Asianet Suvarna News Asianet Suvarna News

ಮಹೀಂದ್ರ ಥಾರ್ ಖರೀದಿಸಿದ ಲಕ್ಷ್ಮಿ ಬಾರಮ್ಮ ನಟಿ, ಪೂಜೆ ಬಳಿಕ ಕಾರು ಹತ್ತಿದ ಲಾವಣ್ಯ!

ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ವಿಧಿ ಪಾತ್ರ ಮಾಡುತ್ತಿರುವ ನಟಿ ಲಾವಣ್ಯ ಇದೀಗ ಹೊಸ ಮಹೀಂದ್ರ ಥಾರ್ ಕಾರು ಖರೀದಿಸಿದ್ದಾರೆ. ಕಾರಿಗೆ ಪೂಜೆ ಮಾಡಿದ ಬಳಿಕ ಹೊಸ ಕಾರಿನಲ್ಲಿ ರೌಂಡ್ ಹೊಡೆದಿದ್ದಾರೆ.

Lakshmi baramma fame Dr Lavanya hiremath buys all new mahindra thar car ckm
Author
First Published Oct 4, 2024, 5:00 PM IST | Last Updated Oct 4, 2024, 5:18 PM IST

ಬೆಂಗಳೂರು(ಅ.04)  ಕನ್ನಡದ ಸೀರಿಯಲ್ ಪೈಕಿ ಲಕ್ಷ್ಮಿ ಬಾರಮ್ಮ ಹೆಚ್ಚು ಜನಪ್ರಿಯಗೊಂಡಿದೆ. ಹೀಗಾಗಿ ಇಲ್ಲಿ ಬರವು ಎಲ್ಲಾ ಪಾತ್ರಗಳ ಕುರಿತು ಜನರಿಗೆ ಗೊತ್ತೇ ಇದೆ. ಈ ಪೈಕಿ ದುರಂಹಕಾರಿ ಪಾತ್ರದ ಮೂಲಕ ಗಮನಸೆಳೆದಿರುವ ವಿಧಿ ಅರ್ಥಾತ್ ಲಾವಣ್ಯ ಹೀರೇಮಠ್ ಇದೀಗ ಹೊಸ ಕಾರು ಖರೀದಿಸಿದ್ದಾರೆ. ಹೊಸ ಮಹೀಂದ್ರ ಥಾರ್ ಖರೀದಿಸಿದ ನಟಿ, ವಿಶೇಷ ಪೂಜೆ ಸಲ್ಲಿಸಿ ಕಾರಿನಲ್ಲಿ ರೌಂಡ್ ಹೊಡೆದಿದ್ದಾರೆ. ಗ್ಯಾಲಕ್ಸಿ ಗ್ರೇ ಬಣ್ಣದ ಕಾರನ್ನು ಲಾವಣ್ಯ ಖರೀದಿಸಿದ್ದಾರೆ.

ಮಹೀಂದ್ರ ಥಾರ್ ಕಾರು ಹಲವರ ನೆಚ್ಚಿನ ಕಾರು, ಇದಕ್ಕೆ ಲಾವಣ್ಯ ಹೀರೇಮಠ್ ಕೂಡ ಹೊರತಾಗಿಲ್ಲ. ತಮ್ಮ ನೆಚ್ಚಿನ ಕಾರನ್ನು ಲಾವಣ್ಯ ಖರೀದಿಸಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ನನ್ನ ಕನಸು ನನಸಾಗಿದೆ. ಅಕಾಶ್ ಅಚಾರ್ಯ ನೆರವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

60 ನಿಮಿಷದಲ್ಲಿ 1.76 ಲಕ್ಷ ಕಾರು ಬುಕಿಂಗ್, ದಾಖಲೆ ಬರೆದ ಮಹೀಂದ್ರ ಥಾರ್ ರಾಕ್ಸ್!

ಲಾವಣ್ಯ ಹಂಚಿಕೊಂಡಿರುವ ವಿಡಿಯೋದಲ್ಲಿ ನಟಿ ನೇರವಾಗಿ ಮಹೀಂದ್ರ ಶೋ ರೂಂಗೆ ಸಂಭ್ರಮದಿಂದ ತೆರಳುತ್ತಿರುವ ದೃಶ್ಯವಿದೆ. ಶೋ ರೂಂಗೆ ತರಳಿದ ನಟಿ ಕಾರು ಖರೀದಿಯ ಪ್ರಕ್ರಿಯೆ ಮುಗಿಸಿದ್ದಾರೆ. ಇಷ್ಟೇ ಅಲ್ಲ ಭಾರಿ ಉತ್ಸುಕತೆ, ಉತ್ಸಾಹದಿಂದ ಹೊಸ ಕಾರು ಸ್ವೀಕರಿಸಲು ಕೆಲ ಹೊತ್ತು ಕಾದಿದ್ದಾರೆ. ಬಳಿಕ ಶೋ ರೂಂ ಸಿಬ್ಬಂದಿಗಳು ಮಹೀಂದ್ರ ಥಾರ್ ಕಾರನ್ನು ಕೆಂಪು ಬಣ್ಣದ ಕವರ್‌ನಿಂದ ಮುಚ್ಚಿ ಅನಾವರಣ ಮಾಡಲು ಅವಕಾಶ ನೀಡಲಾಗಿದೆ.  ಕಾರಿನ ಕವರ್ ತೆರವುಗೊಳಿಸುತ್ತಿದ್ದಂತೆ ಆಪ್ತರು ಚಪ್ಪಾಳೆ ಮೂಲಕ ಲಾವಣ್ಯ ಅಭಿನಂದಿಸಿದ್ದಾರೆ. 

ಹೊಸ ಕಾರಿನ ಬೊನೆಟ್ ಮೇಲೆ ಕೇಕ್ ಕತ್ತರಿಸಿದ ಲಾವಣ್ಯ ಸಂಭ್ರಮ ಆಚರಿಸಿದ್ದಾರೆ. ಬಳಿಕ ಶೋ ರೂಂನಿಂದ ಹೊರಟ ಲಾವಣ್ಯ ನೇರವಾಗಿ ಕಾರಿಗೆ ಪೂಜೆ ಮಾಡಿದ್ದಾರೆ. ತಾವೇ ಖುದ್ದಾಗಿ ಪೂಜೆ ಮಾಡಿದ್ದಾರೆ. ಇದಾದಾ ಬಳಿಕ ಲಾವಣ್ಯ ಹೀರೆಮಠ್ ತಮ್ಮ ನೆಚ್ಚಿನ ಹಾಗೂ ಹೊಸ ಮಹೀಂದ್ರ ಥಾರ್ ಕಾರಿನಲ್ಲಿ ರೌಂಡ್ಸ್ ಹೊಡೆದಿದ್ದಾರೆ. 

 

 

ಲಾವಣ್ಯ ಖರೀದಿಸಿರುವುದು ಮಹೀಂದ್ರ ಥಾರ್ 3 ಡೋರ್ ಕಾರು. ಇದರ ಆರಂಭಿಕ ಬೆಲೆ 11.35 ಲಕ್ಷ ರೂಪಾಯಿ. ಟಾಪ್ ಮಾಡೆಲ್ ಬೆಲೆ 16.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನಟಿ ಲಾವಣ್ಯ ಯಾವ ವೇರಿಯೆಂಟ್ ಕಾರು ಖರೀದಿಸಿದ್ದಾರೆ ಅನ್ನೋ ಮಾಹಿತಿ ಸ್ಪಷ್ಟವಿಲ್ಲ. ಮಹೀದ್ರ ಇತ್ತೀಚೆಗೆ 5 ಡೋರ್ ಥಾರ್ ರಾಕ್ಸ್ ಕಾರು ಬಿಡುಗಡೆ ಮಾಡಿ ಬುಕಿಂಗ್ ಆರಂಭಿಸಿದೆ. ಇದರ ಆರಂಭಿಕ ಬೆಲೆ 12.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಪ್ ಮಾಡೆಲ್ ಬೆಲೆ 22.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಕೇವಲ 12.99 ಲಕ್ಷ ರೂಪಾಯಿ: ಮನೆಗೆ ತನ್ನಿ ದೇಶ ಹೆಮ್ಮೆಯ 5 ಡೋರ್ ಮಹೀಂದ್ರ ಥಾರ್ ರಾಕ್ಸ್!

ವಿಶೇಷ ಅಂದರೆ ಬುಕಿಂಗ್ ಆರಂಭಿಸಿದ ಕೇವಲ 60 ನಿಮಿಷದಲ್ಲಿ 1.76 ಲಕ್ಷ ಮಹೀಂದ್ರ ಥಾರ್ ರಾಕ್ಸ್ ಕಾರು ಬುಕಿಂಗ್ ಆಗಿವೆ. ರಾಕ್ಸ್ ಕಾರಿಗೆ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಥಾರ್ ಹಾಗೂ ರಾಕ್ಸ್ ಎರಡಲ್ಲೂ ಮ್ಯಾನ್ಯುಯೆಲ್ ಹಾಗೂ ಆಟೋ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.
 

Latest Videos
Follow Us:
Download App:
  • android
  • ios