Asianet Suvarna News

ಹೊಸ ಆಯಾಮದಲ್ಲಿ ಸಿರಿಕನ್ನಡ ವಾಹಿನಿ;ಮುರುಳಿ ಮತ್ತು ಹುಚ್ಚ ವೆಂಕಟ್ ಸಾರಥ್ಯದಲ್ಲಿ ‘ಲೈಫ್ ಓಕೆ’!

ಸಿರಿಕನ್ನಡ ವಾಹಿನಿಯಲ್ಲಿ ಲೈಫ್‌ ಓಕೆ ಕಾರ್ಯಕ್ರಮ ಪ್ರಸಾರ. ಮುರಳಿ ಮತ್ತು ಹುಚ್ಚ ವೆಂಕಟ್ ನಿರೂಪಣೆ.

Siri kannada tv to air Life Okay show with Murali and Huccha Venkat as anchor vcs
Author
Bangalore, First Published Jul 5, 2021, 9:17 AM IST
  • Facebook
  • Twitter
  • Whatsapp

ಕನ್ನಡಿಗರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಸಿರಿಕನ್ನಡ ವಾಹಿನಿ ಇಂದಿನಿಂದ (ಜ 5)ರಿಂದ ಹೊಸ ಆಯಾಮದಲ್ಲಿ ಮೂಡಿಬರಲಿದೆ. ಈ ಪ್ರಯುಕ್ತ ನಿರೂಪಕ ಮುರುಳಿ ಮತ್ತು ಹುಚ್ಚ ವೆಂಕಟ್ ಸಾರಥ್ಯದಲ್ಲಿ ‘ಲೈಫ್ ಓಕೆ’ ಕಾರ್ಯಕ್ರಮ ಸಾಮಾಜಿಕ ಕಳಕಳಿಯೊಂದಿಗೆ ಸೋಮವಾರದಿಂದ ಶುಕ್ರವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ 65 ಸಂಚಿಕೆಗಳಲ್ಲಿ ಪ್ರಸಾರವಾದ ಪ್ರೇಮ ಕಥೆ ‘ಧಾರವಾಡದಾಗೊಂದ್ ಲವ್ ಸ್ಟೋರಿ’ ಮತ್ತಷ್ಟು ಮುದ ನೀಡಲಿದೆ.

'ಪರಪಂಚ' ಚಿತ್ರದ ಹುಟ್ಟಿದ ಊರನ್ನು ಮತ್ತೆ ಮತ್ತೆ ಕೇಳ್ತಿದ್ದಾರೆ ಮಂದಿ.

ನಿರೂಪಕಿ ಅಪರ್ಣಾ ನಡೆಸಿಕೊಡುವ ‘ಸಿಂಪಲ್ಲಾಗೊಂದ್ ಸಿನಿಮಾ ಕಥೆ’ ಸೋಮವಾರದಿಂದ ಶುಕ್ರವಾರ ರಾತ್ರಿ 9 ಕ್ಕೆ ಮತ್ತಷ್ಟು ವಿಶೇಷವಾಗಿ ಮೂಡಿಬಂದರೆ, ನಿಗೂಢ ರಹಸ್ಯ ಕಾರ್ಯಕ್ರಮ ಇನ್ನಷ್ಟು ಕುತೂಹಲಕಾರಿಯಾಗಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ನಟಿ ರಜನಿ ನಡೆಸಿಕೊಡುವ ನಾರಿಗೊಂದು ಸೀರೆ ಕಾರ್ಯಕ್ರಮ ಬದಲಾದ ಸಮಯದಲ್ಲಿ ಮಧ್ಯಾಹ್ನ 1 ಗಂಟೆಗೆ ಮೂಡಿ ಬರಲಿದೆ.

ಈ ಮೂಲಕ ಹೊಸ ಆಯಾಮದಲ್ಲಿ ಹೊಸದಾಗಿ ವೀಕ್ಷಕರ ಗಮನ ಸೆಳೆಯಲಿದೆ ಸಿರಿಕನ್ನಡ ವಾಹಿನಿ.

 

Follow Us:
Download App:
  • android
  • ios