ಕಳೆದ ಮೂರು ತಿಂಗಳಿನಿಂದ ಮಹಾಭಾರತ ಧಾರಾವಾಹಿ ಕನ್ನಡಿಗರ ನಿತ್ಯ ಜೀವನದ ಭಾಗವೇ ಆಗಿಹೋಗಿದೆ. ತನ್ನ ವೀಕ್ಷಕರ ಪ್ರೀತಿಗೆ ಆಭಾರಿಯಾಗಿರುವ ಸ್ಟಾರ್‌ ಸುವರ್ಣ ವಾಹಿನಿ ಆಗಸ್ಟ್‌ ತಿಂಗಳನ್ನು ಮಹಾಭಾರತ ಮಹಾಸಂಗ್ರಾಮದ ಮಹಾಮಾಸವನ್ನಾಗಿ ಆಚರಿಸುತ್ತಿರುವುದು ಎಲ್ಲರಿಗು ತಿಳಿದಿದೆ. ಮಹಾಭಾರದಲ್ಲಿ ಈಗ ಕುರುಕ್ಷೇತ್ರ ಮಹಾಯುದ್ಧಕ್ಕೆ ಕ್ಷಣಗಣನೆ ಶುರುವಾಗಿದೆ. ಅತಿರಥ ಮಹಾರಥರಾದ ಭೀಷ್ಮ ಮತ್ತು ದ್ರೋಣಾಚಾರ್ಯರು ತಮ್ಮ ಪಕ್ಷವನ್ನು ಆಯ್ದುಕೊಂಡಿದ್ದಾರೆ.

'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯ ಸಂದೀಪ್‌ ರಾಜು ಕಲರ್‌ಫುಲ್‌ ಜರ್ನಿ ಇದು!

ಅರ್ಜುನನ ಸಾರಥಿಯಾಗಿ ಸ್ವತಃ ಶ್ರೀಕೃಷ್ಣನೇ ರಥವೇರಲಿದ್ದಾನೆ. ಕುರುಕ್ಷೇತ್ರ ಮಹಾಸಮರದಲ್ಲೂ, ಅರ್ಜುನನ ಮನಸ್ಸಿನಲ್ಲೆದ್ದಿರುವ ಧರ್ಮ ಮತ್ತು ಅಧರ್ಮದ ಕುರಿತ ದ್ವಂದ್ವ ಯುದ್ಧದಲ್ಲೂ ಆತನಿಗೆ ಕೃಷ್ಣನ ಗೀತೋಪದೇಶದ ಮಾರ್ಗದರ್ಶನವಾಗಲಿದೆ. ಆಗಸ್ಟ್‌ 19ರಂದು ಅರ್ಜುನನಿಗೆ ಶ್ರೀಕೃಷ್ಣನ ವಿಶ್ವರೂಪ ದರ್ಶನದ ಸಂಚಿಕೆ ಪ್ರಸಾರವಾಗಲಿದೆ. ಅರ್ಜುನನಿಗೆ ತನ್ನಲ್ಲಡಗಿರುವ ಇಡೀ ಬ್ರಹ್ಮಾಂಡವನ್ನೇ ತೋರಿಸುವ ಕೃಷ್ಣನ ಈ ಮಹಿಮೆಯನ್ನು ದೃಶ್ಯಗಳಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿದೆ.

ಮಧ್ಯಾಹ್ನದ ಮನರಂಜನೆಯಲ್ಲಿ ಸನ್‌ ಆಫ್‌ ಸಾವಿತ್ರಮ್ಮ !

ಕನ್ನಡ ಮನರಂಜನಾ ಲೋಕದಲ್ಲಿ ಎರಡನೇ ಪ್ರೈಮ್‌ ಟೈಮ್‌ ಟ್ರೆಂಡ್‌ ಸೃಷ್ಟಿಸಿರುವ ಸ್ಟಾರ್‌ ಸುವರ್ಣ ವಾಹಿನಿ, ಮಧ್ಯಾಹ್ನದ ಮನರಂಜನೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲು ಮುಂದಾಗಿದೆ. ಮಧ್ಯಾಹ್ನದ ಮನರಂಜನೆಯ ಮೊದಲ ಭಾಗವಾಗಿ ಆಗಸ್ಟ್‌ 17ರಿಂದ ಮಧ್ಯಾಹ್ನ 2 ಗಂಟೆಗೆ ಸನ್‌ ಆಫ್‌ ಸವಿತ್ರಮ್ಮ ಧಾರಾವಾಹಿ ಪ್ರಸಾರವಾಗಲಿದೆ . ಸುರಸುಂದರಾಂಗ ಬಾಲರಾಜು ಅಂದ್ರೆ ಊರಲ್ಲಿರೋ ಎಲ್ಲಾ ಹೆಣ್ಣುಮಕ್ಕಳಿಗೂ ಅಚ್ಚುಮೆಚ್ಚು ಆದ್ರೆ ಬಾಲರಾಜು ಮಾತ್ರ ಆಜನ್ಮ ಬ್ರಹ್ಮಚಾರಿಯಾಗುವ ನಿರ್ಧಾರ ಮಾಡಿರುತ್ತಾನೆ. ತಾಯಿಯ ಮಾತು ಮೀರದ ಈ ಅಮ್ಮನ ಮಗನ ಕತೆ ಇಂದಿನಿಂದ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದೆ. ಚಂದನ್‌ ಕುಮಾರ್‌ ಬಾಲರಾಜು ಪಾತ್ರದಲ್ಲಿದ್ದಾರೆ. ಸಾವಿತ್ರಮ್ಮನಾಗಿ ನಟಿ ಹರಿತಾ ಕಾಣಿಸಿಕೊಂಡಿದ್ದಾರೆ. ನಟಿ ಅಯೇಷಾ ನಂದಿನಿ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಮುಂಬರುವ ಮೂರು ವಾರಗಳಲ್ಲಿ ಸ್ಟಾರ್‌ ಸುವರ್ಣ ವಾಹಿನಿ ಮೂರು ವಿಭಿನ್ನ ಕಥೆಗಳನ್ನು ಮಧ್ಯಾಹ್ನದ ಮನರಂಜನೆಯಲ್ಲಿ ಪ್ರಸ್ತುತಪಡಿಸಲಿದೆ.