* ಬಿಗ್ ಬಾಸ್ ಎರಡನೇ ಇನಿಂಗ್ಸ್ ಮೊದಲ ಎಲಿಮಿನೇಶನ್* ಬಿಗ್ ಬಾಸ್ ಪ್ರಯಾಣ ಮುಗಿಸಿದ ನಿಧಿ ಸುಬ್ಬಯ್ಯ* ಅರವಿಂದ್ ಕೆಪಿ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್* ಬಿಗ್ ಬಾಸ್ ಮನೆಯಲ್ಲಿ ಎಲ್ಲರದ್ದೂ ಮುಖವಾಡದ ಬದುಕು
ಬೆಂಗಳೂರು(ಜು. 04) ಬಿಗ್ ಬಾಸ್ ಮನೆಯಿಂದ ನಟಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿದ್ದಾರೆ. ಎರಡನೇ ಇನಿಂಗ್ಸ್ ನ ಮೊದಲ ಎಲಿಮಿನೇಶನ್ ಆಗಿದೆ. ನಿಧಿ ಸುಬ್ಬಯ್ಯ ತಮ್ಮ ಪ್ರಯಾಣ ಮುಗಿದಿದೆ.
ವಾರ ಪೂರ್ತಿ ನಿಧಿ ಜತೆ ಜಗಳ ಮಾಡಿದ್ದೇನೆ ಎಂದು ಶುಭಾ ಕಣ್ಣೀರು ಹಾಕುತ್ತಲೇ ಇದ್ದಾರೆ. ಮನೆಯಿಂದ ಹೊರಬರುವ ವೇಳೆ ನಿಧಿ ಅರವಿಂದ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ಪ್ರಿಯಾಂಕಾ ವರ್ಸಸ್ ಚಕ್ರವರ್ತಿ, ಬೀಪ್ ಸೌಂಡ್ ಹಾಕಿದ ಬಿಗ್ ಬಾಸ್
ಮನೆಯಿಂದ ಹೊರಬಂದ ನಿಧಿ ಸುಬ್ಬಯ್ಯ ಕಿಚ್ಚ ಸುದೀಪ್ ಜತೆ ಅನೇಕ ವಿಚಾರಗಳನ್ನು ವೇದಿಕೆಯಲ್ಲಿ ಮಾತನಾಡಿದ್ದಾರೆ. ಇದು ಎರಡನೇ ಇನಿಂಗ್ಸ್ ಆಗಿದ್ದು ಎಲ್ಲರಿಗೂ ಪರಸ್ಪರ ಸ್ಪರ್ಧಿಗಳ ಪರಿಚಯ ಇದೆ. ಎಲ್ಲರು ಮುಖವಾಡ ಹಾಕಿಕೊಂಡು ಗೇಮ್ ಪ್ಲೇ ಮಾಡುತ್ತಿದ್ದಾರೆ ಎಂದು ನಿಧಿ ನೇರವಾಗಿಯೇ ಹೇಳಿದರು.
ಎರಡನೇ ಇನಿಂಗ್ಸ್ ನಲ್ಲಿ ಹನ್ನೆರಡು ದಿನ ಕಳೆದ ನಿಧಿ ಹೊರಕ್ಕೆ ಬಂದಿದ್ದಾರೆ. ಪ್ರಶಾಂತ್ ಸಂಬರಗಿ ಎಲ್ಲರಿಗಿಂತ ಹೆಚ್ಚು ಮುಖವಾಡ ಹಾಕಿಕೊಂಡು ನಾಟಕ ಮಾಡುತ್ತಿದ್ದಾರೆ. ನಾನು ತುಂಬಾ ನಕ್ಕಿದ್ದೇನೆ ಎಂದು ನಿಧಿ ಸುಬ್ಬಯ್ಯ ಹೇಳಿದರು.
