ಅನಾಥಾಶ್ರಮದಲ್ಲಿ ಬೆಳೆದ ಪೂರ್ಣಿ, ದೀಪಿಕಾಳ ಸ್ವಂತ ಅಕ್ಕನಾ? ಏನಿದು ಶ್ರೀರಸ್ತು-ಶುಭಮಸ್ತು ಟ್ವಿಸ್ಟ್?
ಪೂರ್ಣಿಯ ಹುಟ್ಟಿನ ರಹಸ್ಯ ಇನ್ನಷ್ಟು ಕುತೂಹಲದತ್ತ ಸಾಗಿದೆ. ಈಕೆ ಶ್ರೀಮಂತರ ಮನೆಯ ಮಗಳು ಎನ್ನುವುದು ತಿಳಿದಿದೆ. ಹಾಗಿದ್ದರೆ ಈಕೆಯ ಅಪ್ಪ-ಅಮ್ಮ ಯಾರು?
ಶ್ರೀರಸ್ತು ಶುಭಮಸ್ತು ಪೂರ್ಣಿ ಅನಾಥೆ ಎಂದೇ ಇಲ್ಲಿಯವರೆಗೆ ತೋರಿಸುತ್ತಾ ಬರಲಾಗಿದೆ. ಅವಳು ತನ್ನನ್ನು ತಾನು ಅನಾಥೆ ಎಂದುಕೊಂಡಿದ್ದಾಳೆ. ಅನಾಥಾಶ್ರಾಮದಲ್ಲಿಯೇ ಬೆಳೆದಿರುವ ಪೂರ್ಣಿಗೆ ತನ್ನ ಹುಟ್ಟಿನ ಬಗ್ಗೆಯೂ ಗೊತ್ತಿಲ್ಲ. ಅದರ ಬಗ್ಗೆ ಆಕೆ ಹೆಚ್ಚಿಗೆ ತಲೆಕೆಡಿಸಿಕೊಂಡೂ ಇಲ್ಲ. ಮಾಧವನ ಮನೆಯಲ್ಲಿ ಎಲ್ಲರೂ ಆಕೆಯನ್ನು ಅನಾಥೆ ಎಂದುಕೊಂಡಿದ್ದಾರೆ. ಮಾಧವನ ಮಗ ಅವಿಯ ಮಡದಿಯಾಗಿ ಬಂದಿದ್ದಾಳೆ. ಅವಿ ಕೂಡ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಇನ್ನು ತುಳಸಿಗೋ ಆ ಮನೆಯಲ್ಲಿ ಮಾಧವ್ನನ್ನು ಬಿಟ್ಟರೆ ತುಂಬಾ ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುವವಳು ಇದೇ ಪೂರ್ಣಿ. ಈಕೆಗೂ ತುಳಸಿಯೇ ಅಮ್ಮ. ಆದರೆ ಈಕೆ ಅನಾಥಾಶ್ರಮದಿಂದ ಬಂದವಳು ಎನ್ನುವ ಕಾರಣಕ್ಕೆ ದೀಪಿಕಾ ಆಗ್ಗಾಗ್ಗೆ ಚುಚ್ಚುವುದು ಉಂಟು.
ಪೂರ್ಣಿ ಯಾವ ಅನಾಥಾಶ್ರಮದಲ್ಲಿ ಬೆಳೆದದ್ದು ಎಂದು ತಿಳಿದುಕೊಂಡ ತುಳಸಿ, ಪೂರ್ಣಿ ಮತ್ತು ಅವಿಯನ್ನು ಕರೆದುಕೊಂಡು ಆಶ್ರಮಕ್ಕೆ ಹೋಗುತ್ತಾಳೆ. ಅಲ್ಲಿ ಆಶ್ರಮದವರು ಇಬ್ಬರಿಗೂ ಉಡುಗೊರೆ ಕೊಟ್ಟು ಸತ್ಕರಿಸುತ್ತಾರೆ. ಈ ಸಂದರ್ಭದಲ್ಲಿ ತುಳಸಿ ಪೂರ್ಣಿಯ ಹಿನ್ನೆಲೆ ಏನು, ಯಾರು ಸೇರಿಸಿದ್ದು ಎಂದು ಸಹಜವಾಗಿ ಆಶ್ರಮದವರನ್ನು ಕೇಳುತ್ತಾಳೆ. ಅಷ್ಟರಲ್ಲಿಯೇ ಮಧ್ಯೆ ಪ್ರವೇಶಿಸುವ ಮಾಧವ್, ಪೂರ್ಣಿ ಹುಟ್ಟಿನ ಕುರಿತು ಇವರಿಗೆ ಹೇಗೆ ಗೊತ್ತಿರುತ್ತದೆ ಎಂದು ಮಾತನ್ನು ಅಲ್ಲಿಯೇ ನಿಲ್ಲಿಸಿ ಏನೂ ಹೇಳಬೇಡಿ ಎಂದು ಸನ್ನೆ ಮಾಡುತ್ತಾನೆ. ಅಷ್ಟರಲ್ಲಿ ತುಳಸಿ ಮಾಧವ್ನನ್ನು ನೋಡುತ್ತಾಳೆ. ಇದರ ರಹಸ್ಯ ಏನು ಎಂದು ತಿಳಿಯಲು ಬಯಸಿದ ಅವಳು ಮಾಧವ್ಗೆ ಇದರ ಬಗ್ಗೆ ಕೇಳುತ್ತಾಳೆ. ಆರಂಭದಲ್ಲಿ ಈ ಬಗ್ಗೆ ಹೇಳಲು ಮಾಧವ್ ನಿರಾಕರಿಸಿದರೂ, ಕೊನೆಗೆ ಪೂರ್ಣಿ ಅನಾಥಾಶ್ರಮ ಸೇರಿದ್ದು ಹೇಗೆ ಎಂದು ಹೇಳುತ್ತಾನೆ.
ದಾವೂದ್ ಜೊತೆ ಡೇಟಿಂಗ್, ಪ್ರತಿ ಎಪಿಸೋಡ್ಗೆ ಎಂಟು ಲಕ್ಷ- ಪಾಕ್ನ 36 ವರ್ಷದ ಸುಂದರಿ ಯಾರು ಗೊತ್ತಾ?
ಹಿಂದಿನ ಕಂತುಗಳನ್ನು ನೋಡಿದ್ದ ಹಲವು ನೆಟ್ಟಿಗರು ಪೂರ್ಣಿಗೂ, ಮಾಧವ್ಗೂ ಏನೋ ಸಂಬಂಧವಿದೆ, ಆತನೇ ಪೂರ್ಣಿಯನ್ನು ಅನಾಥಾಶ್ರಮಕ್ಕೆ ಸೇರಿಸಿದ್ದು ಎಂದೆಲ್ಲಾ ಅಂದುಕೊಂಡಿದ್ದರು. ಆದರೆ ಅಸಲಿಗೆ ವಿಷಯ ಬೇರೆ ಇದೆ. ಯಾರೋ ಒಬ್ಬರು ಶ್ರೀಮಂತರು ಶಿಶುವನ್ನು ತಂದು ಅನಾಥಾಶ್ರಮದ ಬಾಗಿಲ ಬಳಿ ಬಿಟ್ಟು ಹೋಗಿದ್ದರು. ಬಹುಶಃ ಇದು ಮದುವೆಗೂ ಮುನ್ನ ಹುಟ್ಟಿದ್ದ ಮಗು ಇದ್ದಿರಬಹುದು. ಆದ್ದರಿಂದ ಪೂರ್ಣಿ ಅನಾಥೆಯಲ್ಲ, ಶ್ರೀಮಂತರ ಮನೆಯ ಮಗಳು ಎಂದು ಮಾಧವ್ ಹೇಳುತ್ತಾನೆ. ಇದನ್ನುಕೇಳಿ ತುಳಸಿ, ನೀವ್ಯಾರೂ ಅವರ್ಯಾರು ಎಂದು ಹುಡುಕುವ ಪ್ರಯತ್ನ ಮಾಡಲಿಲ್ಲವೇ ಎಂದಾಗ ಮಾಧವ್, ಅವರಿಗೇ ಬೇಡವಾದ ಮಗು ಎಂದ ಮೇಲೆ ಹುಡುಕಿ ಮತ್ತೆ ಪೂರ್ಣಿಗೆ ತೊಂದರೆ ಕೊಡುವುದು ಏಕೆ ಎಂದು ಯಾರೂ ಹುಡುಕಲಿಲ್ಲ ಎನ್ನುತ್ತಾನೆ.
ಈಗ ಆ ಮಗುವಿನ ರಹಸ್ಯವನ್ನು ತುಳಸಿ ಭೇದಿಸಿಯಾಳೆ ಎನ್ನುವುದು ಈಗಿರುವ ಸತ್ಯ. ಆದರೆ ಇದಕ್ಕೆ ನೆಟ್ಟಿಗರು ತಮ್ಮದೇ ಆದ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈಕೆ ವಿಲನ್ ದೀಪಿಕಾಳ ಅಕ್ಕನೇ ಇದ್ದಿರಬಹುದು. ಆಕೆಯ ಅಪ್ಪನಿಗೆ ಪೂರ್ಣಿ ಅಕ್ರಮವಾಗಿ ಹುಟ್ಟಿರುವ ಮಗು ಇದ್ದಿರಬಹುದು, ಇಲ್ಲವೇ ಮದುವೆಗೂ ಮುನ್ನ ದೀಪಿಕಾ ಅಮ್ಮನಿಗೆ ಇದು ಹುಟ್ಟಿದ್ದಿರಬಹುದು. ಖಂಡಿತವಾಗಿಯೂ ಪೂರ್ಣಿ ಇದೇ ಶ್ರೀಮಂತರ ಮನೆಯ ಮಗಳು ಎನ್ನುತ್ತಿದ್ದಾರೆ. ಇನ್ನು ಕೆಲವರು, ಪೂರ್ಣಿ, ದೀಪಿಕಾ ಅಪ್ಪನಿಗೆ ಹುಟ್ಟಿದ ಮಗು, ಆ ಮೇಲೆ ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ದೀಪಿಕಾಳನ್ನು ಅನಾಥಾಶ್ರಮದಿಂದ ತಂದಿರಬಹುದು ಎಂದೂ ಹೇಳುತ್ತಿದ್ದಾರೆ. ಸೀರಿಯಲ್ಗೆ ಈ ರೀತಿಯ ಟ್ವಿಸ್ಟ್ ಬಂದರೂ ಅಚ್ಚರಿಯೇನಿಲ್ಲ ಎನ್ನುವುದು ಬಹುತೇಕ ಮಂದಿಯ ಅಭಿಮತ. ಇದೇ ವೇಳೆ, ಪೂರ್ಣಿ ತಾಯಿಯಾಗುವುದಿಲ್ಲ ಎನ್ನುವ ಸತ್ಯವೂ ದೀಪಿಕಾಕ್ಕೆ ತಿಳಿದಿದ್ದು, ಮುಂದೆ ಪೂರ್ಣಿಗೆ ಹೇಗೆ ಚಿತ್ರಹಿಂಸೆ ಕೊಡುತ್ತಾಳೋ ಎನ್ನುವ ಭಯ ಅಭಿಮಾನಿಗಳದ್ದು.
ಉರ್ಫಿ ಎದುರಿದ್ದರೆ ತಿರುಗುತ್ತೆ ಫ್ಯಾನ್, ಕೂಲೋ ಕೂಲ್: ಇಂಥ ಐಡಿಯಾ ಯಾರಿಗೂ ಬರಲು ಸಾಧ್ಯನೇ ಇಲ್ಲ ಬಿಡಿ!