ಕಿರುತೆರೆ ನಟಿ ವರ್ಷಿತಾಗೆ ಕೊರೋನಾ ಪಾಸಿಟಿವ್. ಪ್ರಮುಖ ಪಾತ್ರಧಾರಿ ಆಗಿರುವ ಕಾರಣ ಲ್ಯಾಗ್ ಮಾಡಲಾಗದೇ ಪಾತ್ರಕ್ಕೆ ಹೊಸ ಕಲಾವಿದೆಯನ್ನು ಪರಿಚಯಿಸಿದ ತಂಡ.

ದಿನೆ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಮಂಜಾಗೃತ ಕ್ರಮಗಳನ್ನು ಕೈಗೊಂಡರೂ ಸಣ್ಣಪುಟ್ಟ ನಿರ್ಲಕ್ಷ್ಯದಿಂದ ಅಮಾಯಕರಿಗೆ ಸೋಂಕು ತಗಲುತ್ತಿದೆ. ಲಾಕ್‌ಡೌನ್‌ ಜಾರಿಗೊಳ್ಳುತ್ತಿದ್ದಂತೆ, ಚಿತ್ರರಂಗದ ಹಾಗೂ ಕಿರುತೆರೆ ಕ್ಷೇತ್ರಕ್ಕೆ ಬ್ರೇಕ್ ಬಿದ್ದಿದೆ. ಇದೀಗ ಕಿರುತೆರೆ ಜನಪ್ರಿಯಾ ನಟಿ ವರ್ಷಿತಾಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದ ಕಾರಣ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

ಕೊರೋನಾ ಪಾಸಿಟಿವ್ ಹಾಗೂ ಧಾರಾವಾಹಿಯಿಂದ ಹೊರ ಬಂದಿರುವ ವಿಚಾರವನ್ನು ಖುದ್ದು ವರ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ನನಗೆ ಕೊರೋನಾ ಪಾಸಿಟಿವ್ ಬಂದಿರುವ ಕಾರಣ ಚಿತ್ರೀಕರಣದಲ್ಲಿ ಭಾಗಿಯಾಗಲು ಅಸಾಧ್ಯವಾಗಿದೆ. ಹೀಗಾಗಿ ನನ್ನ ಬದಲಾಗಿ ಹೊಸ ವ್ಯಕ್ತಿಯನ್ನು ನನ್ನ ಪಾತ್ರಕ್ಕೆ ಪರಿಚಯ ಮಾಡಲಾಗಿದೆ. ನಾನು ಕಸ್ತೂರಿ ನಿವಾಸ ಧಾರಾವಾಹಿಯಿಂದ ಹೊರ ಬಂದಿರುವೆ,' ಎಂದು ವರ್ಷಿತಾ ಬರೆದುಕೊಂಡಿದ್ದಾರೆ. 

21 ದಿನ ಕ್ವಾರಂಟೈನ್; ಕೊರೋನಾದಿಂದ ಪಾರಾದ ನಟಿ ಶ್ವೇತಾ ಚೆಂಗಪ್ಪ! 

ಸದ್ಯ ವರ್ಷಿತಾ ತಮ್ಮ ನಿವಾದಸಲ್ಲಿಯೇ ಸೆಲ್ಫ್ ಐಸೋಲೇಟ್ ಅಗಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಅತ್ತೆ-ಮಾವಂದಿರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂಬ ವಿಚಾರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಕುಟುಂಬಸ್ಥರ ಆರೋಗ್ಯ ಸ್ಥಿತಿ ಬಗ್ಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona