Asianet Suvarna News Asianet Suvarna News

ಮುಗುತಿಯಾಗಿದ್ರೆ ಇವ್ಳ ಮೂಗಲ್ಲೇ ಇರ್ತಿದ್ದೆ ಎಂದ ಗಾಯಕ! ಹುಷಾರಪ್ಪಾ, ಬಾಯ್​ಫ್ರೆಂಡ್ ಇದ್ದಾನೆ ಅಂತಿದ್ದಾರೆ ಫ್ಯಾನ್ಸ್​

ಮುಗುತಿಯ ಬಗ್ಗೆ ಸೀತಾರಾಮ ಪ್ರಿಯಾ ಮೇಘನಾ ಶಂಕರಪ್ಪ ರೀಲ್ಸ್​  ಮಾಡಿದ್ರೆ ಎಂಗೇಜ್​ಮೆಂಟ್​ ಸುದ್ದಿ ಹೇಳ್ತಿದ್ದಾರೆ ಫ್ಯಾನ್ಸ್​. 
 

Seetarama Priya Meghana Shankarappa made reels about nosering fans about engagement suc
Author
First Published Jul 2, 2024, 5:52 PM IST

ಸೀತಾರಾಮ ಪ್ರಿಯಾ ಸದ್ಯ ಸೀತಾ ಮತ್ತು ರಾಮ ಅವರ ಮದ್ವೆಯಲ್ಲಿ ಸಕತ್​ ಬಿಜಿಯಾಗಿದ್ದಾಳೆ. ಆದರೆ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಹೊಸ ರೀಲ್ಸ್​ ಒಂದನ್ನು ಮಾಡಿದ್ದಾರೆ. ಅದರಲ್ಲಿ ಅವರು ಮುಗುತಿಯನ್ನು ಧರಿಸಿ ಒಂದು ರೀಲ್ಸ್​ ಮಾಡಿದ್ದಾರೆ. ಇದಕ್ಕೆ ಹಿನ್ನೆಲೆಯಲ್ಲಿ, ಮೂಗುಬೊಟ್ಟನ್ನು ಸುಮ್ನೆ ಇಟ್ಕೊಂಡಿದ್ರಾ, ತೂತು ಮಾಡಿ ಹಾಕ್ಕೊಂಡಿದ್ರಾ ಎಂದು ಪ್ರಶ್ನಿಸಲಾಗಿದೆ. ಮೂಗುಬೊಟ್ಟಾಗಿ ಹುಟ್ಟಿದ್ರೆ ನಾನು ಇವಳ ಮುಗುತಿಯಲ್ಲೇ ಇರ್ಬೋದಿತ್ತು ಎಂಬ ಹಿನ್ನೆಲೆಯಲ್ಲಿಯೇ ಈ ರೀಲ್ಸ್​ ಮಾಡಲಾಗಿದೆ. ಈ ರೀಲ್ಸ್​ಗೆ ಥಹರೇವಾರಿ ಕಮೆಂಟ್ಸ್​ ಬರುತ್ತಿವೆ. ಮೇಘನಾ ಅವರು ಇದಾಗಲೇ ಎಂಗೇಜ್​ ಆಗಿರುವುದಾಗಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಅದಕ್ಕಾಗಿಯೇ ಮುಗುತಿ ಗಿಗುತಿ ಅನ್ಬೇಡ್ರಿ, ಇವರು ಎಂಗೇಜ್​ ಆಗಿದ್ದಾರೆ ಎಂದು ತಮಾಷೆ ಮಾಡುತ್ತಿದ್ದಾರೆ. 

ಕೆಲ ದಿನಗಳ ಹಿಂದೆ ಮೇಘನಾ ಅವರು,  ತಾವು ಕಮಿಟೆಡ್ ಎನ್ನುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ತಮ್ಮ ಬಾಯ್‌ಫ್ರೆಂಡ್  ಜನ್ಮದಿನದ ಪ್ರಯುಕ್ತ ಇಬ್ಬರೂ ಒಂದೇ ತರಹದ ಉಂಗುರ ಧರಿಸಿ ಕೈಮೇಲೆ ಕೈ ಇಟ್ಟು ಫೋಟೋ ತೆಗೆದುಕೊಂದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ವಿಶ್ ಮಾಡಿದ್ದರು. ಇದರಿಂದ ಮೇಘನಾ ಕಮಿಟೆಡ್ ಎಂಬುದು ಈಗ ಶೇ.100 ಸಾಬೀತಾಗಿತ್ತು. ಅಷ್ಟಕ್ಕೂ ಸೀತಾರಾಮ ಸೀರಿಯಲ್​ನಲ್ಲಿ ಇವರ ಮತ್ತು ಅಶೋಕ್​ ಜೋಡಿ ನೋಡಿ ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಿ ಅಂತಿದ್ದೋರೇ ಹೆಚ್ಚು. ಅಭಿಮಾನಿಗಳು ಅಂದ್ರೆ ಹಾಗೇ ಅಲ್ವಾ? ಒಂದು ಸೀರಿಯಲ್​ನಲ್ಲಿ ನಾಯಕ-ನಾಯಕಿ ಅಥವಾ ಒಂದು ಜೋಡಿ ಸೂಪರ್​ ಹಿಟ್​ ಆಯ್ತು ಅಂದ್ರೆ ಸಾಕು, ನಿಜ ಜೀವನದಲ್ಲಿಯೂ ಒಂದಾಗಿ ಅನ್ನುತ್ತಾರೆ. 

ಒಂದು ಜೋಕ್​ ಹೇಳ್ತೀನಿ ಅಂತ ಇಂಥ ಜೋಕ್​ ಹೇಳೋದಾ ಸೀತಾರಾಮ ಪ್ರಿಯಾ?

ಸೀತಾ ಮತ್ತು ರಾಮ್​  ಪಾತ್ರಧಾರಿಗಳಿಗೂ ಈ ಮಾತನ್ನು ಅದೆಷ್ಟೋ ಬಾರಿ ವೀಕ್ಷಕರಿಂದ  ಕೇಳಿಬಂದಿರುವುದು ಇದೆ. ಅಶೋಕ್​  ಮತ್ತು ಪ್ರಿಯಾ ಪಾತ್ರವನ್ನು ಅಭಿಮಾನಿಗಳು ಅದೆಷ್ಟು ಮೆಚ್ಚಿಕೊಂಡಿದ್ದಾರೆ ಎಂದರೆ, ನಿಜ ಜೀವನದಲ್ಲಿಯೂ ಇಬ್ಬರೂಮದುವೆಯಾಗಿ ಪ್ಲೀಸ್​, ನಿಮ್ಮ ಜೋಡಿ ಸೂಪರ್​ ಎಂದು ಅಭಿಮಾನಿಗಳು ಕಮೆಂಟ್​  ಮಾಡುತ್ತಿದ್ದರೆ, ಅವರಿಗೆಲ್ಲಾ ಮೇಘನಾ ಇದಾಗಲೇ ಬಾಯ್​ಫ್ರೆಂಡ್​ ವಿಷಯ ತಿಳಿಸಿದ್ದಾರೆ. ಮೇಘನಾ ಶಂಕರಪ್ಪ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  

ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  

ಸೀತಾರಾಮ ಪ್ರಿಯಾ-ಅಶೋಕ್​ ಭರ್ಜರಿ ಸ್ಟೆಪ್​ ಹಾಕಿದ್ರೆ ಅಭಿಮಾನಿಗಳು ಹೀಗೆ ಹೇಳೋದಾ?

Latest Videos
Follow Us:
Download App:
  • android
  • ios