ಬಿಗ್ ಬಾಸ್ ಸ್ಪರ್ಧಿ, ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಭೂಮಿ ಶೆಟ್ಟಿ ಲಾಕ್‌ಡೌನ್‌ ದಿನಗಳನ್ನು ತಮ್ಮ ಹುಟ್ಟೂರಿನಲ್ಲಿ ಕಳೆಯುತ್ತಿದ್ದಾರೆ. ಲಾಕ್‌ಡೌನ್‌ ಅರಂಭವಾಗುವ ಮುನ್ನವೇ ಸೋಲೋ  ಬೈಕ್ ರೈಡ್ ಮೂಲಕ ಊರಿಗೆ ತೆರಳಿರುವ ಭೂಮಿ ಈಗ ಕೃಷಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಂಗಳೂರಿಗೆ ಒಬ್ಬಂಟಿಯಾಗಿ ಬೈಕ್‌ ರೈಡ್‌ ಹೊರಟ ಕಿರುತೆರೆ ನಟಿ ಭೂಮಿ ಶೆಟ್ಟಿ! 

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಮ್ಮ ಕೃಷಿ ಕೆಲಸಗಳ ಬಗ್ಗೆ ಭೂಮಿ ಅಪ್ಡೇಟ್ ನೀಡುತ್ತಿದ್ದಾರೆ. ಅಲ್ಲದೇ ಸಂಪ್ರಾದಾಯಿಕ ಕೃಷಿ ಉಡುಪುಗಳನ್ನು ಧರಿಸಿ ಹಳ್ಳಿಯ ಸೊಗಡಿನಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಮಾಡುತ್ತಿದ್ದಾರೆ. ಭೂಮಿ ಶೇರ್ ಮಾಡುತ್ತಿರುವ ಹಳ್ಳಿ ವಿಡಿಯೋ, ಫೋಟೋ ಕಂಡ ನೆಟ್ಟಿಗರು ನಮ್ಮ ಊರನ್ನು ಮಿಸ್ ಮಾಡಿಕೊಳ್ಳುವ ಹಾಗೆ ಮಾಡಬೇಡಿ ಪ್ಲೀಸ್ ಎಂದಿದ್ದಾರೆ. 

ಕಲರ್ಸ್ ಸೂಪರ್‌ನಲ್ಲಿ 'ಮಜಾ ಭಾರತ ಸೀಸನ್ 3'ರ ನಿರೂಪಕಿಯಾಗಿ ಕಾಣಿಸಿಕೊಂಡ ಭೂಮಿ ಕಾರ್ಯಕ್ರಮದಿಂದ ಹೊರ ಬಂದು, ತೆಲುಗು ಧಾರಾವಾಹಿಗೆ ಸಹಿ ಮಾಡಿದ್ದರು. ಕಾರಣಾಂತರಗಳಿಂದ ಧಾರಾವಾಹಿ ಅರ್ಧದಲ್ಲಿಯೇ ನಿಂತಿತ್ತು.  ಭೂಮಿ ಕೈಯಲ್ಲಿ ಯಾವ ಪ್ರಾಜೆಕ್ಟ್‌ಗಳಿವೆ, ಯಾವ ಧಾರಾವಾಹಿಗೆ ಸಹಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಭೂಮಿ ಶೆಟ್ಟಿ ಅಲಿಯಾಸ್ ರಾಯಲ್ ಶೆಟ್ಟಿ ಬೈಕ್ ಸವಾರಿ ನಿಲ್ಲಿಸಿಲ್ಲ.