ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼರಾಮಾಚಾರಿʼ ಧಾರಾವಾಹಿಯಲ್ಲಿ ಸೀತಾ ಪಾತ್ರ ಮಾಡುತ್ತಿರುವ ನಟಿ ಯಾರು? 

‘ರಾಮಾಚಾರಿ’ ಧಾರಾವಾಹಿಯಲ್ಲಿ ರಾಮಾಚಾರಿಗೆ ಎರಡು ಸುಳಿ ಇದೆ, ಇನ್ನೊಂದು ಮದುವೆ ಆಗತ್ತೆ ಅಂತ ಚಾರುಗೆ ಮನೆಯವರೆಲ್ಲ ಗೋಳು ಹೊಯ್ದುಕೊಂಡಾಗ ಅವಳು ಕಣ್ಣೀರು ಹಾಕಿದಳು. ಈಗ ರಾಮಾಚಾರಿ ಬದುಕಿಗೆ ಸೀತೆ ಆಗಮನವಾಗಿದೆ.

ಸೀತೆಗೆ ಚಿಕಿತ್ಸೆ ಕೊಡಿಸಿದ ರಾಮಾಚಾರಿ! 
ಹೌದು, ಆಫೀಸ್‌ಗೆ ಹೋಗುತ್ತಿರುವಾಗ ಸೀತಾ ಎನ್ನುವ ಹುಡುಗಿಯ ಕಾರ್‌ ಅಪಘಾತ ಆಗಿತ್ತು. ಅವಳನ್ನು ರಾಮಾಚಾರಿ ಎತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದನು. ಎಂಡಿ ಬಂದು ಕ್ಷಮೆ ಕೇಳುವವರೆಗೂ ನಾವ್ಯಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲ್ಲ ಅಂತ ವೈದ್ಯರು ಹಠ ಹಿಡಿದು ಕುಳಿತಿದ್ದರು. ಆಗ ರಾಮಾಚಾರಿ ಅವರಿಗೆ ಸರಿಯಾಗಿ ಬೈದು, ಚಿಕಿತ್ಸೆ ಕೊಡಿಸಿದ್ದಾನೆ.

ಪಬ್ಲಿಕ್ ಪ್ಲೇಸ್‌ನಲ್ಲಿಯೇ ಹೆಂಡ್ತಿಯ ಬ್ಯಾಕ್ ನೋಡಿ ವಾವ್ ಎಂದ ಕೃಷ್ಣ ಅಭಿಷೇಕ್; ನಿಮಗೆ ನಾಚಿಕೆ ಆಗಲ್ವಾ? ನೆಟ್ಟಿಗರ ಕ್ಲಾಸ್

ರಾಮಾಚಾರಿಗೆ ಥ್ಯಾಂಕ್ಸ್‌ ಹೇಳಿದ ಸೀತಾ ತಂದೆ! 
ಸೀತಾ ತಂದೆ ತಪ್ಪಾಗಿ ತಿಳಿದುಕೊಂಡು ರಾಮಾಚಾರಿಯೇ ಅಪಘಾತ ಮಾಡಿದ ಅಂತ ಹೊಡೆದನು. ಯಾರೂ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬರದೇ ಇದ್ದಾಗ ರಾಮಾಚಾರಿಯೇ ರಿಸ್ಕ್‌ ತಗೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದ ಅಂತ ಸೀತಾ ತನ್ನ ತಂದೆಗೆ ಹೇಳಿದಾಗ ಅವರ ಕೋಪ ಕಡಿಮೆ ಆಗಿತ್ತು.

ನಿಖಿತಾ ಸ್ವಾಮಿ ಯಾರು? 
ಈಗ ರಾಮಾಚಾರಿಗೆ ಎರಡು ಮದುವೆ ಆಗತ್ತಾ ಅಂತ ಚಾರು ಚಿಂತೆಯಲ್ಲಿದ್ದಾಳೆ. ತನ್ನ ಪ್ರಾಣ ಉಳಿಸಿದ ರಾಮಾಚಾರಿ ನನಗೆ ಸೇರಬೇಕು, ನಾನು ಅವನ ಜೊತೆ ಬದುಕಬೇಕು ಅಂತ ಸೀತಾ ಕನಸುಕೊಳ್ಳುತ್ತಾಳೆ. ಸೀತಾ ಪಾತ್ರದಲ್ಲಿ ನಿಖಿತಾ ಸ್ವಾಮಿ ನಟಿಸುತ್ತಿದ್ದಾರೆ. ʼಒಳ್ಳೇ ಹುಡುಗʼ ಪ್ರಥಮ್‌ ಜೊತೆಗೆ ನಿಖಿತಾ ಸ್ವಾಮಿ ಅವರು ʼಫಸ್ಟ್‌ನೈಟ್‌ ವಿಥ್‌ ದೆವ್ವʼ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಇನ್ನು ʼಗಂಗೆ ಗೌರಿʼ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದಾರೆ. ಮಾಡೆಲ್‌ ಆಗಿರುವ ನಿಖಿತಾ ಸ್ವಾಮಿ ಅವರು ಟ್ರೆಡಿಷನಲ್‌, ವೆಸ್ಟರ್ನ್‌ ಡ್ರೆಸ್‌ನಲ್ಲಿ ಸಾಕಷ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

'ಅಪ್ಪು' ಜೀವನಚರಿತ್ರೆಯಲ್ಲಿದೆ ಏಳು 'F': ಕುತೂಹಲದ ವಿಷಯ ರಿವೀಲ್​ ಮಾಡಿದ ಲೇಖಕ ಪ್ರಕೃತಿ ಬನವಾಸಿ

ಮುಂದೆ ಏನಾಗಬಹುದು?
ʼರಾಮಾಚಾರಿʼ ಧಾರಾವಾಹಿಯಲ್ಲಿ ಸೀತಾಳಿಂದ ಚಾರು-ಚಾರಿ ಲೈಫ್‌ ಕಥೆ ಏನಾಗತ್ತೋ ಏನೋ! ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. ಚಾರುಲತಾಗೆ ರಾಮಾಚಾರಿಗೆ ಕಂಡರೆ ತುಂಬ ಇಷ್ಟ. ರಾಮಾಚಾರಿಯನ್ನು ಅವಳು ಯಾರ ಜೊತೆಯೂ ಹಂಚಿಕೊಳ್ಳಲು ಇಷ್ಟಪಡೋದಿಲ್ಲ. ಹಣದ ಮದದಲ್ಲಿ ಮೆರೆಯುತ್ತಿದ್ದ ಚಾರುಲತಾ, ರಾಮಾಚಾರಿಯನ್ನು ಪ್ರೀತಿಸಿದಳು, ಅವನನ್ನು ಮದುವೆ ಆಗಿ ನಾರಾಯಣಾಚಾರ್‌ ಮನೆಗೆ ಬಂದಳು. ಗಂಡನ ಮನೆಗೆ ತಕ್ಕಂತೆ ಅವಳು ಎಲ್ಲ ಕೆಲಸವನ್ನು ಕಲಿತಳು, ಇಂದು ಅವಳು ಪರ್ಫೆಕ್ಟ್‌ ಸೊಸೆ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ. 

ಪಾತ್ರಧಾರಿಗಳು
ರಾಮಾಚಾರಿ ಪಾತ್ರದಲ್ಲಿ ರಿತ್ವಿಕ್‌ ಮಠದ್‌, ಚಾರುಲತಾ ಪಾತ್ರದಲ್ಲಿ ಮೌನ ಗುಡ್ಡೇಮನೆ, ಸೀತಾ ಪಾತ್ರದಲ್ಲಿ ನಿಖಿತಾ ಸ್ವಾಮಿ ಅವರು ನಟಿಸುತ್ತಿದ್ದಾರೆ.