ಬಿಗ್ ಬಾಸ್‌ ಮನೆಯಲ್ಲಿ 10 ವಾರ ಕಳೆದ ನಂತರ ಬ್ರೋ ಗೌಡ ಅಲಿಯಾಸ್ ಶಮಂತ್ ಗೇಮ್ ಪ್ಲಾನ್ ಮಾಡಲು ಆರಂಭಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಆಗಮನದ ನಂತರ  ಶಮಂತ್‌ಗೆ ಒಂದೊಳ್ಳೆ ಜೋಡಿ ಸಿಕ್ಕಂತಾಗಿದೆ. ಪ್ರಿಯಾಂಕಾ ಬಳಿ ಟಿಪ್ಸ್ ಪಡೆದುಕೊಂಡು ರಘು ಗೌಡ ವಿರುದ್ಧವೇ ಸ್ಪರ್ಧಿಸುವೆ ಎಂದು ಪದೆ ಪದೇ ಹೇಳುವ ಶಮಂತ್ ಮನಸ್ಸಿನಲ್ಲಿ ಏನಿದೆ ಎಂದು ಇನ್ನಿತರ ಸದಸ್ಯರು ಆಲೋಚಿಸುತ್ತಿದ್ದಾರೆ.

ಚಿಕ್ ಆ್ಯಂಡ್ ಚಿಕನ್ ಒಂದೇ ಎಂದೇಳಿದ ಶಮಂತ್ ತಲೆಗೆ ಹುಳ ಬಿಟ್ಟ ಪ್ರಿಯಾಂಕಾ; ಎಲಿಮಿನೇಷನ್ ಶುರು? 

'ಸುಮ್ಮನೆ ತಿಂದು-ಉಂಡುಕೊಂಡು ಇದ್ದರೆ ಬಿಗ್ ಬಾಸ್ ಅವರು ಮನೆಯಿಂದ ಹೊರಗಡೆ ಕಳುಹಿಸುತ್ತಾರೆ,' ಅಂತ ಶಮಂತ್ ಪ್ರಿಯಾಂಕಾಗೆ ಹೇಳುತ್ತಾರೆ. ಶಮಂತ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ನಂತರ ಪ್ರಿಯಾಂಕ ಬೇಸರ ಮಾಡಿಕೊಂಡಿದ್ದು, ಮಾತು ಬಿಟ್ಟಿದ್ದಾರೆ. ಈ ಸಮಯದಲ್ಲಿ ಪ್ರಶಾಂತ್ ಸಂಬರಗಿ ಇವರಿಬ್ಬರು ಪ್ರೀತಿ ಮಾಡುತ್ತಿದ್ದರೂ ಹೇಳಿಕೊಳ್ಳುತ್ತಿಲ್ಲ, ಎಂದು ಚಕ್ರವರ್ತಿ ಜೊತೆ ಚರ್ಚೆ ಮಾಡುತ್ತಾರೆ. 

'ನೀನು ಯಾಕೆ ಲವ್ ಸಿಂಬಲ್ ತೋರಿಸಿದೆ? ನಾನು ಶಮಂತ್ ಹತ್ರ ಸೀರಿಯಸ್ ಆಗಿ ಮಾತನಾಡ್ತೀನಿ. ನೀನು ತಮಾಷೆಯನ್ನು ಸೀರಿಯಸ್ ಆಗಿ ತಗೊಂಡೆ. ನಾನು ನಿನ್ನ ಕೇರ್ ಮಾಡ್ತೀನಿ. ನನ್ನ ತಾಕತ್ತು ಕರ್ನಾಟಕಕ್ಕೆ ಗೊತ್ತಿದೆ. ಮದುವೆ ಮಾಡಿಸಿ ಬಿಡಬೇಕು ಅಂತ ಅಂದು ಕೊಂಡಿದ್ದೆ. ಇನ್ನು 5 ವರ್ಷ ಮದುವೆ ಆಗಬೇಡ, ಕರಿಯರ್ ಗಟ್ಟಿ ಮಾಡಿಕೋ,' ಎಂದು ಚಕ್ರವರ್ತಿ ಪ್ರಿಯಾಂಕಾಗೆ ಹೇಳುತ್ತಾರೆ.

ಇವರಿಬ್ಬರ ಪ್ರೀತಿ ವಿಚಾರವನ್ನ ಪ್ರಸ್ತಾಪಿಸಿ ಮದುವೆ ಮಾಡಿಸಬೇಕು ಎಂದು ಚಕ್ರವರ್ತಿ ನಿರ್ಧರಿಸುತ್ತಾರೆ. ಇಬ್ಬರು ಮದುವೆ ಬಗ್ಗೆ ಮಾತನಾಡಿದಾಗ ಪ್ರಿಯಾಂಕಾ ಕೋಪ ಮಾಡಿಕೊಳ್ಳುತ್ತಾರೆ. 'ನಿಮಗೆ ಸೆನ್ಸ್‌ ಇಲ್ವಾ? ಯಾಕೆ ಜಾಸ್ತಿ ಮಾತನಾಡುತ್ತಿದ್ದೀರಾ? ಕ್ಯಾಪ್ಟನ್ ಜವಾಬ್ದಾರಿ ಇದೆ. ನೀವು ಯಾರು ನನ್ನ ಕೇರ್ ಮಾಡೋಕೆ? ನಮ್ಮ ಮನೆಯಲ್ಲಿ ಇದ್ದಾರೆ ನನ್ನ ಕೇರ್ ಮಾಡೋಕೆ. ನಿಮಗೇನು ತಾಕತ್ತಿದೆ ನನ್ನ ಕೇರ್ ಮಾಡೋಕೆ? ನನ್ನ ಮದುವೆ ಬಗ್ಗೆ ಯಾಕೆ ಮಾತನಾಡುತ್ತೀರಾ? ಯಾವಾಗ ಬೇಕಿದ್ದರೂ ಮದುವೆ ಆಗ್ತೀನಿ. ನಾಳೆ ಆದರೂ ಮದುವೆ ಆಗ್ತೀನಿ, 5 ವರ್ಷ ಬಿಟ್ಟು ಮದುವೆ ಆಗ್ತೀನಿ ಇಲ್ಲ ಅಂದ್ರೆ ಮದುವೆ ಆಗದೆಯೂ ಇರ್ತಿನಿ,' ಎಂದು ಸಿಟ್ಟು ಮಾಡಿಕೊಂಡು ಮಲಗುವುದಕ್ಕೆ ಹೋಗಿದ್ದಾರೆ.