ನಿರೂಪಕಿ ಶಾಲಿನಿಗೆ ಅನಾರೋಗ್ಯ;ಈಗ 'ಸೂಪರ್ ಸ್ಟಾರ್' ಸಾರಥಿ ಅನುಪಮಾ ಗೌಡ!
ಅನಾರೋಗ್ಯದ ಕಾರಣ ಪಾಚು ಅಲಿಯಾಸ್ ಶಾಲಿನಿ ಸತ್ಯನಾರಾಯಣ್ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿಲ್ಲ. ಬದಲಿಗೆ ಅಕ್ಕ ಖ್ಯಾತಿಯ ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಕಾರ್ಯಕ್ರಮ 'ಸುವರ್ಣ ಸೂಪರ್ ಸ್ಟಾರ್' ನಿರೂಪಕಿ ಪಾಚು ಅಲಿಯಾಸ್ ಶಾಲಿನಿ ಸತ್ಯನಾರಾಯಣ್ ಆರೋಗ್ಯದಲ್ಲಿ ಏರುಪೇರಾದ ಕಾರಣ ನಿರೂಪಣೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಶಾಲಿನಿ ಬದಲಿಗೆ ಅಕ್ಕ ಹಾಗೂ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ನಿರೂಪಣೆ ಮಾಡಲಿದ್ದಾರೆ.
ಸ್ಟಾರ್ ಸುವರ್ಣದಲ್ಲಿ 'ಕುಕ್ಕು ವಿತ್ ಕಿರಿಕ್ಕು'; ಕನ್ನಡಕ್ಕೊಂದು ವಿಭಿನ್ನ ರಿಯಾಲಿಟಿ ಶೋ
ವಾಹಿನಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಶಾಲಿನಿ ಮಾತನಾಡಿದ್ದಾರೆ. 'ಸದ್ಯಕೆ ಈ ನಾರಿ ಪಾತ್ರೆ ತೊಳೆಯುವ ಗುಂಜಾಗಿದೆ. ಮಾತನಾಡೋಕೂ ಶಕ್ತಿ ಇಲ್ಲ. ಜ್ವರ ಬಂದಿದೆ. ಸ್ವಲ್ಪ ದಿನ ನಾನು ಬರೋದಿಲ್ಲ. ನನ್ನ ಬದಲಾಗಿ ಟ್ರೇಂಡಿ ಅನುಪಮಾ ಗೌಡ ಬಂದಿದ್ದಾರೆ. ಥ್ಯಾಂಕ್ ಯು ಅನುಪಮಾ. ನನ್ನ ಸೂಪರ್ ಸ್ಟಾರ್‌ಗಳನ್ನು ಚೆನ್ನಾಗಿ ನೋಡಿಕೋ. ಖುಷಿಯಾಗಿರು. ಸೂಪರ್ ಆಗಿರುವ ಬಹುಮಾನಗಳನ್ನು ಕೊಟ್ಟು ಕಳುಹಿಸು. ನಾನು ಇಲ್ಲ ಅಂತ ತುಂಬಾ ಬಾಲ ಬಿಚ್ಚಬೇಡ, ನಾನು ಇಲ್ಲಿದ್ದರೂ ನನ್ನ ಆತ್ಮ ಅಲ್ಲೇ ಇರುತ್ತೆ. ಸೂಪರ್ ಮಾರ್ಕೆಟ್ ಗಿಫ್ಟ್ ಕಾರ್ಡ್ ಎಲ್ಲದರ ಹಿಂದೆ ಇರುವೆ. ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡುವೆ ನಾನು. ಈಗ ಸ್ವಲ್ಪ ನನಗೆ ಶಕ್ತಿ ಬೇಕಿದೆ,' ಎಂದು ಶಾಲಿನಿ ಮಾತನಾಡಿದ್ದಾರೆ.
ಶಾಲಿನಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ನಿರೂಪಣೆಯೇ ಮಾಡಲ್ಲ, ಸಾಕಪ್ಪ ಅಂತ ಹೋಗಿದ್ದ ಅನುಪಮಾ ಮತ್ತೆ ನಿರೂಪಣೆ ಮಾಡುತ್ತಿದ್ದಾರೆ ಎಂದು ಶಾಕ್ ಆಗಿ ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಮಜಾಭಾರತ ಒಂದು ಎಪಿಸೋಡ್‌ನ ನಿರೂಪಣೆ ಮಾಡಿದ ಅನುಪಮಾ ಕಿರುತೆರೆ ವೀಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದರು. ಇದೀಗ ಜನಪ್ರಿಯ ಕಾರ್ಯಕ್ರಮದ ಮೂಲಕ ಇನ್ನು ಜಾಸ್ತಿ ಹತ್ತಿರವಾಗುವ ನಿರೀಕ್ಷೆ ಇದೆ.