ಕೂರ್ಗ್‌ ಟ್ರಿಪ್‌ನಲ್ಲಿ ಗರ್ಭಿಣಿ ನೇಹಾ ಗೌಡ, ಮುಖದ ಕಳೆ ನೋಡಿದ್ರೆ ಹೆಣ್ಣು ಮಗುನೇ ಹುಟ್ಟೋದು ಎಂದ ನೆಟ್ಟಿಗರು!

ಮೊದಲ ಮಗುವಿನ ಖುಷಿಯಲ್ಲಿರುವ ನಟಿ ನೇಹಾ ಗೌಡ ಕೂರ್ಗ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 

Kannada TV stars pregnant Neha Gowda enjoying coorg trip  gow

ಲಕ್ಷ್ಮೀ ಬಾರಮ್ಮ, ಲಚ್ಚಿ ಸೀರಿಯಲ್‌ ಮೂಲಕ ಕನ್ನಡಿಗರ ಮನೆಮಾತಾಗಿರುವ ಕಿರುತೆರೆ ನಟಿ ನೇಹಾ ಗೌಡ ಅಲಿಯಾಸ್ ಗೊಂಬೆ ತಾಯಿಯಾಗುತ್ತಿರುವ ಖುಷಿಯಲಿದ್ದಾರೆ. ಇದೀಗ ಮೊದಲ ಮಗುವಿನ ಖುಷಿಯಲ್ಲಿರುವ ನಟಿ  ಕೊಡಗಿನಲ್ಲಿ ತಮ್ಮ ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. 

ಪ್ರೆಗ್ನೆನ್ಸಿ ಬ್ಲಿಸ್ ಎಂದು ಅಮ್ಮನಾಗುತ್ತಿರುವ ಖುಷಿಯನ್ನು ಹಂಚಿಕೊಂಡಿರುವ ನೇಹಾ ಅವರು ತಮ್ಮ ಫ್ರೆಂಡ್ಸ್ ಜೊತೆಗೆ ಮಂಜಿನ ನಗರಿ ಕೂರ್ಗ್‌ನಲ್ಲಿ ಪ್ರತೀ ಕ್ಷಣವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.

2024ರಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕನ್ನಡ ನಟಿಯರ ಸಾಲಿಗೆ ಹರ್ಷಿಕಾ ಸೇರ್ಪಡೆ, ಯಾರೆಲ್ಲ ಇದ್ದಾರೆ?

ಕೂರ್ಗ್‌ನಲ್ಲಿ ವಿಶ್ರಾಂತಿಯ ವಿಹಾರವನ್ನು ಆನಂದಿಸುತ್ತಿದ್ದೇನೆ. ಪ್ರಕೃತಿಯು ಪ್ರಶಾಂತತೆಯಿಂದ ಸುತ್ತುವರಿದಿದೆ. ಈ ಸುಂದರ ಅನುಭವವನ್ನು, ಇಂತಹ ವಿಶೇಷ ಸಮಯದಲ್ಲಿ ಪ್ರತಿ ಕ್ಷಣವೂ ಸವಿಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ತಮ್ಮ ಸ್ನೇಹಿತರ ಜತೆಗೆ ಟ್ರಿಪ್ ಹೋಗಿದ್ದು, ಅಕ್ಕ ನಟಿ ಸೋನು ಗೌಡ, ನಟಿ ಅನುಪಮಾ ಗೌಡ ಸೇರಿದಂತೆ ಹಲವು ಗೆಳತಿಯರು ಈ ಟ್ರಿಪ್ ನಲ್ಲಿ ತಮ್ಮ ರಜಾ ದಿನಗಳನ್ನು ಮಜಾ ಮಾಡುತ್ತಿದ್ದಾರೆ.

ಲವ್‌ ಬೇರೆ, ಮದುವೆ ಬೇರೆ, ಒಂದೇ ರೂಂನಲ್ಲಿ ಸಂಸಾರ ಆರಂಭಿಸಿದಾಗಲೇ ಎಲ್ಲವೂ ಗೊತ್ತಾಗೋದು: ಚಂದನ್ ಶೆಟ್ಟಿ

ನೇಹಾ ಗೌಡ ಮತ್ತು ನಟ ಚಂದನ್ ಗೌಡ ಕಳೆದ ಮೇ 31ರಂದು ಪೊಷಕರಾಗುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. 2018ರಲ್ಲಿ ವಿವಾಹವಾಗಿದ್ದ ಈ ಜೋಡಿ ಮದುವೆಯಾದ ಆರು ವರ್ಷಗಳ ಬಳಿಕ ಈ ವರ್ಷ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧವಾಗಿದ್ದಾರೆ.

Latest Videos
Follow Us:
Download App:
  • android
  • ios