ಪೂರ್ಣಿ, ಸಮರ್ಥ್ ಈಗ ತುಳಸಿಯ ಗುರುಗಳು: ದುರಹಂಕಾರಿಗಾಗಿ ಈ ಬದಲಾವಣೆ ಬೇಕಾ ಕೇಳಿದ ಫ್ಯಾನ್ಸ್
ಅವಿಗಾಗಿ ತುಳಸಿ ಡ್ರೈವಿಂಗ್ ಮತ್ತು ಡ್ಯಾನ್ಸ್ ಕಲಿಯುತ್ತಿದ್ದಾಳೆ. ಪೂರ್ಣಿ ಡ್ಯಾನ್ಸ್ ಹಾಗೂ ಸಮರ್ಥ್ ಡ್ರೈವಿಂಗ್ ಹೇಳಿಕೊಡುತ್ತಿದ್ದಾರೆ. ನೆಟ್ಟಿಗರು ಏನೆಲ್ಲಾ ಹೇಳಿದ್ರು ನೋಡಿ...
ಅವಿ ಮತ್ತು ಅಭಿಯನ್ನು ಮಗ ಎಂದುಕೊಂಡಿರೋ ತುಳಸಿಗೆ ತನ್ನ ಹೆತ್ತ ಮಕ್ಕಳಂತೆಯೇ ಇವರ ಪ್ರೀತಿಯೂ ಮುಖ್ಯ. ಇದೇ ಕಾರಣಕ್ಕೆ ಅವರ ಖುಷಿಯಾಗಿ ತುಳಸಿ ಏನು ಬೇಕಾದರೂ ಮಾಡಲು ರೆಡಿ ಇರುತ್ತಾಳೆ. ಅವಿ ಇದಾಗಲೇ ತುಳಸಿಯ ಮೇಲೆ ಅಕ್ಕರೆ ತೋರುತ್ತಿದ್ದರೆ, ಅಭಿಗೋ ಮುಂಗೋಪ ಜಾಸ್ತಿ. ಅಪ್ಪನನ್ನು ಮದುವೆಯಾಗಿರುವ ಈ ಹೆಂಗಸು ತನ್ನ ಅಮ್ಮನಾಗಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾನೆ. ಇದನ್ನೇ ಶಾರ್ವರಿ ಮತ್ತು ದೀಪಿಕಾ ಮಿಸ್ಯೂಸ್ ಮಾಡಿಕೊಂಡದ್ದೂ ಇದೆ. ಇದಾಗಲೇ ಅಭಿಯ ಖುಷಿಯಾಗಿ ತುಳಸಿ ಮನೆಯ ಕೀ ಗೊಂಚಲನ್ನು ಅಭಿಯ ಕೈಗೆ ಇತ್ತು, ಇದು ನನಗೆ ಬೇಡ, ನೀನೇ ಇಟ್ಟುಕೋ. ನಾನು ನಿನ್ನ ಅಮ್ಮ ಎಂದು ಒಪ್ಪಿಕೊಂಡ ದಿನ ಇದನ್ನು ನನಗೆ ವಾಪಸ್ ಕೊಡು ಎಂದಿದ್ದಾಳೆ. ಅಷ್ಟಕ್ಕೂ ತುಳಸಿಯಿಂದ ಮನೆ ಯಜಮಾನಿಕೆ ಪಟ್ಟ ಕಸಿದುಕೊಳ್ಳಲು ಶಾರ್ವರಿ ಮತ್ತು ದೀಪಿಕಾ ಹೊಂಚು ಹಾಕುತ್ತಲೇ ಇದ್ದರು. ಅದು ನನಸಾಗಿದೆ.
ಅಭಿಯ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ತುಳಸಿಗೆ ಇನ್ಸಲ್ಟ್ ಮಾಡುವುದನ್ನು ಬಿಟ್ಟಿಲ್ಲ. ಆ ಮನೆಯ ಯಜಮಾನಿಕೆ ಪಟ್ಟದಿಂದ ಕೆಳಕ್ಕೆ ಇಳಿಯುವಂತೆ ಶಾರ್ವರಿ ತುಳಸಿಗೆ ಪರೋಕ್ಷವಾಗಿ ಹೇಳಿದ್ದಾಳೆ. ಹೋಳಿ ಮುಗಿದ ಮೇಲೆ ಇದಕ್ಕೆ ಉತ್ತರ ಕೊಡುವುದಾಗಿ ತುಳಸಿ ನಗುಮೊಗದಿಂದ ಹೇಳಿ ಹೋಗಿದ್ದಳು. ಇದೀಗ ಕೀಯನ್ನು ವಾಪಸು ಮಾಡಿದ್ದಾಳೆ. ಇದನ್ನು ನೋಡಿ ಶಾರ್ವರಿ ಮತ್ತು ದೀಪಿಕಾ ಒಳಗೊಳಗೇ ಕುಣಿದು ಕುಪ್ಪಳಿಸುತ್ತಿದ್ದಾರೆ.
ರಶ್ಮಿಕಾ @28: ಹುಟ್ಟುಹಬ್ಬಕ್ಕೆ ಬಂದಳು ಗರ್ಲ್ಫ್ರೆಂಡ್, ಶ್ರೀವಲ್ಲಿ! ಅಬುದಾಬಿಯಲ್ಲಿ ಭರ್ಜರಿ ಸೆಲೆಬ್ರೇಷನ್
ಅದೇ ರೀತಿ ಮಗ ಅವಿಗಾಗಿ ತುಳಸಿ ಏನು ಬೇಕೋ ಹಾಗೆ ಬದಲಾಗಲು ರೆಡಿಯಾಗುತ್ತಿದ್ದಾಳೆ. ಹೊಸದಾಗಿ ಅಮ್ಮನ ಸ್ಥಾನ ಪಡೆದಿರೋ ತುಳಸಿಯನ್ನು ಕಂಡರೆ ಆಗ ಅವಿ ಮಾತಿನ ಭರದಲ್ಲಿ ನನ್ನ ಅಮ್ಮನ ಜೊತೆ ನಿಮ್ಮನ್ನು ಕಂಪೇರ್ ಮಾಡಿಕೊಳ್ಳಬೇಡಿ. ಅವರು ಡ್ಯಾನ್ಸರ್ ಆಗಿದ್ರು, ಇಂಗ್ಲಿಷ್ ಚೆನ್ನಾಗಿ ಮಾತಾಡ್ತಿದ್ರು... ಎಂದೆಲ್ಲಾ ಹೇಳಿದ್ದಾನೆ. ಅವನಿಗಾಗಿ ಬದಲಾಗಿ ಅವನ ಪ್ರೀತಿ ಗಳಿಸಬೇಕು ಎನ್ನುವ ತಯಾರಿಯಲ್ಲಿ ಇದ್ದಾಳೆ ತುಳಸಿ. ಮುದ್ದಿನ ಸೊಸೆ, ಅವಿಯ ಪತ್ನಿ ಪೂರ್ಣಿಯ ನೆರವು ಪಡೆದು ಯೂಟ್ಯೂಬ್ನಲ್ಲಿ ತಮಗೆ ಬೇಕಾಗಿರುವುದನ್ನು ಸರ್ಚ್ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿದ್ದಾಳೆ. ಇದೀಗ ಡ್ಯಾನ್ಸ್ ಮತ್ತು ಇಂಗ್ಲಿಷ್ ಕಲಿಕೆಯನ್ನು ಶುರುವಿಟ್ಟುಕೊಂಡಿದ್ದಾಳೆ.
ಆದರೆ ಡ್ಯಾನ್ಸ್ ಕಲಿಕೆಯ ವಿಷಯ ಪೂರ್ಣಿಗೆ ತಿಳಿದಿದೆ. ಇದೇ ಕಾರಣಕ್ಕೆ ಇದೀಗ ಪೂರ್ಣಿಯೇ ತುಳಸಿ ಅಮ್ಮನಿಗೆ ಗುರುವಾಗಿದ್ದಾಳೆ. ಅವಳೇ ಡ್ಯಾನ್ಸ್ ಕಲಿಸುತ್ತಿದ್ದಾಳೆ. ಕಲಿಯಲು ವಯಸ್ಸಿನ ಹಂಗಿಲ್ಲ ಎಂದು ತುಳಸಿಗೆ ಹೇಳುತ್ತಿದ್ದಾಳೆ. ಅದೇ ರೀತಿ ಡ್ರೈವಿಂಗ್ ಕಲಿಕೆಗೆ ತುಳಸಿ ಹೋಗಿದ್ದಾಳೆ. ಚಾಲಕ ಆ ದಿನ ರಜೆ ಇದ್ದುದರಿಂದ ಬದಲಿ ಚಾಲಕನನ್ನು ವ್ಯವಸ್ಥೆ ಮಾಡಿದ್ದಾರೆ. ಆದರೆ ಕಾಕತಾಳೀಯ ಎಂಬಂತೆ ಅದು ಖುದ್ದು ತುಳಸಿಯ ಮಗ ಸಮರ್ಥ್. ಆದರೆ ಹೀಗೆ ಯಾರ್ಯಾರನ್ನೋ ಒಲಿಸಿಕೊಳ್ಳಲು ತುಳಸಿ ಇದನ್ನೆಲ್ಲಾ ಕಲಿಯುತ್ತಿರುವುದ ಇದ್ಯಾಕೋ ಶ್ರೀರಸ್ತು ಶುಭಮಸ್ತು ಸೀರಿಯಲ್ ಕೆಲ ಅಭಿಮಾನಿಗಳಿಗೆ ಹಿಡಿಸುತ್ತಿಲ್ಲ. ತುಳಸಿಯ ಪಾರ್ಟ್ ಜೋಕ್ ಆದಂತೆ ಆಗುತ್ತಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಅವಿಗಾಗಿ ನೀವ್ಯಾಕೆ ಬದಲಾಗಬೇಕು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಆತ ದುರಹಂಕಾರಿ, ಅವನು ಏನು ಬೇಕಾದ್ರೂ ಹೇಳುತ್ತಾನೆ. ಅವನಿಗಾಗಿ ನೀವ್ಯಾಕೆ ಬದಲಾಗಬೇಕು ಎನ್ನುತ್ತಿದ್ದಾರೆ. ಇನ್ನು ಕೆಲವರು ಅಮ್ಮ ಅಮ್ಮನೇ. ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎನ್ನುತ್ತಿದ್ದಾರೆ.
ವಿಷ್ಣು, ರಾಮನ ಅಂಶವೇ ಪ್ರಧಾನಿ ನರೇಂದ್ರ ಮೋದಿ: ನಟಿ ಕಂಗನಾ ಹೇಳಿಕೆ ಭಾರಿ ವೈರಲ್