ಅಪ್ರಾಪ್ತ ಬಾಲಕಿಯ ಅತ್ಯಾಚಾರ ಕುರಿತು ಹಾಡಿದ ರ‍್ಯಾಪರ್ ಅರೆಸ್ಟ್ ಪುಟ್ಟ ಬಾಲಕಿಯನ್ನು ರೇಪ್ ಮಾಡೋ ಬಗ್ಗೆ ಹಾಡಿದ ಜನಪದ ಗಾಯಕ

ಗಾನ ಗಾಯಕ(ಗಾನ ಎಂದರೆ ಜನಪದ ಗಾಯನದ ವಿಧ) ಸರವೇಡಿ ಸರವಣನ್ ಆಲಿಯಾಸ್ ಸರಣ್‌ನನ್ನು ಬಂಧಿಸಲಾಗಿದೆ. ಡಿಸೆಂಬರ್ 23ರಂದು ಟಾಪ್ ರ‍್ಯಾಪರ್‌ನ್ನು ತಿರುವಲ್ಲೂರು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯರ ಅತ್ಯಾಚಾರ, ಲೈಂಗಿಕ ವಿಚಾರಗ ಕುರಿತು ಹಾಡಿದ್ದಕ್ಕಾಗಿ ಗಾಯಕನನ್ನು ಅರೆಸ್ಟ್ ಮಾಡಲಾಗಿದೆ. ಹಾಡಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಇದಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗಿದೆ.

ಕಳೆದ ವರ್ಷ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ಸಿಂಗರ್ ಸರಣ್ ಅವರು ಹಾಡಿದ ಹಾಡಿನ ಸಾಹಿತ್ಯವು ವ್ಯಕ್ತಿ ಹುಡಗಿ ತನ್ನೊಂದಿಗೆ ಇರುವುದನ್ನು ಖಚಿತಪಡಿಸಿಕೊಳ್ಳಲು ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅವಳು ತನ್ನೊಂದಿಗೆ ಇರುವುದನ್ನು ಖಚಿತಪಡಿಸಿಕೊಳ್ಳುವ ಮಾರ್ಗವಾಗಿ ಅವಳನ್ನು ಗರ್ಭಿಣಿಯಾಗಿಸಿದ್ದಾನೆ ಎಂದು ಹೇಳುತ್ತದೆ.

ಬಲವಂತವಾಗಿ ಕಿಸ್ ಮಾಡಿ ಎದೆಗೆ ಕೈ ಹಾಕಿದ, ನಟನ ವಿರುದ್ಧ ಸಿಂಗರ್ ಆರೋಪ

ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದು ತಿರುವಲ್ಲೂರು ಎಸ್‌ಪಿ ಆರ್‌.ವಿ. ವರುಣ್ ಕುಮಾರ್ ಗಾಯಕನ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಪ್ರೆಸ್‌ನೋಟ್ ಪ್ರಕಾರ, ತಿರುವಲ್ಲೂರು ಸೈಬರ್ ಕ್ರೈಂ ವಿಭಾಗ ಐಟಿ ಆಕ್ಟ್‌ನ ಸೆಕ್ಷನ್ 67B ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ವಿಡಿಯೋದಲ್ಲಿ ಅಪ್ರಾಪ್ತೆಯನ್ನು ಅಶ್ಲೀ ರೀತಿಯಲ್ಲಿ ತೋರಿಸಲಾಗಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರೆಸ್‌ನೋಟನ್‌ನಲ್ಲಿ ಹೇಳಲಾಗಿದೆ. ಸರಣ್ ತನ್ನ ವರ್ತನೆಗಾಗಿ ಕ್ಷಮೆ ಕೇಳಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ.

ಹಾಲಿವುಡ್ ಕಾಮುಕನಿಂದ ಐಶ್ವರ್ಯ ರೈಯನ್ನು ಬಚಾವ್ ಮಾಡಿದ್ದ ಕೃಷ್ಣ ಸುಂದರಿ

ಹಾಡಿನ ಕ್ಲಿಪ್ ಅನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಹಂಚಿಕೊಂಡಿದ್ದಾರೆ. ಆದರೂ ಅನೇಕ ಬಲಪಂಥೀಯರು ಮತ್ತು ಬಿಜೆಪಿ ನಾಯಕರೂ ಸಹ ಇದರ ನಿರ್ದೇಶಕ ಪಿಎ ರಂಜಿತ್ ಮತ್ತು ಇತರರು ಸ್ಥಾಪಿಸಿದ ನೀಲಂ ಕಲ್ಚರಲ್ ಸೆಂಟರ್ ಆಯೋಜಿಸಿದ ಸಾಂಸ್ಕೃತಿಕ ಉತ್ಸವವಾದ ಮಾರ್ಗಜಿಯಿಲ್ ಮಕ್ಕಳಸೈನಲ್ಲಿ ಹಾಡನ್ನು ಹಾಡಲಾಗಿದೆ ಎಂದು ತಪ್ಪಾಗಿ ಪ್ರತಿಪಾದಿಸಿದ್ದಾರೆ. ಅಪಪ್ರಚಾರದ ನಂತರ, ನೀಲಂ ಸಾಂಸ್ಕೃತಿಕ ಕೇಂದ್ರವು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ಅಂತಹ ಅಪರಾಧಗಳು ಮತ್ತು ವಿಷಯವನ್ನು ವರದಿ ಮಾಡಲು ಪೋಷಕರು ಮತ್ತು ಇತರ ಮಧ್ಯಸ್ಥಗಾರರನ್ನು ವಿನಂತಿಸಿದ ತಿರುವಲ್ಲೂರು ಪೊಲೀಸ್ ಇಲಾಖೆ ಯಾವುದೇ ಹಿಂಜರಿಕೆಯಿಲ್ಲದೆ ಪೋಷಕರು ಮುಂದೆ ಬರುವಂತೆ ಒತ್ತಾಯಿಸಿದೆ.

ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿ ಇದು ಮೊದಲ

ಮನೋರಂಜನಾ ಕ್ಷೇತ್ರದಲ್ಲಿ ಸೆಕ್ಷುವಲ್ ಅಬ್ಯೂಸ್ ಇದೇ ಮೊದಲಲ್ಲ. ಬಹಳಷ್ಟು ಸಲ ಸಿನಿಮಾ, ಆಲ್ಬಂ ಸಾಂಗ್‌ಳ ವಿರುದ್ಧವೂ ಭಾರೀ ಟೀಕೆ ವ್ಯಕ್ತವಾಗುವ ಘಟನೆ ನಡೆಯುತ್ತವೆ. ಇತ್ತೀಚೆಗೆ ಬಾಲಿವುಡ್‌ ನಟಿ ಸನ್ನಿ ಲಿಯೋನ್ ಅವರ ಮಧುಬನ್ ಹಾಗೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಬಗ್ಗೆ ಬಹಳಷ್ಟು ವಿರೋಧ ವ್ಯಕ್ತವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಸಿಂಗರ್‌ ಕನ್ನಿಕಾ ಕಪೂರ್‌ (Kannika Kapoor) ಮಧುಬನ್‌ (Madhuban) ಮ್ಯೂಸಿಕ್‌ ವಿಡಿಯೋ ಸದ್ದು ಮಾಡುತ್ತಿದೆ. ಸನ್ನಿ ಲಿಯೋನ್‌ (Sunny Leone) ಹೆಜ್ಜೆ ಹಾಕಿರುವ ಈ ಹಾಡು ತೊಂದರೆಯಲ್ಲಿದೆ. ಈ ಹಾಡು ಧಾರ್ಮಿಕ ಭಾವನೆಗಳಿಗೆ ಉಂಟುಮಾಡುತ್ತಿದೆ ಎಂದು ನೆಟ್ಟಿಗ್ಗರು ಆರೋಪಿಸಿದ್ದಾರೆ ಹಾಗೂ ಇದನ್ನು ಬ್ಯಾನ್‌ ಮಾಡಬೇಕು ಎಂದು ಡಿಮ್ಯಾಂಡ್‌ ಮಾಡುತ್ತಿದ್ದಾರೆ. ಸನ್ನಿ ಲಿಯೋನ್ ನಟಿಸಿರುವ ಹೊಸ ಮ್ಯೂಸಿಕ್‌ ಮಧುಬನ್‌ ವಿಡಿಯೋ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬರುತ್ತಿರುವುದರಿಂದ ಸನ್ನಿ ಲಿಯೋನ್ ಈ ಬಾರಿ ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.