* ಬಿಗ್ ಬಾಸ್ ಮನೆಯಿಂದ ರಘು ಗೌಡ ಔಟ್* ಶಮಂತ್ ಅವರನ್ನು ಮುಂದಿನ ವಾರಕ್ಕೆ ಸೇವ್ ಮಾಡಿದ ರಘು* ಕಣ್ಣೀರಿಟ್ಟ ವೈಷ್ಣವಿ, ಶಮಂತ್* ಸುಪರ್ ಸಂಡೇಯಲ್ಲಿ ಕಿಚ್ಚನ ಹೊಸ ಹುಮ್ಮಸ್ಸು
ಬೆಂಗಳೂರು(ಜು. 10) ಬಿಗ್ಬಾಸ್ ಮನೆಯಲ್ಲಿ ತೊಂಭತ್ತೊಂದು ದಿನಗಳ ಪ್ರಯಾಣ ಮುಗಿಸಿ ರಘು ಗೌಡ ಎಲಿಮಿನೇಟ್ ಆಗಿದ್ದಾರೆ. ಹೊರ ಬರುವಾಗ ಮತ್ತೊಮ್ಮೆ ಶಮಂತ್ ಗೆ ಅದೃಷ್ಟ ಒಲಿದಿದ್ದು ರಘು ಗೌಡ ಅವರನ್ನು ಸೇವ್ ಮಾಡಿದ್ದಾರೆ.
ಶನಿವಾರ ಬಿಸಿಯಾಗಿದ್ದ ಬಿಗ್ ಬಾಸ್ ಮನೆ ಭಾನುವಾರ ನಗೆಕಡಲಿನಲ್ಲಿ ತೇಲಿತ್ತು. ಕಿಚ್ಚ ಸುದೀಪ್ ಅನೇಕ ವಿಚಾರಗಳನ್ನು ಮಾತನಾಡಿದರು. ಆದರೆ ಕಿಚ್ಚ ಚಪ್ಪಾಳೆಯನ್ನು ತಮ್ಮ ಬಳಿಯೇ ಇಟ್ಟುಕೊಂಡರು.
ದಿವ್ಯಾ ಉರುಡುಗ ಅಳು ಜಾಸ್ತಿಯಾಗಿದೆ, ಸಂಬರಗಿ ಸದಾ ಕಾಲ ಯಾವುದೋ ಒಂದು ವಿಚಾರದ ಬಗ್ಗೆ ಯೋಚನೆ ಮಾಡುತ್ತಲೇ ಇರುತ್ತಾರೆ. ದಿವ್ಯಾ ಸುರೇಶ್ ಬ್ಯಾಲೆನ್ಸ್ ಆಗಿದ್ದಾರೆ ಹೀಗೆ ಅನೇಕ ಸಂಗತಿಗಳು ಚರ್ಚೆಯಾದವು.
ದಿವ್ಯಾ ಯು ಮತ್ತು ಚಕ್ರವರ್ತಿಗೆ ಸರಿಯಾಗಿ ಕ್ಲಾಸ್
ಫಾರ್ಮ್ ನಲ್ಲಿ ಇರುವ ಸೌರವ್ ಗಂಗೂಲಿ ನಿವೃತ್ತಿ ತೆಗೆದುಕೊಂಡಂತೆ ಈಗಿನ ಪರಿಸ್ಥಿತಿ ನನ್ನದು. ಮೊದಲನೇ ಇನಿಂಗ್ಸ್ ನಲ್ಲಿ ಈಗ ಆಡಿದ ಹಾಗೆ ಆಡಿದ್ದರೆ ನಾನು ಟಾಫ್ ತ್ರಿಯಲ್ಲಿ ಇರುತ್ತಿದ್ದೆ ಎಂದರು.
ನನಗೆ ಟೈಮ್ ಮಶಿನ್ ಏನಾದರೂ ಸಿಕ್ಕಿದರೆ ಮೊದಲನೇ ಇನಿಂಗ್ಸ್ ನ ರಘು ಮುಖಕ್ಕೆ ಬಾರಿಸಿ ಬರುತ್ತೇನೆ. ನಾನು ಇಂಗ್ಲಿಷ್ ಹ್ಯೂಮರ್ ಫಾಲೋ ಮಾಡುತ್ತೇನೆ.. ಅದರ ಪರಿಣಾಮದಿಂದಲೇ ರಘು ವೈನ್ಸ್ ಸ್ಟೋರಿ ಯೂಟ್ಯೂಬ್ ಮಾಡಿದೆ ಎಂದು ತಿಳಿಸಿದರು.
ದಿವ್ಯಾ ಎಸ್ ಅವರನ್ನು ಕಂಡರೆ ನನಗೆ ಅಸೂಹೆ... ಅದಕ್ಕೆ ಅವರ ಹೈಟ್ ಕಾರಣ.. ಅವರ ಆತ್ಮವಿಶ್ವಾಸ ಅದ್ಭುತ.. ವೂಷ್ಣವಿ ಉತ್ತಮ ಸ್ನೇಹಿತೆ.. ಬಿಗ್ ಬಾಸ್ ವಿನ್ನರ್ ಅವರೇ ಎಂದು ಹೇಳಿದರು. ರಘು ಗೌಡ ಅವರು ಎಲಿಮಿನೇಶನ್ ಗೆ ಒಳಗಾಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. ಮಂಜು, ವೈಷ್ಣವಿ, ಅರವಿಂದ್, ಶಮಂತ್, ಸಂಬರಗಿ ಫೈನಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರು.
