Asianet Suvarna News Asianet Suvarna News

ಲಾಕ್‌ಡೌನ್‌; ಔಷಧಿಗೂ ಹಣವಿಲ್ಲದೆ ಪರದಾಡುತ್ತಿರುವ 'ಮಹಾಭಾರತ'ದ ಇಂದ್ರ!

'ಮಹಾಭಾರತ' ಧಾರಾವಾಹಿಯ ಇಂದ್ರ ಪಾತ್ರಧಾರಿ ಅನಾರೋಗ್ಯದಿಂದ ಬಳಲುತ್ತಿದ್ದು, ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಮಸ್ಯೆ ಎದುರಾಗಿದೆ. 

Mahabharata actor satish kaul struggling for survive due to financial condition
Author
Bangalore, First Published May 23, 2020, 11:43 AM IST
  • Facebook
  • Twitter
  • Whatsapp

ಪೌರಾಣಿಕ ಧಾರಾವಾಹಿ ಮಾಹಾಭಾರತ ಯಾರಿಗೆ ಗೊತ್ತಿಲ್ಲ ಹೇಳಿ? ಕೊರೋನಾ ವೈರಸ್‌ ಆರ್ಭಟದಿಂದ ಮನೆಯಲ್ಲಿಯೇ ಲಾಕ್‌ಡೌನ್‌ ಆದ ಜನರು ಒಂದೂ ಸಂಚಿಕೆಯನ್ನೂ ಮಿಸ್ ಮಾಡದೇ ವೀಕ್ಷಿಸಿದ್ದಾರೆ. ಅದರಲ್ಲೂ ಎಲ್ಲರ ಗಮನ ಸೆಳೆದ ಪಾತ್ರಧಾರಿ ಇಂದ್ರ. ಅವರು ಈಗ ಸಂಕಷ್ಟದಲ್ಲಿದ್ದಾರೆ.

ಹೌದು! ಇಂದ್ರನ ಪಾತ್ರಧಾರಿಯಾಗಿದ್ದ ಸತೀಶ್‌ ಕೌಲ್‌ ಮೂಲತಃ ಪಂಜಾಬ್‌ನವರಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲೊಮ್ಮೆ, ಇಲ್ಲೊಮ್ಮೆ ಹಿಂದೆ ಚಿತ್ರಗಳಲ್ಲಿ ನಟಿಸಿ ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಔಷಧಿಗೂ ಪರದಾಡುವಂತೆ ಆಗಿದೆ ಎನ್ನಲಾಗಿದೆ.

ಕನ್ನಡದ ಕಂಪಿನಲ್ಲಿ ಪ್ರಸಾರವಾಗುತ್ತಿದೆ ಮಹಾಭಾರತ

300ಕ್ಕೂ ಹೆಚ್ಚು ಪಂಜಾಬಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿರುವ ಸತೀಶ್‌ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ. 'ಮೊದಲು ವೃದ್ಧಾಶ್ರಮವೊಂದರಲ್ಲಿ ನೆಲೆಸಿದ್ದೆ. ಆದರೀಗ ಲೂಧಿಯಾನಾದ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ.  ದಯಾಳು ಸತ್ಯದೇವೆ ಎಂಬುವವರಿಂದಾಗಿ ಈ ಜಾಗ ಪಡೆದುಕೊಂಡಿದ್ದೇನೆ.  ನನ್ನ ಆರೋಗ್ಯ ಈಗ ಪರ್ವಾಗಿಲ್ಲ. ಆದರೆ ಲಾಕ್‌ಡೌನ್‌ನಿಂದ ಪರಿಸ್ಥಿತಿ ತುಂಬಾ ಹದಗೆಡಿಸಿದೆ,' ಎಂದು ಮಾತನಾಡಿದ್ದಾರೆ.

ಅಗತ್ಯ ವಸ್ತುವಿಗೂ ಇಲ್ಲ ಹಣ:
'ನನಗೆ ಔಷಧಿ, ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವಿಲ್ಲದೆ ಪರದಾಡುತ್ತಿರುವೆ. ನನ್ನ ಚಿತ್ರೋದ್ಯಮದ ಜನರನ್ನು ನನಗೆ ಸಹಾಯ ಮಾಡುವಂತೆ ಬೇಡಿಕೊಳ್ಳುವೆ. ನಟನಾಗಿ ನನಗೆ ತುಂಬಾನೇ ಪ್ರೀತಿ ಸಿಕ್ಕಿತ್ತು. ಆದರೆ ಒಬ್ಬ ಮನುಷ್ಯನಾಗಿ ನನ್ನ ಕಡೆ ಗಮನ ಹರಿಸುವುದು ಅಗತ್ಯ,,' ಎಂದು ಹೇಳಿದ್ದಾರೆ.

ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ವೈದ್ಯರಿಗೆ ಗೀತೋಪದೇಶ

ಟಾಪ್‌ ಸೀರಿಯಲ್‌ನಲ್ಲಿ ಸತೀಶ್:
ಸತೀಶ್‌ ವಯಸ್ಸು 73 ಆಗಿದ್ದರೂ ನಟನೆ ಮಾಡುವ ಶಕ್ತಿಯಿಂದೆ ಎಂದು ಹೇಳಿದ್ದಾರೆ. 'ಪ್ಯಾರ್‌ ತೋ ಹೋನಾ ಹೆ ಥಾ', 'ಆಂಟಿ ನಂ 1' ಹೀಗೆ ಅನೇಕ ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ತನ್ನಂತೆ ಅನೇಕ ಕಲಾವಿದರು ಇದ್ದಾರೆಂದು ಭಾವಿಸಿ, ಮುಂಬೈನಲ್ಲಿ ನಾಟಕ ಶಾಲೆ ತೆರೆದರು. ಆದರೆ ಯಶಸ್ಸು ಕಾಣದೆ ಮುಂದುವರಿಸಲು ಸಾಧ್ಯವಾಗಲಿಲ್ಲ.

'2015'ರಲ್ಲಿ ನನ್ನ ಪೃಷ್ಠದ ಮೂಳೆ ಮುರಿಯಿತು.  ಎರಡು ವರ್ಷಗಳ ಕಾಲ ನಾನು ಆಸ್ಪತ್ರೆಯಲ್ಲಿಯೇ ಇದ್ದೆ.  ನಾನು ಮಾಡುತ್ತಿದ್ದ ಕೆಲಸ ಅರ್ಧಕ್ಕೆ ನಿಂತು ಹೋಯಿತು. ಅಲ್ಲಿಂದ ವೃದ್ಧಾಶ್ರಮಕ್ಕೆ ತೆರಳಿ ಎರಡು ವರ್ಷಗಳ ಕಾಲವಿದ್ದೆ. ಆನಂತರ ಈ ಮನೆಗೆ ಬಂದೆ' ಎಂದು ಹೇಳುತ್ತಾ ತಮ್ಮ ಚಿತ್ರರಂಗದ ಆಪ್ತ ಸ್ನೇಹಿತರಿಗೆ ಹಾಗೂ ಕಲಾವಿದರ ಸಂಘದಿಂದ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ನಾಟಕದಲ್ಲಿ ದುರ್ಯೋಧನನಾಗಿ ಮಿಂಚಿದ ತುಮಕೂರು ಎಸ್ ಪಿ

ಈ ಕೊರೋನಾ ವೈರಸ್, ಅದಕ್ಕೆ ಹೆದರಿ ಲಾಕ್‌ಡೌನ್ ಘೋಷಿಸಿದ ಬೆನ್ನಲ್ಲೇ ಅನೇಕರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಕೆಲವರ ಜೀವನವೇ ಬರ್ಬಾದ್ ಆಗಿದ್ದು, ಜೀವನ ನಡೆಸುವುದು ಹೇಗೆಂಬ ಆತಂಕದಲ್ಲಿ ಇದ್ದಾರೆ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕಲಾವಿದರ ಪಾಡಂತೂ ಹೇಳತೀರದು. ಎಲ್ಲರಿಗೂ ಆದಷ್ಟು ಬೇಗ ಕಷ್ಟ ನಿವಾರಣೆಯಾಗಲೆಂಬುವುದೇ ಎಲ್ಲರ ಹಾರೈಕೆ. 

Follow Us:
Download App:
  • android
  • ios