ಸೀರಿಯಲ್ ಮದುವೆಗಳಲ್ಲಿ ನಿಜಕ್ಕೂ ಮೂರು ಗಂಟು ಹಾಕ್ತಾರಾ?
ಸೀರಿಯಲ್ ಮದುವೆಯಲ್ಲಿ ತಾಳಿ ಕಟ್ಟುವಾಗ ಎಷ್ಟು ಗಂಟು ಹಾಕ್ತಾರೆ ಅನ್ನೋ ಪ್ರಶ್ನೆಯನ್ನು ನಟ ಹರೀಶ್ ರಾಜ್ ವೀಕ್ಷಕರಲ್ಲಿ ಕೇಳಿದ್ದಾರೆ. ಕೊನೆಗೆ ಅವರು ಇದಕ್ಕೆ ಸ್ವಷ್ಟ ಉತ್ತರವನ್ನೂ ನೀಡಿದ್ದಾರೆ. ಅಷ್ಟಕ್ಕೂ ಸೀರಿಯಲ್ ಮದುವೆಯಲ್ಲಿ ಎಷ್ಟು ಗಂಟು ಹಾಕ್ತಾರೆ?
ಹತ್ತಾರು ಬಾರಿ ಬ್ರೇಕಪ್, ನೂರಾರು ಅಡೆತಡೆಗಳ ನಡುವೆ ನಾಯಕಿ ನಾಯಕಿ ನಡುವೆ ಒಂದು ಮದುವೆ ನಡೆದಾಗ ಎಲ್ಲರೂ ಒಮ್ಮೆ ನಿಟ್ಟುಸಿರು ಬಿಡುತ್ತಾರೆ. ಹೆಲಿಕಾಪ್ಟರ್, ರೆಸಾರ್ಟ್, ಐಷಾರಾಮಿ ಸೆಟ್ಟಿಂಗ್‌ಗಳು.. ಈ ಸೀರಿಯಲ್ ಮದುವೆಗಳಿಗೆ ಖರ್ಚು ಮಾಡೋ ಹಣ ಯಾವ ರಿಯಲ್ ಮದುವೆಗೂ ಕಮ್ಮಿ ಇಲ್ಲದ್ದು. ಆದರೆ ಇದು ರಿಯಲ್ ಮದುವೆ ಅಂತೂ ಅಲ್ಲ. ರೀಲ್ ಮದುವೆ. ನೀವು ಶಿವಣ್ಣ ನಟನೆಯ 'ಕುರುಬನ ರಾಣಿ' ಸಿನಿಮಾ ನೋಡಿದ್ರೆ ಅದ್ರಲ್ಲಿ ಒಂದು ಇಂಟರೆಸ್ಟಿಂಗ್ ಸೀನ್ ಇದೆ. ಇದರಲ್ಲಿ ಹಳ್ಳಿಯ ಮುಗ್ಧನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ನಗ್ಮಾ ಜನಪ್ರಿಯ ನಟಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಮದುವೆ ಗಂಡು ಪಾತ್ರ ಮಾಡೋ ನಟ ಕೈ ಕೊಟ್ಟ ಕಾರಣ ಹಳ್ಳಿ ಹೈದ ಶಿವಣ್ಣನನ್ನು ಮದು ಮಗನ ವೇಷ ಹಾಕಿ ಮಂಟಪದಲ್ಲಿ ತಂದು ಕೂರಿಸಿ ತಾಳಿ ಕಟ್ಟಲು ಹೇಳ್ತಾರೆ. ರಾಜಕುಮಾರಿಯಂಥಾ ಹುಡುಗಿ ತನಗೆ ಸಿಕ್ಕಿದ್ದಕ್ಕೆ ಹಿರಿ ಹಿರಿ ಹಿಗ್ಗಿದ ಆ ಹಳ್ಳಿ ಹೈದ ಆಕೆಗೆ ಮೂರು ಗಂಟು ಹಾಕೇ ಬಿಡ್ತಾನೆ. ಸೀನ್ ಮುಗಿದಾಕ್ಷಣ ಆಕೆ ತಾಳಿ ಕಳಚಿಡುತ್ತಾಳೆ. ರೀಲಿನಲ್ಲಿ ಇದು ಆಕೆಗೆ ಎಷ್ಟನೇ ಮದುವೆಯೋ. ಆದರೆ ಈ ವ್ಯತ್ಯಾಸ ಗೊತ್ತಿಲ್ಲದೇ ಬೆಚ್ಚಿ ಬೀಳುವ ಸರದಿ ಆ ಹಳ್ಳಿ ಹೈದನದು.
ಎಷ್ಟೋ ಹೆಣ್ಮಕ್ಕಳ ದಿನಚರಿಯ ಭಾಗವೇ ಆಗಿರೋ ಸೀರಿಯಲ್‌ಗಳಲ್ಲಿ ಮದುವೆ ಫಿಕ್ಸ್ ಆಗೋದು, ಮಿಸ್ ಆಗೋದು, ಮದುವೆ ಆಗುವಲ್ಲಿ ಏನೇನೋ ಅಡೆತಡೆಗಳು, ಕೊನೇ ಹಂತದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನೋವಾಗ ನಿಲ್ಸಿ ಅನ್ನೋ ಸೀನ್‌ಗಳೆಲ್ಲ ಕಾಮನ್.
ಇನ್ನು ರಿಯಲ್ ವಿವಾಹದ ಸಮಯದಲ್ಲಿ ಮಾಂಗಲ್ಯಕ್ಕೆ ವಿಶೇಷ ಮಹತ್ವವಿದೆ. ಮದುವೆಯ ಸಂದರ್ಭದಲ್ಲಿ ಮಂಗಳಸೂತ್ರ ಅಥವಾ ಅರಿಶಿನದ ಕೊಂಬಿರುವ ಅರಿಶಿನ ದಾರವನ್ನ ವಧುವಿನ ಕುತ್ತಿಗೆಗೆ ವರ ಮೂರು ಗಂಟು ಹಾಕಿ ಕಟ್ಟುತ್ತಾನೆ. ತಾಳಿ ಕಟ್ಟುವ ವೇಳೆ ಹಾಕುವ ಮೂರು ಗಂಟು ವೈವಾಹಿಕ ಜೀವನದಲ್ಲಿ (Married Life) ಮುಖ್ಯವಾಗಿರುವ ಮೂರು ಅಂಶಗಳನ್ನು ಸೂಚಿಸುತ್ತದೆ. ಒಂದೊಂದು ಗಂಟಿಗೂ ಒಂದೊಂದು ಅರ್ಥವಿದೆ. ಮೊದಲನೆಯ ಗಂಟು ಪತಿ-ಪತ್ನಿಯರ ನಡುವಿನ ಪರಸ್ಪರ ಪ್ರೇಮ (Love), ಗೌರವವನ್ನ (Respect) ಸೂಚಿಸಿದರೆ, ಎರಡನೆಯ ಗಂಟು ಕೌಟುಂಬಿಕ ಸೌಹಾರ್ದತೆಗೆ (Family Harmony) ಮೀಸಲು. ಮೂರನೆಯ ಗಂಟು ದೇವರಿಗೆ ಅರ್ಪಣೆ.
ನಟಿ ವೈಷ್ಣವಿ ಹಾಟ್ ಪೋಟೋಸ್ ನೋಡಿದ್ರಾ?
ಹೀಗಂತ ಸೀರಿಯಲ್‌ನ ಮದುವೆ ಬಗ್ಗೆ ಒಂದು ಫೇಮಸ್ ಮಾತಿದೆ. ಅಲ್ಲಿ ಮದು ಮಗಳ ಪಾತ್ರ ಮಾಡುವ ನಟಿಯರು ತಾಳಿ ಕಟ್ಟೋ ನಟರಲ್ಲಿ ಮೊದಲೇ ಒಂದು ಬೇಡಿಕೆ ಇಡುತ್ತಾರಂತೆ. 'ಮೂರು ಗಂಟು ಹಾಕ್ಬೇಡಿ' ಅಂತ. ಈ ಬಗ್ಗೆ ಜನರಲ್ಲಿ ಅನೇಕ ಅನುಮಾನಗಳಿವೆ. ಈ ಸೀರಿಯಲ್ ಮದುವೆಗಳಲ್ಲಿ ತಾಳಿ ಕಟ್ಟುವಾಗ ಎಷ್ಟು ಗಂಟು ಹಾಕ್ತಾರೆ ಅಂತ. ಇತ್ತೀಚೆಗೆ 'ಜೊತೆ ಜೊತೆಯಲಿ' ಸೀರಿಯಲ್ ವೈಂಡ್‌ಅಪ್ (Windup) ಆಯ್ತು. ಕೊನೆಯಲ್ಲಿ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಮತ್ತೆ ಮದುವೆ ಆಗೋ ಸೀನ್ ಇತ್ತು. ಈ ಸೀನ್ ಬಗ್ಗೆ ಬರೆಯುತ್ತಾ ಆರ್ಯವರ್ಧನ್ ಪಾತ್ರ ಮಾಡಿದ ಹರೀಶ್ ರಾಜ್ ಒಂದು ಪ್ರಶ್ನೆಯನ್ನು ವೀಕ್ಷಕರಿಗೆ ಕೇಳಿದ್ರು, 'ಶೂಟಿಂಗ್‌ನಲ್ಲಿ ತಾಳಿ ಕಟ್ಟೋವಾಗ ಎಷ್ಟು ಗಂಟು ಹಾಕ್ತೀವಿ?' ಅನ್ನೋ ಪ್ರಶ್ನೆ. ಇದಕ್ಕೆ ನಾನಾ ಬಗೆಯ ಉತ್ತರ ಬಂತು.
'ನೀವು ಗಂಟು ಹಾಕೋದೇ ಇಲ್ಲ ಅನ್ಸುತ್ತೆ. ಗಂಟು ಹಾಕುವ ತರಹ ತೋರಿಸ್ತೀರಾ. ಆದರೆ ಗಂಟು ಹಾಕಿರೋದಿಲ್ಲ’, ‘ನೀವು ತಾಳಿ ಕಟ್ಟೋದು ಕ್ಯಾಮರಾಗೆ (camara) ಅನ್ಸುತ್ತೆ’, ‘ಒಂದೇ ಗಂಟು ಹಾಕ್ತೀರಿ' 'ಎರಡು ಗಂಟು ಹಾಕ್ತೀರಾ.. ಮೂರು ಗಂಟು ಹಾಕೋ ತರಹ ಕೈ ಮೂವ್‌ಮೆಂಟ್ ಮಾಡ್ತೀರಾ’, ‘ಒಂದು ಅಥವಾ ಎರಡು ಗಂಟು ಹಾಕ್ತೀರಾ' ಅಂತೆಲ್ಲ ಕಮೆಂಟ್ಸ್ (Comments) ಬಂತು.
ಇದಕ್ಕೆ ಉತ್ತರಿಸಿದ ಹರೀಶ್ ರಾಜ್, 'ನಾವು ಒಂದೇ ಶಾಟ್‌ನ ಬೇರೆ ಬೇರೆ ಆಂಗಲ್‌ನಲ್ಲಿ ಶೂಟಿಂಗ್(Shooting) ಮಾಡ್ತೀವಿ. ಹೀಗಾಗಿ, ಕಮ್ಮಿ ಆಂದರೂ ಐದಾರು ಗಂಟು ಹಾಕಿರುತ್ತೇವೆ' ಎಂದಿದ್ದಾರೆ. ಅಲ್ಲಿಗೆ ವೀಕ್ಷಕರ ಡೌಟ್ ಕ್ಲಿಯರ್(Doubt clear) ಆದಂಗಾಯ್ತು.
Bhagyalakshmi serial : ಮೈ ತುಂಬಾ ಬಟ್ಟೆ ಹಾಕೋದು ಭಾಗ್ಯ ನೋಡಿ ಕಲಿ ಎಂದ ತಾಂಡವ್, ಶ್ರೇಷ್ಠಾಗೆ ಹೆಚ್ಚಾಯ್ತು ಉರಿ!