'ಮನಸ್ಸೆಲ್ಲಾ ನೀನೆ' ಧಾರಾವಾಹಿ ನಟ ಸುಜಿತ್ ಗೌಡ ಅವರಿಗೆ ಕೆಲವು ದಿನಗಳ ಹಿಂದೆ ಕೊರೋನಾ ವೈರಸ್‌ ತಗುಲಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಅದ ನಟ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು,  ಕ್ವಾರಂಟೈನ್ ದಿನಗಳು ಹೇಗಿದ್ದವು ಎಂದು ಹಂಚಿಕೊಂಡಿದ್ದಾರೆ. 

'ಮನಸ್ಸೆಲ್ಲಾ ನೀನೆ' ಧಾರಾವಾಹಿ ನಟ ಸುಜಿತ್ ಗೌಡಗೆ ಕೊರೋನಾ ಪಾಸಿಟಿವ್! 

ಸುಜಿತ್ ಮಾತು:
'ಮೊದಲು ಮೈ-ಕೈ ನೋವು, ಕೆಮ್ಮು ಕಾಣಿಸಿಕೊಂಡಿತ್ತು. ಆನಂತರ ಜ್ವರ ಶುರುವಾಗಿದೆ. ಜ್ವರ ಬಂದ ತಕ್ಷಣವೇ ಕೊರೋನಾ ಟೆಸ್ಟ್ ಮಾಡಿಸಿದೆ. ಪಾಸಿಟಿವ್ ಎಂದು ತಿಳಿಯಿತು. ತೆಲುಗು ಧಾರಾವಾಹಿ ಕಸ್ತೂರಿ ಹಾಗೂ ಕನ್ನಡ ಧಾರಾವಾಹಿ ಮನಸ್ಸೆಲ್ಲಾ ನೀನೆ ಚಿತ್ರೀಕರಣಕ್ಕೆಂದು ಬೆಂಗಳೂರು-ಹೈದರಬಾದ್‌ ನಡುವೆ ಪ್ರಯಾಣ ಮಾಡುತ್ತಲೇ ಇರುತ್ತೇನೆ. ನನ್ನ ಪ್ರಕಾರ ಈ ಪ್ರಯಣದಿಂದಲೇ ಕೊರೋನಾ ಬಂದಿರ ಬಹುದು,' ಎಂದು ಸುಜಿತ್ ಹೇಳಿದ್ದಾರೆ. 

ಬಂದ್ರೆ ಭಯ ಗೊತ್ತಾಗುತ್ತೆ:
'ನನ್ನ ಪೋಷಕರು ಗಾಬರಿ ಆಗಿದ್ದರು. ವೈದ್ಯರನ್ನು ಸಂಪರ್ಕಿಸಿ ಔಷಧಿಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ. ಒಂದು ವಾರ ಕಳೆದಿದೆ, ಇನ್ನೂ ಕೆಮ್ಮು ಇದೆ. ಆದಷ್ಟು ಬೇಗ ಗುಣಮುಖನಾಗುವೆ ಎಂಬ ಭರವಸೆ ನನಗಿದೆ. ನನಗೆ ಸದಾ ಹೊರಗಿರುವುದು ಅಂದ್ರೆ ತುಂಬಾ ಇಷ್ಟ. ಇದೇ ಮೊದಲು ನಾನು ಒಂದು ರೂಮ್‌ನಲ್ಲಿ ಇಷ್ಟು ದಿನ ಇರುವುದು. ಈ ಹಿಂದೆ ಜನರು ಕೊರೋನಾ ಅಂತ ಹೇಳಿದಾಗ ನಾನು ಅಯ್ಯೋ ಇದು ಸಾಮಾನ್ಯ ಜ್ವರಗಳ ಹಾಗೆ ಎನ್ನುತ್ತಿದ್ದೆ. ಆದರೆ ವೈರಸ್‌ ನಮಗೆ ಬಂದ ಮೇಲೆಯೇ ಮಾತ್ರ ಅದರ ಭಯ ಗೊತ್ತಾಗುವುದು. ಹೊರಗಡೆ ಓಡಾಡುವವರು ದಯವಿಟ್ಟು  ನಿಯಮಗಳನ್ನು ಪಾಲಿಸಿ,' ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona