ಪ್ರಧಾನಿ ಮೋದಿಯ ಪ್ರತಿಕ್ರಿಯೆಗೆ ಅಬ್ಬಾ ಅವರೇ ಸಾಟಿ: ಹಾಡಿ ಹೊಗಳಿದ ನಟ ಮಿಥುನ್​ ಚಕ್ರವರ್ತಿ

ಪ್ರಧಾನಿ ಮೋದಿ ಜನರಿಗೆ ನೀಡುವ ಪ್ರತಿಕ್ರಿಯೆಯ ಬಗ್ಗೆ ಬಾಲಿವುಡ್​ ನಟ ಮಿಥುನ್​ ಚಕ್ರವರ್ತಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ್ದೇನು? 
 

Mithun Chakraborty says Prime Miniter Narednra Modi is incredibly responsive suc

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿರುವ ಬಾಲಿವುಡ್​​ ನಟ. ಬಂಗಾಳದ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ  ಮಿಥುನ್​ ಚಕ್ರವರ್ತಿಯವರು, ಇವರೊಬ್ಬರು ಅಸಂಭವ ವ್ಯಕ್ತಿ. ಅವರು ಜನರ ಭಾವನೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಅದರಲ್ಲಿ ಕೃತ್ತಿಮತೆ ಇಲ್ಲ, ಸಂಪೂರ್ಣ ಸಹಜವಾದದ್ದು ಅದು ಎಂದು ಗುಣಗಾನ ಮಾಡಿದ್ದಾರೆ. ಅವರು ಎಷ್ಟೇ ಬಿರುಸಿನ ಕಾರ್ಯದಲ್ಲಿ ಇದ್ದರೂ 10-15 ನಿಮಿಷಗಳಲ್ಲಿ ನನ್ನ ಮನವಿಗೆ ಸ್ಪಂದಿಸಿದ್ದಾರೆ. ಅಬ್ಬಬ್ಬಾ ಎಂದರೆ ಅವರು ತೆಗೆದುಕೊಂಡಿರುವ ದೀರ್ಘ ಅವಧಿ ಎಂದರೆ 23 ನಿಮಿಷಗಳು ಮಾತ್ರ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  


ಬಂಗಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಆರಂಭಿಕ ಸಭೆಗಳಲ್ಲಿ ಒಂದನ್ನು ನೆನಪಿಸಿಕೊಂಡ ನಟ, ಪ್ರಧಾನಿ ಮೋದಿ ಅವರೊಂದಿಗೆ 10 ವಿಶೇಷ ನಿಮಿಷಗಳನ್ನು ಹೇಗೆ ಕಳೆದರು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಸಭೆಯ ಬಳಿಕ ಪ್ರಧಾನಿ ನನಗೆ  ಕರೆ ಮಾಡಿದರು. 'ಮಿಥುನ್ ದಾ, ನಾನು ನಿಮ್ಮೊಂದಿಗೆ ಸ್ವಲ್ಪ ಸಮಯ ಮಾತನಾಡಲು ಬಯಸುತ್ತೇನೆ" ಎಂದರು. "ಆ 10 ನಿಮಿಷಗಳು ನಿಜವಾಗಿಯೂ ವರ್ಚಸ್ವಿಯಾಗಿದ್ದವು. ಅವರು ಪ್ರಧಾನಿಯಾಗಿರುವುದರಿಂದ ಅಲ್ಲ, ಆದರೆ ಅವರ ಸಹಜ ನಡವಳಿಕೆ ಮತ್ತು ಸ್ಪಂದಿಸುವ ಸ್ವಭಾವದಿಂದಾಗಿ. ಪರಿಣಾಮ ಇನ್ನೂ ನನ್ನ ಮೇಲೆ ಇದೆ ಎಂದಿದ್ದಾರೆ ನಟ. ಅವರು ಎಷ್ಟು ಬಿಜಿಯಾಗಿರುತ್ತಾರೆ ಎಂದರೆ 2-3 ದಿನಗಳ ಬಳಿಕ ರಿಪ್ಲೈ ಬಂದರೂ ಅದು ಶೀಘ್ರದ ಉತ್ತರವೇ ಅಂದುಕೊಳ್ಳಬೇಕು, ಆದರೆ ಅವರು ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಅಚ್ಚರಿಗೆ ತಳ್ಳುವ ವ್ಯಕ್ತಿ ಎಂದಿದ್ದಾರೆ. 

ರಾಹುಲ್​ ಗಾಂಧಿ ವಿಡಿಯೋ ವೈರಲ್​: ಥೂ ನಾಚಿಕೆ ಆಗ್ಬೇಕು, ದೇಶ ಬಿಟ್ಟು ಹೋಗಿ ಎಂದ ನಟಿ ಮೇಘಾ!
 
 ಈ ಹಿಂದೆ ಮಿಥುನ್​ ಚಕ್ರವರ್ತಿ ಅವರು, ಇಸ್ಕೆಮಿಕ್ ಸೆರೆಬ್ರೊವಾಸ್ಕುಲರ್ ಸ್ಟ್ರೋಕ್‌ನಿಂದ ಬಳಲುತ್ತಿದ್ದಾಗ  ಕೋಲ್ಕತಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಗದರಿದ್ದ ಬಗ್ಗೆ ಹೇಳಿಕೊಂಡಿದ್ದರು.  ನಾನು ನನ್ನ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ತಮಗೆ ಪ್ರಧಾನಿಯವರು ಗದರಿ ಇನ್ನು ಮುಂದೆ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವಂತೆ ಹೇಳಿದರು ಎಂದು ಹೇಳಿದ್ದರು. ನಾನು ರಾಕ್ಷಸನಂತೆ ತಿನ್ನುತ್ತೇನೆ. ಹಾಗಾಗಿ ನನಗೆ ಈ ರೀತಿ ಆರೋಗ್ಯ ಹದೆಗಟ್ಟಿತು. ಪ್ರತಿಯೊಬ್ಬರಿಗೂ ನನ್ನ ಸಲಹೆ ಏನಂದರೆ ನಿಯಮಿತ ಆಹಾರ ಬಳಸಿ. ಮಧುಮೇಹ ಇರುವವರು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ಹೊಂದಿರಬಾರದು. ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿ ಎಂದು ಇದೇ ವೇಳೆ ಮಿಥುನ್‌ ದಾದಾ ಎಲ್ಲರಿಗೂ ಸಲಹೆ ನೀಡಿದ್ದರು. 

ಇನ್ನು ಮಿಥುನ್​ ಚಕ್ರವರ್ತಿಯವರ ಕುರಿತು ಹೇಳುವುದಾದರೆ, ಮಿಥುನ್ ಚಕ್ರವರ್ತಿ ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಟ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಇವರು ಬಾಲಿವುಡನಲ್ಲಿ ಡಿಸ್ಕೋ ಡಾನ್ಸರ್ ಎಂದೇ ಪರಿಚಿತರು. ಮಿಥುನ್ ಅವರು ಹಿಂದಿ ಚಿತ್ರಗಳಲ್ಲದೇ ಕೆಲವು ಬಂಗಾಲಿ,ಪಂಜಾಬಿ, ಓರಿಯಾ, ಭೋಜಪುರಿ,ತೆಲುಗು,ತಮಿಳು,ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪ್ರೇಮ್ ನಿರ್ದೇಶನದ `ದಿ ವಿಲನ್ ಚಿತ್ರದಲ್ಲಿ ನಟಿಸಿದ್ದಾರೆ.
 
ಮಂಟಪಕ್ಕೆ ನನ್​ ಕರ್ಕೊಂಡು ಬರ್ಬೇಕಿದ್ದ ಮಾವ ಕಾಣೆಯಾಗೋದ್ರು! ಅದೊಂದ್​ ದೊಡ್ಡ ಕಥೆ, ಆ ದಿನ ಸ್ಮರಿಸಿದ ರಕ್ಷಿತಾ

Latest Videos
Follow Us:
Download App:
  • android
  • ios