ಕನ್ನಡತಿ ನಟಿಯ ಫೇಸ್‌ಬುಕ್ ಪೇಜ್ ಮೇಲೆ ಹ್ಯಾಕರ್ಸ್ ಕಣ್ಣು | ರಂಜನಿ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಿದ ಹ್ಯಾಕರ್ಸ್

ಇತ್ತೀಚೆಗೆ ಟಾಪ್ ಸೆಲೆಬ್ರಿಟಿಗಳು ಮಾತ್ರವಲ್ಲ ಕಿರುತೆರೆ ನಟ ನಟಿಯರ ಸೋಷಿಯಲ್ ಮೀಡಿಯಾ ಎಕೌಂಟ್‌ಗಳೂ ಹ್ಯಾಕ್ ಆಗುತ್ತಿವೆ. ಗೊತ್ತಿರದ ಫ್ರೆಂಡ್ ರಿಕ್ವೆಸ್ಟ್‌ಗಳು ಬರುವುದು, ಫಾಲೋವರ್ಸ್ ಹೀಗೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ.

ಇದೀಗ ಕನ್ನಡತಿ ನಟಿ ರಂಜನಿ ರಾಘವನ್‌ಗೂ ಹ್ಯಾಕರ್ಸ್ ಕಾಟ ಕೊಟ್ಟಿದ್ದಾರೆ. ಹೌದು ನಟಿಯ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದೆ. ಇದನ್ನು ಸ್ವತಃ ನಟಿಯೇ ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ನಟಿ ರಂಜನಿ ತುಟಿಯಲ್ಲಿ ಗಾಯದ ಗುರುತು..! ಏನಾಯ್ತು ?

ನನ್ನ ಫೇಸ್‌ಬುಕ್ ಪೇಜ್ ಈ ವ್ಯಕ್ತಿಯಿಂದ ಹ್ಯಾಕ್ ಆಗಿದೆ. ದಯವಿಟ್ಟು ರಿಪೋರ್ಟ್ ಮಾಡಿ ನನಗೆ ನನ್ನ ಪೇಜ್ ಸಿಗಲು ನೆರವಾಗಿ ಎಂದು ನಟಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

View post on Instagram

ಸೈಬರ್‌ಕ್ರೈಂಗೆ ರಿಪೋರ್ಟ್ ಮಾಡಿ, ನಿಮ್ಮ ಪೇಜ್ ಸಿಗುತ್ತಿಲ್ಲ ಎಂದು ಬಹಳಷ್ಟು ಜನರು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ತಾವು ರಿಪೋರ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.