ಬಿಗ್ ಬಾಸ್ ಮನೆ ವಾರದ ಪಂಚಾಯಿತಿ/ ಈ ವಾರವೂ ಕಿಚ್ಚ ಸುದೀಪ್ ಭಾಗವಹಿಸುವುದಿಲ್ಲ/ ವಾಹಿನಿಯಿಂದ ಅಧಿಕೃತ ಸ್ಪಷ್ಟನೆ/  ಎರಡು ವಾರದಿಂದ ಸುದೀಪ್ ನಡೆಸಿಕೊಟ್ಟಿಲ್ಲ/ ಕೊರೋನಾ ನಿಷೇಧಾಜ್ಞೆಯೂ  ಜಾರಿಯಲ್ಲಿದೆ.

ಬೆಂಗಳೂರು (ಏ. 30) ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದ ಸುದೀಪ್‌ ಚೇತರಿಸಿಕೊಂಡಿದ್ದು, ಈ ವಾರದ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದರು.

ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ ಎಂದು ವಾಹಿನಿ ತಿಳಿಸಿದೆ.

ಎರಡು ವಾರಗಳಿಂದ ಬಿಗ್‌ಬಾಸ್‌ ವಾರ ಪಂಚಾಯತಿಯಿಂದ ದೂರವೇ ಉಳಿದಿದ್ದರು. ಕೊರೋನಾ ನಿಷೇಧಾಜ್ಞೆ ಇರುವ ಹಿನ್ನೆಲೆಯಲ್ಲಿ ವಾರದ ಪಂಚಾಯ್ತಿಯನ್ನು ವರ್ಚುವಲ್‌ ಆಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? 

ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಸುದೀಪ್ ಚೇತರಿಕೆಗಾಗಿ ಪ್ರಾರ್ಥಿಸಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದರು.. ‘ನನ್ನ ಚೇತರಿಕೆಗೆ ನೀವೆಲ್ಲ ಹಾರೈಸಿದ್ದು, ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದು ನನ್ನ ಗಮನಕ್ಕೆ ಬಂದಿದೆ. ಎಲ್ಲರಿಗೂ ಪ್ರೀತಿಯಷ್ಟೇ ನೀಡಬಲ್ಲೆ’ ಎಂದಿದಿದ್ದರು. 

ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ...

Posted by Colors Kannada on Friday, 30 April 2021