ಕಾಪಿ ಮಾಡ್ತಿರೋ ಆರೋಪದ ಮೇಲೆ ಪರೀಕ್ಷೆಯಿಂದ ಭಾಗ್ಯ-ತನ್ವಿ ಔಟ್! ಸಿಸಿಟಿವಿಯಲ್ಲಿ ಏನಿದೆ?
ಪರೀಕ್ಷೆ ಬರೆಯುತ್ತಿರುವ ತನ್ವಿ ಮತ್ತು ಭಾಗ್ಯಳ ಮೇಲೆ ಕಾಪಿ ಹೊಡೆಯುತ್ತಿರುವ ಆರೋಪ ಕೇಳಿಬಂದಿದೆ. ಹಾಗಿದ್ದರೆ ಇದನ್ನು ಮಾಡಿದವರು ಯಾರು?
ಭಾಗ್ಯ ಮತ್ತು ಮಗಳು ತನ್ವಿ ಇಬ್ಬರ ಡೆಸ್ಕ್, ಡಸ್ಟ್ಬಿನ್ ಮೇಲೆ ಗಣಿತದ ಫಾರ್ಮುಲಾ ಬರೆಯಲಾಗಿದೆ. ಇದನ್ನು ನೋಡಿದ ಟೀಚರ್ ಇಬ್ಬರನ್ನೂ ಪರೀಕ್ಷೆಯಿಂದ ಡಿಬಾರ್ ಮಾಡಿದ್ದಾರೆ. ತಾವು ಕಾಪಿ ಬರೆದಿಲ್ಲ, ತಾವು ಹೀಗೆಲ್ಲಾ ಮಾಡುವುದಿಲ್ಲ ಎಂದು ಹೇಳಿದರೂ ಕೇಳದೇ ಇಬ್ಬರನ್ನೂ ಡಿಬಾರ್ ಮಾಡಲಾಗಿದೆ. ಈ ಬಾರಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕು ಎಂದುಕೊಂಡ ತನ್ವಿ ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಇನ್ನು ಭಾಗ್ಯಳ ಮಾತಂತೂ ಹೇಳುವುದೇ ಬೇಡ... ಅವಳು ಚೆನ್ನಾಗಿ ತಯಾರಿ ನಡೆಸಿದ್ದಾಳೆ. ಆದರೆ ಕಾಪಿ ಬರೆದು ಇಟ್ಟಿದ್ದರಿಂದ ಇಬ್ಬರನ್ನೂ ಡಿಬಾರ್ ಮಾಡಲಾಗಿದ್ದು, ಪರೀಕ್ಷೆ ಬರೆಯುವುದರಿಂದ ತಡೆ ಹಿಡಿಯಲಾಗಿದೆ.
ಈ ವಿಷಯ ತಾಂಡವ್ಗೆ ಗೊತ್ತಾಗಿದೆ. ಈ ಸಮಯದಲ್ಲಿ ತಾಂಡವ್ ಶ್ರೇಷ್ಠಾಳ ಮನೆಯಲ್ಲಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ತಾಂಡವ್ಗೆ ಭಾಗ್ಯಳ ಮೇಲೆ ಕೋಪ ಉಕ್ಕಿಬಂದಿದೆ. ತನ್ವಿ ಕಾಪಿ ಮಾಡಿದ್ದಾಳೆ ಎಂದು ನಂಬಿರೋ ಈತ, ಇದಕ್ಕೆಲ್ಲಾ ಭಾಗ್ಯಳೇ ಕಾರಣ ಎಂದಿದ್ದಾನೆ. ಅಲ್ಲಿಂದ ಹೊರಡಲು ರೆಡಿಯಾಗುವಷ್ಟರಲ್ಲಿ ಶ್ರೇಷ್ಠಾ ಅವನನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಮಗಳು ಕಷ್ಟದಲ್ಲಿ ಇರುವಾಗ ಅವನು ಹೋಗದಿದ್ದರೆ ಹೇಗೆ? ಪರೀಕ್ಷಾ ಕೊಠಡಿ ಸಮೀಪ ಬಂದಿದ್ದಾನೆ. ಅದಾಗಲೇ ಅಮ್ಮ-ಮಗಳನ್ನು ಪರೀಕ್ಷಾ ಕೊಠಡಿಯಿಂದ ಹೊರಕ್ಕೆ ಹಾಕಲಾಗಿತ್ತು. ಅಪ್ಪನನ್ನು ನೋಡಿ ತನ್ವಿ ಕಣ್ಣೀರು ಹಾಕಿದ್ದಾಳೆ. ನಾನು ಕಾಪಿ ಮಾಡಲಿಲ್ಲ. ಇವೆಲ್ಲಾ ಹೇಗೆ ಆಯಿತು ಎಂದು ತಿಳಿದಿಲ್ಲ ಎಂದಿದ್ದಾಳೆ. ಆದರೆ ಆಗಲೂ ಪತ್ನಿಯ ಮೇಲೆ ಕಿಡಿ ಕಾರಿರುವ ತಾಂಡವ್, ಭಾಗ್ಯಳನ್ನು ಚೆನ್ನಾಗಿ ಬೈದಿದ್ದಾನೆ.
ಏನೋ ಹೇಳಲು ಈತ ತಿರುಗಿದ, ಆ ಕಡೆ ಅವಳೂ ತಿರುಗಿದಳು... ಅಷ್ಟೇ... ಕೊನೆಗೂ ಈಡೇರಿತು ಫ್ಯಾನ್ಸ್ ಕನಸು...
ತನ್ವಿ ಮತ್ತು ಭಾಗ್ಯ ಹೀಗೆ ಮಾಡಲು ಸಾಧ್ಯವೇ ಇಲ್ಲ. ಹಾಗಿದ್ದರೆ ಯಾರದ್ದೀ ಕುತಂತ್ರ ಎನ್ನುವುದು ನೆಟ್ಟಿಗರ ಪ್ರಶ್ನೆ. ಇದಕ್ಕೆಲ್ಲಾ ಕಾರಣ, ಟೀಚರ್ ಕನ್ನಿಕಾ ಎನ್ನುತ್ತಿದ್ದಾರೆ ನೆಟ್ಟಿಗರು. ಅಲ್ಲಿ ಸಿಸಿಟಿವಿ ಇಲ್ವಾ? ಅದನ್ನು ನೋಡಿದರೆ ಎಲ್ಲಾ ಗೊತ್ತಾಗತ್ತಲ್ಲ. ಅಷ್ಟೂ ತಲೆ ಬೇಡ್ವಾ ಎನ್ನುತ್ತಿದ್ದಾರೆ. ಹಾಗಿದ್ದರೆ ಸಿಸಿಟಿವಿಯನ್ನು ನೋಡ್ತಾರಾ ಇಲ್ಲವೇ ಇಬ್ಬರನ್ನೂ ಡಿಬಾರ್ ಮಾಡ್ತಾರಾ ಎನ್ನುವುದು ಮುಂದಿರುವ ಪ್ರಶ್ನೆ. ಸಿಸಿಟಿವಿಯಲ್ಲಿ ನೋಡಿದ್ರೆ ಯಾರು ಈ ಕೃತ್ಯ ಮಾಡಿದ್ದರು ಎನ್ನುವುದು ತಿಳಿಯುತ್ತದೆ. ಹಾಗಿದ್ದರೆ ಕನ್ನಿಕಾ ಮಿಸ್ಗೆ ಇದು ಗೊತ್ತಿಲ್ವಾ, ಅಥ್ವಾ ಏನಾದರೂ ಕುತಂತ್ರ ಮಾಡಿದ್ದಾಳಾ ಎಂಬ ಕುತೂಹಲ ಧಾರಾವಾಹಿ ನೋಡಿದ್ರೆ ತಿಳಿಯುತ್ತದೆ.
ಭಾಗ್ಯ 10ನೇ ಕ್ಲಾಸ್ ಪರೀಕ್ಷೆ ಬರೆಯಲು ಎಲ್ಲಾ ರೆಡಿ ಮಾಡಿಕೊಂಡಿದ್ದಾಳೆ. ಭಾಗ್ಯಳ ಮಗಳೂ ಈಗ 10ನೇ ಕ್ಲಾಸ್ ಪರೀಕ್ಷೆ ಬರೆಯುತ್ತಿದ್ದಾಳೆ. ಅಮ್ಮ ಮತ್ತು ಮಗಳಿಗೆ ಒಂದೇ ಕಡೆ ಬಂದಿದೆ. ಈ ಬಾರಿ ಮಗಳಿಗೆ ಭಾಗ್ಯ ಚೆನ್ನಾಗಿ ಓದಿಸಿದ್ದಾಳೆ. ಪ್ರತಿ ಬಾರಿಯೂ ಪರೀಕ್ಷೆಗೆ ಸರಿಯಾಗಿ ರೆಡಿಯಾಗಿ ಬರದ ತನ್ವಿಗೆ ಭಾಗ್ಯಳೇ ಖುದ್ದು ಓದಿಸಿದ್ದಾಳೆ. ಈ ಸಲ ಚೆನ್ನಾಗಿ ಪರೀಕ್ಷೆ ಬರೆಯುವ ಕಾನ್ಫಿಡೆನ್ಸ್ನಲ್ಲಿ ಇದ್ದಾಳೆ ತನ್ವಿ. ಇದನ್ನು ಕೇಳಿ ಭಾಗ್ಯಳೂ ಖುಷಿಯಿಂದ ಇದ್ದಳು. ಆದರೆ ಎಲ್ಲವೂ ಉಲ್ಟಾ ಆಗಿದೆ. ಪತ್ನಿಯ ಮೇಲೆ ಸಂಶಯ ಪಡುತ್ತಿರೋ ತಾಂಡವ್ನನ್ನು ಮೊದಲು ಈ ಸೀರಿಯಲ್ನಿಂದ ತೊಲಗಿಸಿ ಎನ್ನುತ್ತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್. ಅಷ್ಟಕ್ಕೂ ಮುಂದೇನಾಗುತ್ತೆ ಎನ್ನುವುದು ಈಗಿರುವ ಕುತೂಹಲ.
ಕೋತಿಗಳ ಮದ್ವೆ ಫೋಟೋ ಶೇರ್ ಮಾಡಿದ ರಾಖಿ ಸಾವಂತ್: ನಟಿ ಪ್ರಕಾರ ಇವರು ಯಾರು ಗೊತ್ತಾ?