Asianet Suvarna News Asianet Suvarna News

ಆಗಸ್ಟ್‌ 23ರಿಂದ ಸುವರ್ಣ ಸೂಪರ್‌ಸ್ಟಾರ್ ಸೀಸನ್ 2 ಶುರು!

ನೀವು ದುಬಾರಿ ಗಿಫ್ಟ್ ಗೆಲ್ಲಬೇಕಾ? ಒಂದೇ ಸಾರಿ ಒಂದು ತಿಂಗಳಿಗೂ ಹೆಚ್ಚು ರೇಷನ್ ಪಡೆಯಬೇಕಾ? ಹಾಗಾದ್ರೆ ಮಿಸ್ ಮಾಡಲೇಬಾರದು ಈ ಸುವರ್ಣ ಸೂಪರ್ ಸ್ಟಾರ್.

Star Suvarna Superstar season 2 begins August 23rd Shalini vcs
Author
Bangalore, First Published Aug 22, 2021, 1:04 PM IST
  • Facebook
  • Twitter
  • Whatsapp

ಕಿರುತೆರೆ ವೀಕ್ಷಕರ ನೆಚ್ಚಿನ ಕಾರ್ಯಕ್ರಮ ಸುವರ್ಣ ಸೂಪರ್‌ಸ್ಟಾರ್ ಎರಡನೇ ಸೀಸನ್ ಆರಂಭವಾಗುತ್ತಿದೆ. ಸೆಲೆಬ್ರಿಟಿಗಳು ಮಾತ್ರವಲ್ಲದೇ, ಶ್ರೀ ಸಾಮಾನ್ಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದುಬಾರಿ ಗಿಫ್ಟ್‌ಗಳನ್ನು ಪಡೆದುಕೊಂಡಿದ್ದಾರೆ. ಸೀಸನ್‌ ಮುಗಿಯುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳಿಗೋಸ್ಕರ ಈ ಸೀಸನ್ ಎರಡು ಶುರುವಾಗುತ್ತಿದೆ. 

ಶಾಲಿನಿ ಸತ್ಯನಾರಾಯಣಾ ನಿರೂಪಣೆ ಮಾಡುತ್ತಿರುವ ಎರಡನೇ ಸೀಸನ್ ಅಗಸ್ಟ್ 23ರಿಂದ ಸಂಜೆ 5ಗಂಟೆಗೆ ಪ್ರಸಾರವಾಗಲಿದೆ. ಕೊರೋನಾ ಸೋಂಕು ತಗುಲಿದ ಕಾರಣ ಸೀಸನ್ 1ರಲ್ಲಿ ಶಾಲಿನಿ ಕೆಲವು ದಿನಗಳ ಕಾಲ ನಿರೂಪಣೆ ಮಾಡಿರಲಿಲ್ಲ, ಬದಲಿಗೆ ಅನುಪಮಾ ಗೌಡ ಕಾಣಿಸಿಕೊಂಡಿದ್ದರು. ಸೀಸನ್ 2ರಲ್ಲಿ ಶಾಲಿನಿ ಸಂಪೂರ್ಣವಾಗಿ ಇರಲಿದ್ದಾರೆ ಎಂಬ ಭರವಸೆ ನೀಡಿದ್ದಾರೆ. 

ನಿರೂಪಕಿ ಶಾಲಿನಿ ಬ್ಯಾಗಲ್ಲಿ ಏನೆಲ್ಲಾ ಫನ್ನಿ ಐಟಂಗಳಿವೆ?

ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮಾತ್ರ ಭಾಗವಹಿಸಲಿದ್ದು, ವಯಸ್ಸಿಗೆ ಸಂಬಂಧಿಸಿದಂತೆ ಯಾವುದೇ ವಯಸ್ಸಿನ ಲಿಮಿಟ್ ಇರುವುದಿಲ್ಲ. ಕಿರುತೆರೆ ನಟಿಯರು ಮಾತ್ರವಲ್ಲದೇ ಸಿನಿಮಾ ನಟಿಯರಾದ ಐಂದ್ರಿತಾ ರೈ, ರೇಖಾ, ವನಿತಾ ವಾಸು ಹಾಗೂ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದಾರೆ. ಯಾವ ಹೆಣ್ಣು ವೈಯಕ್ತಿಕ ಹಾಗೂ ವೃತ್ತಿ ಜೀವನ ಸಮಾನವಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ, ಗಂಡಸರ ಸಮಕ್ಕೆ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.  'ಈ ಶೋ ಫಾರ್ಮ್ಯಾಟ್ ಹೇಗಿದೆ ಎಂದರೆ ನಾನು ಇಲ್ಲಿ ಬರುವ ಪ್ರತಿಯೊಬ್ಬ ಸ್ಪರ್ಧಿಗೂ ಕನೆಕ್ಟ್ ಆಗುವೆ. ಇಲ್ಲಿ ನಾನು ಸೆಲೆಬ್ರಿಟಿ ಅನ್ನೋ ಭಾವನೆ ಇರುವುದಿಲ್ಲ. ಹೀಗಾಗಿ ಎಲ್ಲರೂ ಸಂಕೋಚ ಇಲ್ಲದೆ ಇರುತ್ತಾರೆ,' ಎನ್ನುತ್ತಾರೆ ಶಾಲಿನಿ.

 

Follow Us:
Download App:
  • android
  • ios