ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರುಕ್ಕು' ಧಾರಾವಾಹಿ ಮೇ.14ಕ್ಕೆ ಕೊನೆ ಸಂಚಿಕೆಯನ್ನು ಪ್ರಸಾರ ಮಾಡುತ್ತಿದೆ. 2021 ಜನವರಿ 4ರಿಂದ ರಾತ್ರಿ 8.30ರಿಂದ ರುಕ್ಕು ಧಾರಾವಾಹಿ ಪ್ರಸಾರವಾಗುತ್ತಿತ್ತು. ರೈತ ಮಹಿಳೆ ರುಕ್ಕುವಿನ ಕತೆಯನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದರು. 

ಕೊರೋನಾ ಪಾಸಿಟಿವ್‌ ಎಂದು ಧಾರಾವಾಹಿಯಿಂದ ಹೊರ ನಡೆದ ನಟ ವಿನಯ್ ಗೌಡ! 

ಕೆಲವು ದಿನಗಳ ಹಿಂದೆ ಲಾಕ್‌ಡೌನ್‌ ನಡುವೆಯೂ ತಂಡ 100 ಎಪಿಸೋಡ್ ಮುಟ್ಟಿದ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಆಚರಿಸಿದೆ. ಪ್ರೈಮ್ ಟೈಮ್ ಸಮಯದಲ್ಲಿ ಧಾರಾವಾಹಿ ಪ್ರಸಾರ ಮಾಡುತ್ತಿದ್ದರೂ, ಟಿಆರ್‌ಪಿ ಕಡಿಮೆಯಾಗಿದ್ದು ಕಾರಣ ಅಂತ್ಯ ಹಾಡುವುದಕ್ಕೆ ತಂಡ ಮುಂದಾಗಿದೆ. ಮೇ.15ರಂದ ಇದೇ ಸಮಯಕ್ಕೆ 'ರಾಧಾ ಕೃಷ್ಣ' ಧಾರಾವಾಹಿ ಪ್ರಸಾರ ಮಾಡಲಾಗುತ್ತದೆ. 

ಹಲವು ವರ್ಷಗಳ ನಂತರ ರುಕ್ಕು ಪಾತ್ರದಲ್ಲಿ ನಟಿ ಶೋಭಾ ಶೆಟ್ಟಿ ಕಮ್ ಬ್ಯಾಕ್ ಮಾಡಿದ್ದರು.  ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸುಂದರಿ, ಮೊದಲ ಬಾರಿ ಡೀ-ಗ್ಲಾಮ್ ಪಾತ್ರದಲ್ಲಿಯೂ ಮಿಂಚಿದ್ದರು. ಸಿನಿಮಾ ಹಾಗೂ ಇನ್ನಿತರ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಪ್ರಮುಖ ಪಾತ್ರಧಾರಿ ಆಗಿದ್ದರೂ, ಶೋಭಾ ಧಾರಾವಾಹಿಯಿಂದ ಹೊರ ನಡೆದರು. ರೇಖಾ ಕೃಷ್ಣಪ್ಪ ರುಕ್ಕು ಪಾತ್ರದಲ್ಲಿ ಕಾಣಿಸಿಕೊಂಡರು.