ಕಲರ್ಸ್ ಕನ್ನಡದ ಜನಪ್ರಿಯ ಶೋ ನಮ್ಮಮ್ಮ ಸೂಪರ್‌ಸ್ಟಾರ್ ನ ಫಿನಾಲೆಯಲ್ಲಿ ಮಂಡ್ಯದ ತಾಯಿ ಚೈತ್ರ ಮತ್ತು ಅವರ ಅವಳಿ ಮಕ್ಕಳು ವಿನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ. 

ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ನಮ್ಮಮ್ಮ ಸೂಪರ್ ಸ್ಟಾರ್' ಗ್ರ್ಯಾಂಡ್ ಫಿನಾಲೆ ನಡೆದಿದೆ. ಅನೇಕ ತಾಯಿ ಮಕ್ಕಳು ಜೊತೆಯಾಗಿ ಕಾಂಪೀಟ್ ಮಾಡೋ ಈ ಸ್ಟೇಜ್‌ ಬಹಳ ಪ್ರಸಿದ್ಧಿ ಪಡೆದಿದೆ. ಅನೇಕ ಸೆಲೆಬ್ರಿಟಿ ತಾಯಿ ಮಕ್ಕಳ ಜೊತೆಗೆ ಸಾಮಾನ್ಯರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ನಮ್ಮಮ್ಮ ಸೂಪರ್‌ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಅಮ್ಮ ಮಕ್ಕಳ ಜೊತೆಗೆ ಕಿರುತೆರೆಯ ಚಿನಕುರುಳಿ ಪಾಪು ವನ್ಶಿಕಾ ಸಹ ನಿರೂಪಕಿಯಾಗಿ ತಾನೆಂಥಾ ಟ್ಯಾಲೆಂಟೆಡ್ ಅಂತ ನಿರೂಪಿಸಿದಳು. ಈ ಕಾರ್ಯಕ್ರಮ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಚರ್ಚೆಗೆ ಗ್ರಾಸವಾಯ್ತು. ಇದೀಗ ಈ ಶೋ ಫೈನಲ್ ಹಂತಕ್ಕೆ ಬಂದು ಇದೀಗ ವಿನ್ನರ್ ಯಾರು ಅನ್ನೋದೂ ಘೋಷಣೆ ಆಗಿದೆ. ಮಂಡ್ಯದ ಅವಳಿ ಮಕ್ಕಳು ಮತ್ತವರ ತಾಯಿಗೆ ನಮ್ಮಮ್ಮ ಸೂಪರ್ ಸ್ಟಾರ್ ವಿನ್ನರ್ ಕಿರೀಟ ಸಿಕ್ಕಿದೆ. ಗ್ರಾಮೀಣ ಭಾಗದ ಪ್ರತಿಭೆಗೆ ಈ ಗೌರವ ಸಿಕ್ಕಿರೋದಕ್ಕೆ ವೀಕ್ಷಕರೂ ಹ್ಯಾಪಿಯಾಗಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಘೋಷಣೆ ನಿನ್ನೆ ತಾನೇ ಆಯ್ತು. ವಿಜೇತರಾಗಿ ಮಂಡ್ಯದ ತಾಯಿ ಚೈತ್ರಾ ಮತ್ತು ಅವರ ಅವಳಿ ಮಕ್ಕಳು ಚಿರಂತ್-ಚಿನ್ಮಯ್ ಆಯ್ಕೆ ಆಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ 'ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2' ಟೈಟಲ್ ವಿಜೇತರಿಗೆ ಪ್ರಶಸ್ತಿ ನೀಡಿದರು. ಮಂಡ್ಯದ ಈ ತಾಯಿ ಮತ್ತು ಅವರ ಅವಳಿ ಮಕ್ಕಳಿಗೆ ರವಿಚಂದ್ರನ್ ಅವರಿಂದ ಪ್ರಶಸ್ತಿ ಪಡೆದು ಭಾರೀ ಖುಷಿ ಆಗಿದೆ.

ನಾಯಕಿಗಿಂತಲೂ ಹೆಚ್ಚು ಬಂಗಾರ ಹಾಕ್ತಾರೆ ಈ ಸೀರಿಯಲ್ ಹೀರೋಗಳು!

ಕಳೆದ ಬಾರಿ ನಮ್ಮಮ್ಮ ಸೂಪರ್‌ ಸ್ಟಾರ್ ಶೋನಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕಿರುತೆರೆಯ ಸೆಲೆಬ್ರಿಟಿ ಅಮ್ಮ ಮಕ್ಕಳು ಪಾಲ್ಗೊಂಡು ಟೈಟಲ್ ಗಾಗಿ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಹಾಗಲ್ಲ. ಈ ಬಾರಿಯ ನಮ್ಮಮ್ಮ ಸೂಪರ್ ಸ್ಟಾರ್ ಶೋ ಬಹಳ ವಿಶೇಷ. ಏಕೆಂದರೆ ಈ ಬಾರಿ ಶೋನಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿತ್ತು. ಮತ್ತೊಂದು ಅಚ್ಚರಿ ಅಂದರೆ ಸೆಲೆಬ್ರಿಟಿಗಳಿಗೆ ಸೆಡ್ಡು ಹೊಡೆದು ಗ್ರಾಮೀಣ ಹಿನ್ನೆಲೆಯ ತಾಯಿ ಮಕ್ಕಳು ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಂಡ್ಯದ ಚೈತ್ರಾ ತಮ್ಮ ಅವಳಿ ಮಕ್ಕಳಾದ ಚಿನ್ಮಯ್ ಮತ್ತು ಚಿರಂತ್ ರೊಂದಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀನಸ್ 2 ಪಟ್ಟ ಗೆದ್ದಿರೋದು ಈ ಕಾರ್ಯಕ್ರಮದ ಫ್ಯಾನ್ಸ್ ಗೂ ಖುಷಿ ತಂದಿದೆ.

View post on Instagram

ಈ ಬಾರಿಯ ಸ್ಪರ್ಧೆಯಲ್ಲಿ ಅನೇಕ ಮಂದಿ ತಾಯಿ ಮತ್ತು ಮಕ್ಕಳು ಭಾಗವಹಿಸಿದ್ದರು. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಫಿನಾಲೆಗೆ 6 ಜೋಡಿಗಳು ಸೆಲೆಕ್ಟ್ ಆಗಿದ್ದರು. ಅದರಲ್ಲಿ ಎಲ್ಲರನ್ನೂ ಹಿಂದಿಕ್ಕಿ ಚೈತ್ರಾ ನನ್ನಮ್ಮ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಗೆದ್ದ ಅವಳಿ ಮಕ್ಕಳಿಗೆ 2 ಲಕ್ಷ ಕ್ಯಾಶ್ ಪ್ರೈಸ್ ಮನಿ (Prize money)ಸಿಕ್ಕಿದೆ. ಚೈತ್ರಾ ಅವರು ತುಂಬಾ ಖುಷಿಯಾಗಿದ್ದರು. ಒಂದು ಹಳ್ಳಿಯಿಂದ ಬಂದು ನಾವು ಗೆದ್ದಿದ್ದೇವೆ ಎನ್ನುತ್ತಲೇ ಅವರು ಭಾವುಕರಾದರು. ರಶ್ಮಿ ಮತ್ತು ಗೊಂಬೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರನ್ನರ್ ಅಪ್ ಆಗಿದ್ದಾರೆ. ಈ ಜೋಡಿಗೆ 1 ಲಕ್ಷ ಬಹುಮಾನ ನೀಡಲಾಗಿದೆ. ಮೈಸೂರಿನ ಈ ಅಮ್ಮ-ಮಗಳ ಜೋಡಿ ಎಲ್ಲರನ್ನೂ ಮೋಡಿ ಮಾಡಿತ್ತು. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಫಿನಾಲೆ(Grand finale) ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಂದಿದ್ದರು.

‘ಪುಟ್ಟಕ್ಕನ ಮಕ್ಕಳು’ ಖ್ಯಾತಿಯ ಸ್ನೇಹಾ ಎಷ್ಟು ಗ್ಲಾಮರಸ್ ನೋಡಿ!

ರವಿ ಮಾಮ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಟೈಟಲ್ ವಿನ್ನರ್‍ಗೆ (Winner)ಪ್ರಶಸ್ತಿ ನೀಡಿದರು. ರವಿಚಂದ್ರನ್ ಅವರಿಂದ ಪ್ರಶಸ್ತಿ ಪಡೆದು ಜೋಡಿ ಖುಷಿ ಆಗಿತ್ತು.

ಹಾಗೆ ನೋಡಿದರೆ ಕಾಮನ್ ಮ್ಯಾನ್ ತಾವು ಸೆಲೆಬ್ರಿಟಿಗಳ(Celebrities) ಜೊತೆ ಇಂಥಾ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರೂ ಹೆಚ್ಚಾಗಿ ಸೆಲೆಬ್ರಿಟಿಗಳೇ ವಿನ್ ಆಗುತ್ತಾರೆ. ಸ್ಟೇಟ್ ಪರ್ಫಾಮೆನ್ಸ್ ಗೊತ್ತಿರುವ, ಕ್ಯಾಮರ ಫೇಸ್ ಮಾಡಿ ಅಭ್ಯಾಸ ಇರುವ ಅವರಿಗೆ ಇಂಥಾ ವೇದಿಕೆಗಳಲ್ಲಿ ಫರ್ಫಾಮ್ ಮಾಡೋದು ಕರತಲಾಮಲಕ. ಆದರೆ ಕಾಮನ್ ಜನರಿಗೆ ಇದು ಚಾಲೆಂಜಿಂಗ್. ಅಂಥಾ ಚಾಲೆಂಜ್‌ ನಡುವೆಯೂ ಗೆದ್ದ ಈ ಅವಳಿ ಮಕ್ಕಳು ಹಾಗೂ ತಾಯಿಗೆ ಜನ ಶಹಭಾಷ್ ಅಂದಿದ್ದಾರೆ.