ಸೀರಿಯಲ್ಗೆ ಚಕ್ಕರ್, ರೊಮಾನ್ಸ್ಗೆ ಹಾಜರ್! 'ಅಮೃತಧಾರೆ' ಜೀವಾ ಕಾಲೆಳಿರಿತೋ ಫ್ಯಾನ್ಸ್
ಅಮೃತಧಾರೆ ಸೀರಿಯಲ್ನಲ್ಲಿ ಜೀವಾ ಪಾತ್ರದಲ್ಲಿ ಕಾಣಿಸಿಕೊಂಡು ಈಗ ಸೀರಿಯಲ್ ಬಿಟ್ಟಿರುವ ಶಶಿ ಹೆಗ್ಡೆ, ಪತ್ನಿ ಲಾವಣ್ಯಾ ಜೊತೆ ರೊಮಾನ್ಸ್ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ.
ಅಮೃತಧಾರೆ ಸೀರಿಯಲ್ನಲ್ಲಿ ಜೀವಾ ಪಾತ್ರದ ಮೂಲಕ ನಾಯಕಿ ಭೂಮಿಕಾ ಸಹೋದರನ ಪಾತ್ರಕ್ಕೆ ಜೀವ ತುಂಬ್ತಿರೋ ನಟ ಶಶಿ ಹೆಗ್ಡೆ ಸೀರಿಯಲ್ ಬಿಟ್ಟು ಹೋಗಿದ್ದಾರೆ. ಹಲವು ಕಂತುಗಳಿಂದ ಜೀವಾ ಮತ್ತು ಪತ್ನಿ ಮಹಿಮಾ ಪಾತ್ರಧಾರಿಗಳು ಮಿಸ್ ಆಗಿದ್ದರು. ಅಷ್ಟಕ್ಕೂ ಈಗ ಸೀರಿಯಲ್ನಲ್ಲಿ ಗೌತಮ್ ದಿವಾನ್ ಅಮ್ಮ-ತಂಗಿಯದ್ದೇ ಎಪಿಸೋಡ್ಗೆ ಪ್ರಾಮುಖ್ಯತೆ ಇದ್ದುದರಿಂದ ಈ ರೋಲ್ ಅಷ್ಟು ಪ್ರಾಮುಖ್ಯತೆ ಪಡೆದುಕೊಂಡಿರಲಿಲ್ಲ. ಆದರೆ ಈಗ ಮನೆಗೆ ಅಮ್ಮ, ತಂಗಿ ಬಂದಾಯ್ತು. ಸೀರಿಯಲ್ ಇನ್ನಷ್ಟು ಎಳೆಯಲು ಭೂಮಿಕಾ ಸಹೋದರ ಜೀವ ಹೊಸ ಮನೆ ಕಟ್ಟಿಸಿರುವ ವಿಷಯ ತುರುಕಲಾಗಿದೆ. ಭೂಮಿಕಾ ತಂದೆ, ತಾಯಿಯೇ ಬಂದು ಭೂಮಿಕಾ ಮತ್ತು ಕುಟುಂಬವನ್ನು ಆಹ್ವಾನಿಸಿದ್ದಾರೆ. ಅದರಂತೆ ಗೌತಮ್ ದಿವಾನ್ ಫ್ಯಾಮಿಲಿ ಮನೆ ಫಂಕ್ಷನ್‌ಗೆ ಬಂದಿದೆ.
ಅಲ್ಲಿ ನೋಡಿದ್ದರೆ ಜೀವಾ ಬದಲಾಗಿದ್ದಾನೆ! ಮನೆ ಕಟ್ಟಿಸಿದ್ದು ತುಂಬಾ ಖುಷಿಯಾಯ್ತು ಎಂದು ಗೌತಮ್ ಹೇಳುತ್ತಿದ್ದಂತೆಯೇ ನಾನು ಮೊದಲಿನ ಜೀವಾ ಅಲ್ಲ ಎಂದು ಎಂಟ್ರಿ ಕೊಟ್ಟರೆ ಶಶಿ ಹೆಗ್ಡೆ ಫ್ಯಾನ್ಸ್ ಶಾಕ್.ಏಕೆಂದ್ರೆ ಮೊದಲಿನ ಜೀವಾ ಅಲ್ಲಿಲ್ಲ. ಅಲ್ಲಿ ಇರುವುದು ಬೇರೆಯ ನಟ. ಗೌತಮ್ ದಿವಾನ್ ಕುಟುಂಬವನ್ನು ಸರ್ವನಾಶ ಮಾಡಲು ಪಣತೊಟ್ಟಿರುವ ವಿಲನ್ ಜೀವಾದ ಸಹಾಯ ಮಾಡಿದ್ದಾನೆ. ಈ ರೀತಿಯಲ್ಲಿ ಸೀರಿಯಲ್ ಈಗ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಒಂದು ಪಾತ್ರದಲ್ಲಿ ಒಬ್ಬರನ್ನು ತುಂಬಾ ದೀರ್ಘ ಅವಧಿಯವರೆಗೆ ನೋಡಿದಾಗ, ವೀಕ್ಷಕರಿಗೆ ಆ ಜಾಗದಲ್ಲಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದು, ಅವರನ್ನು ಸಹಿಸಿಕೊಳ್ಳುವುದು ತುಸು ಕಷ್ಟವೇ. ಈ ಸೀರಿಯಲ್ನಲ್ಲಿ ಜೀವಾ ಪಾತ್ರ ಅಷ್ಟು ದೊಡ್ಡ ಪಾತ್ರವಲ್ಲದಿದ್ದರೂ ಹಿಂದಿನ ಜೀವಾ ಬದಲಾಗಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಮೃತಧಾರೆಯ ಜೀವ ಪಾತ್ರಧಾರಿ ಚೇಂಜ್! ಶಶಿ ಹೆಗಡೆ ರೀಲ್ಸ್ ಮಾಡ್ತಾ ಸೀರಿಯಲ್‌ನೇ ಮರ್ತುಬಿಟ್ರಾ?
ಆದರೆ, ಇದೀಗ ಹಳೆಯ ಜೀವಾ, ಸೀರಿಯಲ್ಗೆ ಚಕ್ಕರ್ ಕೊಟ್ಟು ರೊಮ್ಯಾನ್ಸ್ಗೆ ಹಾಜರು ಆಗಿದ್ದಾರೆ! ಅಂದಹಾಗೆ ಶಶಿ ಹೆಗ್ಡೆ ಅವರು, ಶ್ರೀರಸ್ತು ಶುಭಮಸ್ತು ಸೀರಿಯಲ್ ಒಳ್ಳೆಯ ಸೊಸೆ ಪೂರ್ಣಿಯ ರಿಯಲ್ ಪತಿ. ಎರಡು ವರ್ಷಗಳ ಹಿಂದೆ ಈ ಜೋಡಿ ಮದುವೆಯಾಗಿದೆ. ಅಷ್ಟಕ್ಕೂ ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆದ್ರು.
ಮದುವೆಯ ಬಳಿಕದ ಫಸ್ಟ್ ನೈಟ್ ಲವ್ ಸ್ಟೋರಿಯನ್ನು ಜೋಡಿ ನಂ.1ನಲ್ಲಿ ಈ ಜೋಡಿ ಶೇರ್ ಮಾಡಿಕೊಂಡಿತ್ತು. ಫಸ್ಟ್ ನೈಟ್‌ನಲ್ಲಿ ಈಕೆಯ ಕಸಿನ್ಸ್ ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು, ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು. ಅದೇ ರೀತಿ ಹನಿಮೂನ್‌ಗೆ ಮಾಲ್ದೀವ್ಸ್ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಮನಾಲಿಗೆ ಹೋಗಿ ಬರುವ ಮೂಲಕ ಸ್ವಲ್ಪ ಮಟ್ಟಿನ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ಶ್ರೀರಸ್ತು ಶುಭಮಸ್ತು ಪೂರ್ಣಿ ಪತಿ, ಅಮೃತಧಾರೆ ಜೀವಾಗೆ ಹುಟ್ಟುಹಬ್ಬದ ಸಂಭ್ರಮ: ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ