ನಟಿ ಮಾನಸಾ ಮನೋಹರ್ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೀವನದಲ್ಲಿ ಪ್ರೀತಿ ಸಿಕ್ಕ ಖುಷಿಯಲ್ಲಿರುವ ನಟಿ, ತಮ್ಮ ಅಭಿಮಾನಿಗಳಿಗೆ ಪ್ರೀತಿ ಪಾಠ ಹೇಳಿದ್ದಾರೆ. ಮದುವೆ ಉಡುಗೆಯಲ್ಲಿ ರೀಲ್ಸ್ ಮಾಡಿದ ಅವರು ಹೇಳಿದ್ದೇನು?  

ಜೊತೆ ಜೊತೆಯಲಿ ಧಾರಾವಾಹಿ ಫೇಮ್ ನಟಿ ಮಾನಸ ಮನೋಹರ್ (Jothe Jotheyali serial fame Actress Manasa Manohar) ಎರಡನೇ ಮದುವೆಯಾಗಿದ್ದಾರೆ. ಮಾನಸಾ ಮಹೋಹರ್, ಫುಟ್ಬಾಲ್ ಪ್ಲೇಯರ್ ಪ್ರೀತಂ ಚಂದ್ರ (Pritam Chandra) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 6ರಂದು ಅವರ ಮದುವೆ ಸಮಾರಂಭ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎಂಗೇಜ್ಮೆಂಟ್ ಹಾಗೂ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದ ಮಾನಸಾ ಮನೋಹರ್ ಈಗ ಒಂದು ರೀಲ್ ಮಾಡಿ, ಫ್ಯಾನ್ಸ್ ಗೆ ಮಹತ್ವದ ಸಂದೇಶ ನೀಡಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಮಾನಸಾ ಮಹೋಹರ್, ತಮ್ಮ ಪತಿ ಪ್ರೀತಂ ಚಂದ್ರ ಜೊತೆ ಕುಳಿತುಕೊಂಡಿದ್ದಾರೆ. ಇಬ್ಬರೂ ಮದುವೆ (marriage) ಉಡುಗೆಯಲ್ಲಿದ್ದಾರೆ. ಇವತ್ತು ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ದಿನ. ನನಗೆ ನನ್ನ ಪ್ರೀತಿ (Love) ಸಿಕ್ಕಿದೆ. ನಾನು ಪ್ರೀತಂ ಜೊತೆ ನವೆಂಬರ್ 6ರಂದು ಮದುವೆಯಾಗಿದ್ದೇನೆ. ಎಂಗೇಜ್ಮೆಂಟ್, ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ಎಲ್ಲರೂ ನನಗೆ ಬೆಂಬಲ ನೀಡಿದ್ರು. ನನ್ನ ನಿರ್ಧಾರವನ್ನು ಮೆಚ್ಚಿಕೊಂಡಿದ್ದರು. ನಮ್ಮ ಮದುವೆಗೆ ಶುಭಕೋರಿದ, ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಮಾನಸಾ ಹೇಳಿದ್ದಾರೆ. ಮುಖ್ಯವಾದ ವಿಷ್ಯವನ್ನು ನಿಮ್ಮ ಮುಂದೆ ಹೇಳಲು ನಾವು ಬಂದಿದ್ದೇವೆ ಎಂದ ಮಾನಸಾ, ಪ್ರೀತಿಯ ಬಗ್ಗೆ ಯಾರೂ ನಂಬಿಕೆ ಕಳೆದುಕೊಳ್ಳಬೇಡಿ ಎಂದಿದ್ದಾರೆ. ಜೀವನದಲ್ಲಿ ಏನೇ ಸಮಸ್ಯೆ ಆಗಿರಬಹುದು, ಪ್ರೀತಿ ಕಳೆದುಕೊಂಡಿರಬಹುದು, ಮದುವೆಯಲ್ಲಿ ತೊಂದರೆ ಆಗಿರಬಹುದು. ಆದ್ರೆ ನಿಮಗೆ ಧಕ್ಕಬೇಕಾದ ಪ್ರೀತಿ ಸಿಕ್ಕೇ ಸಿಗುತ್ತೆ. ಅದ್ರಲ್ಲಿ ನಂಬಿಕೆ ಇಡಿ. ಪ್ರಾರ್ಥನೆ ಮಾಡಿ ಎಂದು ಮಾನಸಾ ಹೇಳಿದ್ದಾರೆ. ಪ್ರೀತಂ ಕೂಡ, ಪ್ರೀತಿ ಸಿಕ್ಕೇ ಸಿಗುತ್ತೆ. ಕೆಲಸ, ವೃತ್ತಿಯಲ್ಲಿ ಏಳ್ಗೆ ಬೇಕು ಎನ್ನುವಂತೆ ಜೀವನದಲ್ಲಿ ಪ್ರೀತಿ ಸಿಗ್ಬೇಕು ಅಂದ್ಕೊಳ್ತಾ ಇರಿ ಎಂದಿದ್ದಾರೆ. ಪ್ರೀತಂ ಪರಿಚಯ ಮಾಡಿದ ಮಾನಸಾ, ಇವರು ನನ್ನ ಪಾರ್ಟನರ್, ಫ್ರೆಂಡ್ ಅಂತ ಭಾವುಕರಾಗಿದ್ದಾರೆ.

ಹ್ಯಾಪಿ ಬರ್ತಡೇ ಗೊಲ್ಲು; ಸಹೋದರನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್!

ಮಾನಸಾ ಈ ಪೋಸ್ಟ್ ಗೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಅನೇಕ ಅಭಿಮಾನಿಗಳು, ನಿಮ್ಮ ಜೀವನ ಹೀಗೆ ಖುಷಿಯಾಗಿರಲಿ ಎಂದು ಹಾರೈಸಿದ್ದಾರೆ. ಅಕ್ಟೋಬರ್ ನಲ್ಲಿ ಮಾನಸಾ, ತಮ್ಮ ಇನ್ಸ್ಸಾ ಖಾತೆಯಲ್ಲಿ ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡಿದ್ದರು. ನವೆಂಬರ್ ನಲ್ಲಿ ಮದುವೆಯಾಗಿದ್ದಾರೆ. ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡ ಸಮಯದಲ್ಲಿ ಅಭಿಮಾನಿಗಳ, ಎರಡನೇ ಮದುವೆ ಪ್ರಶ್ನೆಗೆ ಉತ್ತರ ನೀಡಿದ್ದ ಮಾನಸಾ, ಹೌದು ಇದು ನನ್ನ ಎರಡನೇ ಮದುವೆ. ದೈಹಿಕವಾಗಿ ಮದುವೆ ಆಗಿರ್ತೇವೆ ಆದ್ರೆ ಭಾವನಾತ್ಮಕ ಸಂಬಂಧ ಇರೋದಿಲ್ಲ. ಅಂಥ ಸಂದರ್ಭದಲ್ಲೂ ಅನೇಕರು ಬೇರೆಯವರಿಗಾಗಿ ತಮ್ಮ ಸಂಬಂಧ ಮುಂದುವರೆಸುತ್ತಾರೆ. ನಾನೀಗ ನನ್ನ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ಪ್ರೀತಂ ಜೊತೆ ಮದುವೆ ಆಗ್ತಿದ್ದೇನೆ. ಇದು ನನಗೆ ಅಪರಾಧ ಎನ್ನಿಸುತ್ತಿಲ್ಲ. ಕೃತಜ್ಞತೆ ಇದೆ ಎಂದು ಬರೆದುಕೊಂಡಿದ್ದರು. ಅದಾದ್ಮೇಲೆ ಮದುವೆಯ ಸುಂದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಬ್ರೈಡ್ ಟು ಬಿ ಪಾರ್ಟಿ ಮಾಡಿದ್ದರು. ಅದರ ಎಲ್ಲ ಫೋಟೋವನ್ನು ಹಂಚಿಕೊಂಡಿದ್ದ ಮಾನಸಾ ಮುಖದಲ್ಲಿ ನವವಧುವಿನ ಕಳೆ ಬಂದಿದೆ. 

ಪ್ರಿಯಕರನ ಕೈಲಿ ಸೀರೆಯುಡಿಸಿಕೊಂಡು ಟ್ರೋಲ್ ಆದ ಹಾರ್ದಿಕ್ ಪಾಂಡ್ಯಾ ಮಾಜಿ ಪತ್ನಿ

ಮಾನಸಾ ಮದುವೆ ಆಗಿರುವ ಪ್ರೀತಂ, ಫುಟ್ಬಾಲ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಇನ್ನು ಮಾನಸಾ ವಿಷ್ಯಕ್ಕೆ ಬರೋದಾದ್ರೆ, ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ವೀಕ್ಷಕರನ್ನು ಸೆಳೆದವರು ಮಾನಸಾ. ತಮ್ಮ ಅಭಿನಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಮಾನಸಾ ಹೊಂದಿದ್ದಾರೆ. ಸದ್ಯ ಮಾನಸಾ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸಿದ್ದೇಗೌಡ್ರ ಅತ್ತಿಗೆಯಾಗಿ ನಟಿಸುತ್ತಿದ್ದಾರೆ. ಅದ್ರ ಜೊತೆ ಹೊಸದಾಗಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲಿ ಐಶ್ವರ್ಯ ಸಿಂಧೋಗಿ ನಿರ್ವಹಿಸುತ್ತಿದ್ದ ಶಿವಗಾಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

View post on Instagram