಿಮೇಕ್ ಆಗಿದ್ದರೂ, ತನ್ನದೆ ಸ್ಥಳೀಯ ಕಂಪಿನೊಂದಿಗೆ ವಿಶೇಷತೆಗಳ ಮೂಲಕ ವೀಕ್ಷಕರ ಗಮನ ಸೆಳೆಯುವಲ್ಲಿ ಬ್ರಹ್ಮಗಂಟು ಜನಪ್ರಿಯತೆ ಪಡೆದಿತ್ತು. ರಂಗಭೂಮಿ ಕಲಾವಿದ ನಟಿ ಗೀತಾ ಭಾರತಿ ಭಟ್‌ಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟ ಧಾರಾವಾಹಿ ಇದು. ಎರಡು ಮೂರು ವಾರಗಳ ಕಾಲ ಬ್ರೇಕ್ ತೆಗೆದುಕೊಂಡು ಬಿಗ್ ಬಾಸ್‌ ಸೀಸನ್‌ 8ರಲ್ಲಿ ಕಾಣಿಸಿಕೊಂಡು ಗೀತಾ ಮತ್ತೆ ಧಾರಾವಾಹಿಗೆ ಮುರಳಿ ಕೊನೆ ಹಂತದ ಚಿತ್ರೀಕರಣ ಮುಗಿಸಿದ್ದಾರೆ.

 

Follow Us:
Download App:
  • android
  • ios