ಕಿರು​ತೆರೆ ಪ್ರೇಕ್ಷ​ಕ​ರಿಗೆ ಸಾಕಷ್ಟುಮನ​ರಂಜನೆ ನೀಡುತ್ತ ಹತ್ತಿ​ರ​ವಾ​ಗು​ತ್ತಿ​ರುವ ಈ ಧಾರಾ​ವಾಹಿ ಸ್ಟಾರ್‌ ಸುವರ್ಣ ವಾಹಿ​ನಿ​ಯಲ್ಲಿ ಪ್ರತಿ ದಿನ ರಾತ್ರಿ 10.30ಕ್ಕೆ ಪ್ರಸಾ​ರ​ವಾ​ಗುತ್ತಿದೆ. ಈಗ ಇದರ ವಿಶೇಷ ಸಂಚಿಕೆ ಪ್ರಸಾರವಾಗು​ತ್ತಿದೆ.

ರಾಘವೇಂದ್ರ ರಾಜ್‌ಕುಮಾರ್‌ ನಿರ್ಮಾಣದ 'ಜೀವ ಹೂವಾಗಿದೆ' ಇಂದಿನಿಂದ 9 ಗಂಟೆಗೆ ಪ್ರಸಾರ!

ಫೆ.14ರಂದು ಪ್ರೇಮಿ​ಗಳ ದಿನ​ಕ್ಕಾಗಿ ಈ ವಿಶೇಷ ಸಂಚಿ​ಕೆ​ಯನ್ನು ರೂಪಿ​ಸ​ಲಾ​ಗಿದೆ. ಧಾರಾ​ವಾ​ಹಿ ನಾಯಕ ಶಂಕರ ತನ್ನ ಹೆಂಡತಿ ವಿಚಾ​ರ​ದಲ್ಲಿ ತಪ್ಪು ಮಾಡಿದ್ದೇನೆಂದು ಭಾವಿಸಿ ದರ್ಮಸ್ಥಳಕ್ಕೆ ಪಾದಯಾತ್ರೆ ಹೊರಡುತ್ತಾನೆ. ಪಾದಯಾತ್ರೆ ಸಂದರ್ಭದಲ್ಲಿ ಶಂಕರನ ಬದುಕು ಹಳ್ಳಿಯೊಂದರಲ್ಲಿ ನೆಲೆಗೊಂಡಾ​ಗ ಅಲ್ಲಿನ ಕಾಳಿ ದರ್ಶನ ಆಗು​ತ್ತದೆ. ಭಕ್ತಿ​ಯಿಂದ ಕೂಡಿದ ಈ ವಿಶೇಷ ಸಂಚಿಕೆ ಕೂಡ ಪ್ರಸಾ​ರ​ವಾಗುತ್ತಿದೆ.

ಏನಿದು ಅಚ್ಚರಿ! 'ಲಕ್ಷ್ಮೀ ಬಾರಮ್ಮ' ಚಂದನ್‌ಗೆ 'ಗೊಂಬೆ' ಜೊತೆ ಫಸ್ಟ್‌ನೈಟ್‌!

ಸಂಸ್ಕಾರ ಹಾಗೂ ಸಂಪ್ರದಾಯವನ್ನು ಉಸಿರಾಡುವ ನಾಯಕ ಶಂಕರ ಹಾಗೂ ಬದುಕಿನ ಪ್ರತಿಕ್ಷಣವನ್ನೂ ಖುಷಿಯಿಂದ ಕಳೆಯಬೇಕು, ನಮ್ಮ ಕಟ್ಟುಪಾಡುಗಳು ಜೀವವಿರೋಧಿಯಾಗಿರಬಾರದು ಎಂದು ಬಯಸುವ ನಾಯಕಿ ಪಾರು. ಹೀಗೆ ಎರಡು ವಿರುದ್ಧ ವ್ಯಕ್ತಿತ್ವಗಳು ಮದುವೆಯಾಗಿ ಸಂಸಾರ ಹೇಗೆಸಾಗುತ್ತಾರೆ ಎಂಬುದೇ ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯ ಕಥಾಹಂದರ.