Bhagyalakshmi: ಇಟ್ಕೊಂಡೋಳು ಇರೋ ತನಕ, ಕಟ್ಕೊಂಡೋಳು ಕೋನೆತನಕ ಅಂತ ತಿಳ್ಕೋಳಿ ಅಂತಿದ್ದಾರೆ ಫ್ಯಾನ್ಸ್
ಮಗನನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಅಮ್ಮ ಕುಸುಮಾ ಪಟ್ಟು ಹಿಡಿದಿದ್ದರೆ, ಪತಿಗಾಗಿ ಪತ್ನಿ ಭಾಗ್ಯಲಕ್ಷ್ಮಿ ಅತ್ತೆಯ ಎದುರು ಬೇಡಿಕೊಳ್ಳುತ್ತಿದ್ದಾಳೆ. ಮುಂದೇನಾಗತ್ತೆ?

ಪತಿ-ಪತ್ನಿ ಸಂಬಂಧದ ಪವಿತ್ರವಾದದ್ದು. ಆದರೆ ಎಷ್ಟೋ ಸಮಯದಲ್ಲಿ, ಇವರಿಬ್ಬರ ಸಂಬಂಧದ ಮಧ್ಯೆ ಮೂರನೆಯವಳ ಎಂಟ್ರಿ ಆಗುವುದು ಇದೆ. ಮದುವೆಗೆ ಮುಂಚಿತವಾಗಿ ಇನ್ನೊಂದು ಸಂಬಂಧ ಇಟ್ಟುಕೊಂಡು, ಮನೆಯವರ ಒತ್ತಾಯಕ್ಕೆ ಬೇಡದ ಮದುವೆಯಾಗುವುದು ಒಂದೆಡೆಯಾದರೆ, ಮದುವೆಯಾದ ಮೇಲೆ ಇನ್ನೊಬ್ಬಳ ಎಂಟ್ರಿ ಆಗುವುದು ಇನ್ನೊಂದು ಮಾತು. ಇದು ಎಷ್ಟೋ ಮನೆಗಳಲ್ಲಿ ನಡೆಯುತ್ತಿರುತ್ತದೆ. ಮದುವೆಯಾಗಿದೆ ಎಂದು ತಿಳಿದಿದ್ದರೂ ಆತನನ್ನು ಪ್ರೀತಿಸಿ ಅವರ ಸಂಸಾರಕ್ಕೆ ಹುಳಿ ಹಿಂಡುವ ಹೆಣ್ಣುಮಕ್ಕಳು ಸಾಮಾನ್ಯವಾಗಿಬಿಟ್ಟಿದೆ. ಇದರಲ್ಲಿ ಪ್ರೀತಿಗಿಂತಲೂ ಹೆಚ್ಚಾಗಿ ದುಡ್ಡಿನ ಆಸೆಯೇ ದೊಡ್ಡದಾಗಿರುತ್ತದೆ. ಕಾರಣ ಏನೇ ಇದ್ದರೂ ಇಟ್ಕೊಂಡೋಳು ಇರೋ ತನಕ, ಕಟ್ಕೊಂಡೋಳು ಕೋನೆತನಕ ಅನ್ನುವ ಗಾದೆ ಮಾತನ್ನು ಒಮ್ಮೆ ನೆನಪು ಮಾಡಿಕೊಳ್ಳಿ ಎಂದು ಹಿರಿಯರು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಈಗ ಇದೇ ಮಾತನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ನಾಯಕ ತಾಂಡವ್ ಕೇಳಿಸಿಕೊಳ್ಳುವ ಪರಿಸ್ಥಿತಿ ಬಂದಿದೆ.
ಹೆಚ್ಚು ಓದಿಲ್ಲದ ಭಾಗ್ಯಾ ಸಂಸ್ಕಾರ ಇರೋ ಹೆಣ್ಣು ಮಗಳು. ಸಿರಿವಂತ ತಾಂಡವ್ ಮದುವೆಯಾಗಿದ್ದಾಳೆ. ಆದರೆ, ಅವನಿಗೋ ಇವಳ ಕಂಡ್ರೆ ತಾತ್ಸಾರ. ಭಾಗ್ಯಾಳ ವ್ಯಕ್ತಿತ್ವಕ್ಕೆ ಬೆಲೆ ಕೊಡೋ ಅತ್ತೆ ಇವಳನ್ನು ಓದಿಸಬೇಕು ಅಂತ ಮುಂದಾಗಿದ್ದಾಳೆ. ಅದಕ್ಕೆ ಕಲ್ಲು ಹಾಕಲು ತಾಂಡವ್ ಶತಯಾ ಗತಾಯ ಯತ್ನಿಸುತ್ತಿದ್ದು, ಅತ್ತೆ-ಸೊಸೆಗೆ ಜಗಳ ತಂದಿಡಲು ಹತ್ತು ಹಲವು ಪ್ಲ್ಯಾನ್ ಮಾಡುತ್ತಿದ್ದಾನೆ. ಇದರ ಬೆನ್ನಲ್ಲೇ ಇನ್ನೊಬ್ಬಳನ್ನು ಈತ ಪ್ರೀತಿಸುತ್ತಿದ್ದು, ಅದರ ಬಣ್ಣವೀಗ ಬಯಲಾಗಿದೆ. ಇದೇ ಕಾರಣಕ್ಕೆ ತಾಂಡವ್ನನ್ನು ಕಂಡರೆ ವೀಕ್ಷಕರೂ ಕುದಿಯುತ್ತಿದ್ದಾರೆ. ಭಾಗ್ಯಳಂಥ ಹೆಂಡತಿಯನ್ನು ಪಡೆದು ಬೇರೊಬ್ಬಳ ಹಿಂದೆ ಬಿದ್ದಿರುವುದನ್ನು ಪ್ರೇಕ್ಷಕರು ಸಹಿಸುತ್ತಿಲ್ಲ. ಇದೀಗ ತಾಂಡವ್ ಮತ್ತು ಶ್ರೇಷ್ಠಾಳ ನಡುವೆ ಜಗಳ ಬಂದಿದೆ. ತನ್ನ ತಾಯಿ ಮತ್ತು ಮಕ್ಕಳನ್ನು ಒಪ್ಪದ ಶ್ರೇಷ್ಠಾ ಕೇವಲ ತನ್ನ ಅಂತಸ್ತಿಗಾಗಿ ಪ್ರೀತಿಸುತ್ತಿರುವುದು ತಾಂಡವ್ಗೆ ತಿಳಿದಿದೆ. ತಾಂಡವ್ ಎಷ್ಟೆ ಬೇಡಿಕೊಂಡರೂ ಕುಸುಮಾಳ ಮನಸ್ಸು ಕರಗುವುದಿಲ್ಲ.
ಜೋಡಿ ನಂ.1: ಫಸ್ಟ್ ನೈಟ್ ಅನುಭವ ಹಂಚಿಕೊಂಡ ನಟ ಶಶಿ, ಲಾವಣ್ಯ ಭಾವುಕ!
ಈಗ ಅಪ್ಪಟ ಭಾರತೀಯ ನಾರಿಯಂತೆ ಗಂಡನ ಪರ ವಹಿಸಿಕೊಂಡು ಬಂದಿದ್ದಾಳೆ ಭಾಗ್ಯ. ತನ್ನ ಗಂಡ ಹೊರಗಡೆ ಇರುವುದನ್ನು ಸಹಿಸದ ಅವಳು, ಅತ್ತೆಯ ಮನಸ್ಸನ್ನು ಪರಿವರ್ತಿಸಲು ಯತ್ನಿಸುತ್ತಾಳೆ. ಇದೊಂದು ಸಲ ತಪ್ಪಾಗಿದೆ, ಅವರನ್ನು ಒಳಗೆ ಕರೆಸಿ ಮಾತನಾಡಿ, ಹೀಗೆ ಮಾಡುವುದು ಸರಿಯಲ್ಲ ಎನ್ನುತ್ತಾಳೆ. ಇದನ್ನು ಕೇಳಿ ಅತ್ತೆ ಕುಸುಮಳ ಕೋಪ ನೆತ್ತಿಗೇರುತ್ತದೆ. ನನಗೇ ಬುದ್ಧಿ ಹೇಳುವಷ್ಟು ದೊಡ್ಡವಳಾದ್ಯ ಎಂದು ಸೊಸೆಯ ಮೇಲೆ ಗುಡುಗುತ್ತಾಳೆ. ನನಗೆ ಬೇಕಾದ ಕಾಲಕ್ಕೆ ಆಗದ ಮಗ ನನಗೆ ಬೇಡ ಎಂದು ಹೇಳಿ ಮಗ ತಾಂಡವ್ನನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಾಳೆ. ಮುಂದೇನಾಗುತ್ತದೆ ಎನ್ನುವುದು ಈಗಿರುವ ಕುತೂಹಲ.
ಇದರ ಪ್ರೊಮೋ ಬಿಡುಗಡೆಯಾಗಿದ್ದು, ಥಹರೇವಾರಿ ಕಮೆಂಟ್ಗಳ ಸುರಿಮಳೆ ಆಗುತ್ತಿದೆ. ಇಟ್ಕೊಂಡೋಳು ಇರೋ ತನಕ, ಕಟ್ಕೊಂಡೋಳು ಕೋನೆತನಕ ಅಂತ ತಿಳ್ಕೋಳಿ ಅಂತಿದ್ದಾರೆ ಹಲವರು. ಕುಸುಮಾ ಮಾಡಿದ್ದು ಸರಿಯಿದೆ ಎಂದು ಕೆಲವರು ಹೇಳುತ್ತಿದ್ದರೆ, ಭಾಗ್ಯ ಮೊದಲೇ ಗಂಡನನ್ನು ತಿದ್ದಿ ಬುದ್ಧಿ ಹೇಳಿದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ ಇನ್ನು ಕೆಲವರು. ಗಂಡಸರು ಮಾಡುವ ತಪ್ಪನ್ನು ಮೊದಲೇ ತಿದ್ದಿಬಿಡಬೇಕು. ಗೊತ್ತಿದ್ದೂ ಮುಚ್ಚಿಟ್ಟರೆ ಒಂದೇ ಸಲಕ್ಕೆ ಹೀಗಾಗುತ್ತದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ತಾಂಡವ್ಗೆ ಇನ್ನಾದರೂ ಬುದ್ಧಿ ಬರಲಿ ಎಂದಿದ್ದರೆ, ಮತ್ತೆ ಕೆಲವರು ಅವನಿಗೆ ಬುದ್ಧಿ ಬಂದರೂ ಗರ್ಲ್ಫ್ರೆಂಡ್ ಶ್ರೇಷ್ಠಾ ಬಿಡಬೇಕಲ್ಲ ಅನ್ನುತ್ತಿದ್ದಾರೆ.
ಸಿಟ್ಟು ಬಂದ್ರೆ ಗಂಡ ದಡಬಡ ಅಂತ ಮನೆಯಿಂದ ಹೊರ ಹೋಗ್ಬೇಕು, ಸುಖ ಸಂಸಾರಕ್ಕೆ ಹರೀಶ್ ಈ ಸೂತ್ರ ವರ್ಕ್ ಔಟ್ ಆಗುತ್ತಾ?