ಕೆಲಸ ಕೊಡ್ತಿದ್ದಾರೆ ಚಂದನ್ ಗೌಡ, ಮಂಡಿಪೇಟೆ ಕೆಫೆಗೆ ಬೇಕಂತೆ ಅಡುಗೆ ಟೀಂ
ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ, ಹೊಟೇಲ್ ನಡೆಸ್ತಿದ್ದಾರೆ. ಇದು ನಿಮಗೆಲ್ಲ ತಿಳಿದಿರೋ ವಿಷ್ಯ. ಈಗ ಅವರ ಜೊತೆ ಕೆಲಸ ಮಾಡುವ ಅವಕಾಶ ನಿಮಗೆ ಸಿಗ್ತಿದೆ. ವೆಜ್ ಕುಕ್ ಟೀಂಗೆ ಅರ್ಜಿ ಸಲ್ಲಿಸಲು ಈಗ್ಲೇ ಸಿದ್ಧರಾಗಿ.
ರೀಲ್ ಹಾಗೂ ರಿಯಲ್ ಜೋಡಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ (Reel and Real Couple Kavita Gowda and Chandan Kumar) ಈಗ ಪೇರೆಂಟಿಂಗ್ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ (Lakshmi Baramma Serial) ಮೂಲಕ ಪ್ರಸಿದ್ಧಿ ಪಡೆದಿರುವ ಈ ಜೋಡಿ ಬ್ಯುಸಿನೆಸ್ ಬಗ್ಗೆಯೂ ಗಮನ ಹರಿಸಿದೆ. ಸಿನಿಮಾ, ಸೀರಿಯಲ್ ಸೇರಿದಂತೆ ಬಣ್ಣದ ಲೋಕದಲ್ಲಿ ಬ್ಯುಸಿ ಇರುವ ಈ ಜೋಡಿ ಕೆಲ ವರ್ಷಗಳ ಹಿಂದೆಯೇ ಬ್ಯುಸಿನೆಸ್ ಗೆ ಎಂಟ್ರಿಕೊಟ್ಟಿದೆ. ಕವಿತಾ ಹಾಗೂ ಚಂದನ್ ಗೌಡ, ಹೊಟೇಲ್ ಉದ್ಯಮ (Hotel Industry) ಕ್ಕೆ ಕಾಲಿಟ್ಟು ಯಶಸ್ವಿಯಾಗಿದ್ದಾರೆ.
ನಾಲ್ಕು ವರ್ಷದ ಹಿಂದೆ ಬೆಂಗಳೂರಿನ ಸಹಕಾರ್ ನಗರದಲ್ಲಿ ಬಿರಿಯಾನಿ ಹೊಟೇಲ್ ಶುರು ಮಾಡಿದ್ದ ಜೋಡಿ, ಮಾರ್ಚ್ 23, 2022ರಂದು ಮಂಡಿಪೇಟೆ ಪಲಾವ್ ಶುರು ಮಾಡಿದ್ದರು. ಒಂದಾದ್ಮೇಲೆ ಒಂದರಂತೆ ಚಂದನ್ ಹಾಗೂ ಕವಿತಾ ಐದು ಬ್ರ್ಯಾಂಚ್ ತೆರೆದಿದ್ದಾರೆ. ಮಾರ್ಚ್ 24, 2024ರಂದು ಚಂದನ್ ಹಾಗೂ ಕವಿತಾ ತಟ್ಟೆ ಇಡ್ಲಿ ಕೆಫೆ ಶುರು ಮಾಡಿದ್ದು, ಕಿಚ್ಚ ಸುದೀಪ್ ಈ ಹೊಟೇಲ್ ಉದ್ಘಾಟನೆ ಮಾಡಿದ್ದರು. ಇದು ಇವರ ಮೊದಲ ವೆಜ್ ಹೊಟೇಲ್ ಅನ್ನೋದು ವಿಶೇಷ.
ದರ್ಶನ್ ಪರ ಬ್ಯಾಟ್ ಬೀಸಿದ್ದವರು ಬಿಗ್ ಬಾಸ್ ಮನೆಗೆ, ವೋಟ್ ಗಿಟ್ಟಿಸಿಕೊಳ್ಳೋ ಗಿಮಿಕ್ ಎಂದ ಫ್ಯಾನ್ಸ್
ಈಗ ಈ ಹೊಟೇಲ್ ನಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗ್ತಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಚಂದನ್ ಗೌಡ, ಜಾಹೀರಾತೊಂದನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸಸ್ಯಹಾರಿ ಅಡುಗೆ ಭಟ್ಟ ಹಾಗೂ ತಂಡಕ್ಕೆ ಕೆಲಸವಿದೆ ಎಂದು ಚಂದನ್ ಪೋಸ್ಟ್ ಹಾಕಿದ್ದಾರೆ. ವೆಜ್ ಕುಕ್ ಮತ್ತು ಟೀಂ ವಾಂಟೆಡ್ ಎಂದು ಬರೆದಿರುವ ಚಂದನ್ ನಂಬರ್ ಹಾಕಿದ್ದಾರೆ. ಜೊತೆಗೆ ಮಂಡಿಪೇಟೆ ಕೆಫೆ, ಮೈಸೂರ್ ರೋಡ್ ಅಂತ ಅಡ್ರೆಸ್ ಹಾಕಿದ್ದಾರೆ.
ಚಂದನ್ ಹಾಗೂ ಕವಿತಾ ತಮ್ಮ ಹೊಟೇಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಎಷ್ಟು ಸಂಬಳ ನೀಡ್ತಾರೆ ಗೊತ್ತಿಲ್ಲ. ನಿಮಗೂ ಅಡುಗೆ ಮಾಡೋಕೆ ಚೆನ್ನಾಗಿ ಬರುತ್ತೆ ಅಂದ್ರೆ ಟ್ರೈ ಮಾಡ್ಬಹುದು.
ಮೈಸೂರ್ ರೋಡ್ ನಲ್ಲಿರುವ ಇವರ ಮಂಡಿಪೇಟೆ ಪಲಾವ್, ಮಂಡಿಪೇಟೆ ತಟ್ಟೆ ಇಡ್ಲಿ ಕೆಫೆಯಲ್ಲಿ ವೆಜ್ ಮತ್ತು ನಾನ್ ವೆಜ್ ಎರಡೂ ಸಿಗುತ್ತೆ. ಸುಮಾರು 30ಕ್ಕೂ ಹೆಚ್ಚು ವೆಜ್ ಆಹಾರವನ್ನು ಇಲ್ಲಿ ಸರ್ವ್ ಮಾಡಲಾಗ್ತಿದೆ. ಆರಂಭದಲ್ಲೇ ತುಂಬಾ ಬೇಡಿಕೆ ಇದೆ. ಎರಡು ವರ್ಷಗಳ ಹಿಂದೆ ಹೊಟೇಲ್ ಶುರು ಮಾಡಿದ ಮೊದಲ ಭಾನುವಾರವೇ 2 ಸಾವಿರ ಬಿರಿಯಾನಿ ಮಾರಾಟವಾಗಿತ್ತಂತೆ. ಹಾಗಾಗಿ ಬ್ಯುಸಿನೆಸ್ ಡೆವಲಪ್ ಮಾಡೋಕೆ ಈ ಜೋಡಿ ಮುಂದಾಗಿತ್ತು. ಅದೇ ಕಾರಣಕ್ಕೆ ಅಲ್ಲಿ ವೆಜ್ ಕೂಡ ಶುರು ಮಾಡಿದ್ದಾರೆ ಚಂದನ್.
ಹೆರಿಗೆ ನಂತ್ರ ದೀಪಿಗೆ ಕಾಡ್ತಿದ್ಯಾ ಒಂಟಿತನ..? ರಣವೀರ್ ಬಗ್ಗೆ ಇಂಥ ಸ್ಟೋರಿ ಹಾಕಿದ ಬೆಡಗಿ
ಇನ್ನು ಚಂದನ್ ಹಾಗೂ ಕವಿತಾ ಗೌಡ ಮನೆಗೆ ಗಂಡು ಮಗುವಿನ ಆಗಮನವಾಗಿದೆ. ಚಂದನ್ ಮಗನ ಕಾಲಿನ ಫೋಟೋ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹಂಚಿಕೊಂಡಿದ್ದರು. ನಂತ್ರ ಮನೆಗೆ ವೆಲ್ ಕಂ ಮಾಡಿದ ವಿಡಿಯೋ ಹಾಗೂ ಮೈಮೇಲೆ ಮಗನನ್ನು ಮಲಗಿಸಿಕೊಂಡಿರುವ ವಿಡಿಯೋ ಪೋಸ್ಟ್ ಮಾಡಿದ್ದರು. ಪ್ರೆಗ್ನೆನ್ಸಿ ಟೈಂನಲ್ಲಿ ಬ್ಯೂಸಿಯಿದ್ದ ಕಲಾವಿದರಲ್ಲಿ ಕವಿತಾ ಗೌಡ ಕೂಡ ಸೇರ್ತಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗರ್ಭಾವಸ್ಥೆಯ ಸುಂದರ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು. ಇನ್ನು ಚಂದನ್ ನಟನೆ ಬಗ್ಗೆ ಹೇಳೋದಾದ್ರೆ, ರಾಧಾ ಕಲ್ಯಾಣ, ಲಕ್ಷ್ಮಿ ಬಾರಮ್ಮ ಸೀರಿಯಲ್ ನಂತ್ರ ಲವ್ ಯು ಆಲಿಯಾ, ಪ್ರೇಮ ಬರಹ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ 3ರ ರನ್ನರ್ ಅಪ್ ಆಗಿದ್ದ ಚಂದನ್ ಡ್ಯಾನ್ಸಿಂಗ್ ಸ್ಟಾರ್ಸ್ ಸೀಸನ್ 1ರಲ್ಲಿ ಕಾಣಿಸಿಕೊಂಡಿದ್ದರು.