ಶೂಟಿಂಗ್​ಗೆ ಬೆಟ್ಟದ ತುದಿಗೆ ಹೋದ ಲಕ್ಷ್ಮೀ ಬಾರಮ್ಮ ತಂಡದಿಂದ ಖುಲಾಯಿಸಿತು ಅಜ್ಜ-ಅಜ್ಜಿಯ ಅದೃಷ್ಟ

ಶೂಟಿಂಗ್​ಗೆ ಬೆಟ್ಟದ ತುದಿಗೆ ಹೋದ ಲಕ್ಷ್ಮೀ ಬಾರಮ್ಮ ತಂಡದಿಂದ ಖುಲಾಯಿಸಿತು ಅಜ್ಜ-ಅಜ್ಜಿಯ ಅದೃಷ್ಟ. ಗಂಗಾ ಪಾತ್ರಧಾರಿ ಹರ್ಷಿತಾ ಹೇಳಿದ್ದೇನು?
 

Lakshmi Baramma Ganga urf Harshita about old couple to whom she helped asked people to help suc

ಲಕ್ಷ್ಮೀ ಬಾರಮ್ಮ ಧಾರವಾಹಿಯ ತಂಡವು ಶೂಟಿಂಗ್​ ನಿಮಿತ್ತ ಚನ್ನಪಟ್ಟಣ ಹತ್ತಿರದ  ಕಬಾಳ್ ರೋಡ್​ನಲ್ಲಿ ಇರುವ ಬೆಟ್ಟಕ್ಕೆ ಹೋದಾಗ ಅಲ್ಲಿಯೇ ವಾಸಿಸುತ್ತಿದ್ದ ಅಜ್ಜ-ಅಜ್ಜಿಯನ್ನು ನೋಡಿ ಅವರಿಗೆ ಒಂದಿಷ್ಟು ನೆರವು ನೀಡಿದೆ. ರಾಮನಗರದಿಂದ ಕೆಲ ವರ್ಷಗಳ ಹಿಂದೆ ಈ ಬೆಟ್ಟಕ್ಕೆ ಬಂದಿರುವ ಈ ದಂಪತಿ ಅಲ್ಲಿಯೇ ವಾಸಿಸುತ್ತಿದ್ದಾರೆ. ಯಾವುದೇ ಭಯವಿಲ್ಲದೇ ಅಲ್ಲಿಯೇ ಮಲಗಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಇಳಿ ವಯಸ್ಸಿನಲ್ಲಿಯೂ ಅಡುಗೆ ಮಾಡಿ ಊಟ ಮಾಡುತ್ತಿದ್ದಾರೆ. ಯಾರ ನೆರವೂ ಇಲ್ಲದೇ, ಯಾರ ಗೋಜಿಗೂ ಹೋಗದ ಈ ಅಜ್ಜ-ಅಜ್ಜಿಯ ಜೋಡಿ ಎಂಥವರನ್ನೂ ಮೋಡಿ ಮಾಡುವಂತಿದೆ. ಈ ದಂಪತಿಗೆ ಲಕ್ಷ್ಮೀ ಬಾರಮ್ಮ ತಂಡದ ನಟ-ನಟಿಯರು ನೆರವು ನೀಡಿದ್ದಾರೆ.

ಈ ಕುರಿತು ಲಕ್ಷ್ಮೀ ಬಾರಮ್ಮ ಸೀರಿಯಲ್​ನ ಗಂಗಾ ಪಾತ್ರಧಾರಿ ಹರ್ಷಿತಾ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ.  ಶೂಟಿಂಗ್ ಲೊಕೇಶನ್ ಅಂತ ಈ ಬೆಟ್ಟಕ್ಕೆ ಹೋಗಿದ್ವಿ ಅಲ್ಲಿ ಈ ವಯಸ್ಸಾದ ಅಜ್ಜಿ ತಾತನ ನೋಡಿ ನನಗೆ ಮನಸ್ಸಿಗೆ ತುಂಬಾ ನೋವಾಯ್ತು.. ನನ್ನ ಕೈಯಲ್ಲಿ ಎಷ್ಟಾಗುತ್ತೆ ಅಷ್ಟನ್ನ ನಾನು ಈ ಅಜ್ಜಿ ತಾತನಿಗೆ ಸಹಾಯ ಮಾಡಿದೀನಿ... ಈ ವಿಡಿಯೋ ಯಾವುದೇ ರೀತಿಯ ಸಿಂಪತಿ ಗಿಟ್ಟಿಸಿಕೊಳ್ಳೋದಕ್ಕಲ್ಲ. ನನಗೆ ಮನಸಾರೆ ಅನ್ನಿಸ್ತು ನಾನು ಅವರಿಗೆ ಸಹಾಯ ಮಾಡಬೇಕು ಅಂತ ಹಾಗಾಗಿ ನಾನು ಸಹಾಯ ಮಾಡಿದೀನಿ.. ನನ್ನ ಕಡೆಯಿಂದ ನಾನು ಕೇಳಿಕೊಳ್ಳುವುದು ಏನೆಂದರೆ ಆ ಅಜ್ಜಿ ತಾತ ಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಹೇಳಿದ್ದಾರೆ. ತಾವು ಮಾತ್ರವಲ್ಲದೇ,  ನಮ್ಮ ಸುಷ್ಮಾ ಅವರು ಅಂದ್ರೆ ಕಾವೇರಮ್ಮ, ಹಾಗೆಯೇ ಮಾದೇವ ಪಾತ್ರ ಮಾಡಿದಂತಹ ದಾನಪ್ಪ ಸೇರಿದಂತೆ  ಸುಮಾರು ಜನ ಸಹಾಯ ಮಾಡಿದ್ದಾರೆ.  ಅವರೆಲ್ಲರಿಗೂ ನನ್ನ ಕಡೆಯಿಂದ ನಾನು ಥ್ಯಾಂಕ್ಸ್ ಹೇಳ್ತೀನಿ ಎಂದಿರುವ ನಟಿ, ಇಂಥ ವೃದ್ಧರಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.

ಡಿಕೆಡಿ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಪ್ರಿಯಾ-ಅಶೋಕ ಜೋಡಿ: ಫ್ಯಾನ್ಸ್​ ಫಿದಾ

ಸಿನಿಮಾ ತಾರೆಯರು, ಸೀರಿಯಲ್​ ಕಲಾವಿದರು ಎಷ್ಟೋ ಮಂದಿಗೆ ಮಾದರಿಯಾಗುತ್ತಾರೆ. ಇಂಥ ಸತ್ಕಾರ್ಯ ಕೂಡ ಜನರಿಗೆ ಮಾದರಿಯಾಗಲಿ, ಇಂಥ ವಯೋವೃದ್ಧರಿಗೆ ಸಹಾಯ ಮಾಡಲು ಜನರು ಮುಂದೆ ಬರಬೇಕು ಎಂದು ಅಭಿಮಾನಿಗಳು ತಿಳಿಸುತ್ತಿದ್ದಾರೆ. ಇದೇ ವೇಳೆ ಈ ವೃದ್ಧ ದಂಪತಿಗೆ ಸಹಾಯ ಮಾಡಿದ ಕಾರಣ ಲಕ್ಷ್ಮೀ ಬಾರಮ್ಮ ತಂಡಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ. 

ಇನ್ನು ಗಂಗಾ ಪಾತ್ರಧಾರಿ ಹರ್ಷಿತಾ ಕುರಿತು ಹೇಳುವುದಾದರೆ, ಇವರು ತುಮಕೂರು ಜಿಲ್ಲೆಯ ಮಧುಗಿರಿಯವರು.  ಹರ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಸೆಟ್‌ನಲ್ಲಿದ್ದಾಗಲೇ ಹೆಚ್ಚು ರೀಲ್ಸ್ ಅನ್ನು ಮಾಡುತ್ತಾರೆ. ಮಾಡರ್ನ್​ ಡ್ರೆಸ್​ ಹಾಕಿಕೊಂಡು ಫೋಟೋ ಶೂಟ್​ ಮಾಡಿಸುತ್ತಿರುತ್ತಾರೆ. ಇವರು ಒಳ್ಳೆಯ ನೃತ್ಯಗಾತಿ ಕೂಡ.  'ಲಕ್ಷ್ಮೀ ಬಾರಮ್ಮ' ಸೆಟ್‌ನಲ್ಲಿ ಇರುವವರೆಲ್ಲರೂ ರೀಲ್ಸ್ ಮಾಡುವುದರಲ್ಲಿ ಎಕ್ಸ್ ಪರ್ಟ್‌ಗಳೇ. ಹೀಗಾಗಿ ಗ್ಯಾಪ್ ಸಿಕ್ಕಿದರೆ ಸಾಕು ಹರ್ಷಿತಾ ಕೂಡ ಟೀಂ ಜೊತೆ ರೀಲ್ಸ್ ಮಾಡುತ್ತಾ ಇರುತ್ತಾರೆ. ಇದೀಗ ಯೂಟ್ಯೂಬ್​ ಚಾನೆಲ್​ ಅನ್ನೂ ಓಪನ್​ ಮಾಡಿದ್ದು, ಅದರಲ್ಲಿ ಮೇಕಿಂಗ್​ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. 

ಟೆರೇಸ್​ ಮೇಲಿಂದ ಪಕ್ಕದ ಮನೆ ಅಂಕಲ್​ರನ್ನು ಮಾತನಾಡಿಸಿ ತಿರುಗಿದ್ರೆ ನಮ್ಮನೆ ಸೋಫಾದ ಮೇಲೆ ಕುಳಿತಿದ್ರು!

Latest Videos
Follow Us:
Download App:
  • android
  • ios