Asianet Suvarna News Asianet Suvarna News

ಕೊನೆಗೂ ಪೂರ್ಣಿಯನ್ನು ಮಗಳೆಂದು ಒಪ್ಪಿಕೊಂಡ್ನಾ ಜನಾರ್ದನ? ಸೀರೆಯತ್ತ ನೆಟ್ಟಿಗರ ಕಣ್ಣು!

 ಪೂರ್ಣಿಯನ್ನು ಜನಾರ್ದನ ಮನೆಗೆ ಕರೆತಂದಿದ್ದು ಮಗಳೆಂದು ಒಪ್ಪಿಕೊಂಡಿದ್ದಾನೆ. ಇದನ್ನು ಬಿಟ್ಟು ಪೂರ್ಣಿ ಸೀರೆಯ ಮೇಲೆ ನೆಟ್ಟಿಗರ ಕಣ್ಯಾಕೆ? 
 

Janardhana accepted  Poorni as  his daughter in Shreerastu Shubhastu suc
Author
First Published May 10, 2024, 12:40 PM IST

ಪೂರ್ಣಿ, ಜನಾರ್ದನ ಮತ್ತು ಪಂಕಜನೇ ಪೂರ್ಣಿಯ ನಿಜವಾದ ಅಪ್ಪ-ಅಮ್ಮ ಎನ್ನುವುದು ತಿಳಿದಿದೆ. ಆದರೆ ಇದೀಗ ಆಸ್ತಿ ಜನಾರ್ದನ ಕೈಸೇರಬೇಕು ಎಂದರೆ ಪೂರ್ಣಿಯನ್ನು ಮಗಳು ಎಂದು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಮಗಳು ಹುಟ್ಟುತ್ತಿದ್ದಂತೆಯೇ ತನ್ನ ಜೀವನದಲ್ಲಿ ಕೆಲವೊಂದು ಅವಘಡಗಳು ಸಂಭವಿಸಿದ ಕಾರಣದಿಂದ ಮಗಳು ಅನಿಷ್ಠ ಎಂದು ಆಕೆಯನ್ನು ದೇವಸ್ಥಾನದಲ್ಲಿ ಬಿಟ್ಟು ಬಂದಿರುತ್ತಾನೆ.  ಆದರೆ ಅವಳ ಹೆಸರಿನಲ್ಲಿಯೇ ಎಲ್ಲಾ ಆಸ್ತಿ ಇರುವುದು ತಿಳಿದು, ಅವಳ ಸಹಿ ಬೇಕಾಗಿರುತ್ತದೆ. ಅದಕ್ಕಾಗಿಯೇ ಮಗಳನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಇವಳೇ ತನ್ನ ಮಗಳು ಎಂದು ವಕೀಲರಿಗೂ ಪರಿಚಯ ಮಾಡಿಸುತ್ತಾನೆ. ಆದರೆ ಅದರಲ್ಲಿ ಇರುವುದು ಸತ್ಯವೋ ಕುತಂತ್ರವೋ ಎನ್ನುವುದು ಈಗಿರುವ ಪ್ರಶ್ನೆ. 

ಈ ಮೂಲಕ ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಟ್ವಿಸ್ಟ್​ ಸಿಕ್ಕಿದೆ. ಅಷ್ಟಕ್ಕೂ ಇಲ್ಲಿಯವರೆಗೆ ಪೂರ್ಣಿ ಅನಾಥೆ ಎಂದೇ ಇಲ್ಲಿಯವರೆಗೆ ತೋರಿಸುತ್ತಾ ಬರಲಾಗಿತ್ತು. ಅವಳು ತನ್ನನ್ನು ತಾನು ಅನಾಥೆ ಎಂದುಕೊಂಡಿದ್ದಳು. ಅನಾಥಾಶ್ರಾಮದಲ್ಲಿಯೇ ಬೆಳೆದಿರುವ ಪೂರ್ಣಿಗೆ ತನ್ನ ಹುಟ್ಟಿನ ಬಗ್ಗೆಯೂ ಗೊತ್ತಿಲ್ಲ. ಅದರ ಬಗ್ಗೆ ಆಕೆ ಹೆಚ್ಚಿಗೆ ತಲೆಕೆಡಿಸಿಕೊಂಡೂ ಇಲ್ಲ. ಮಾಧವನ ಮನೆಯಲ್ಲಿ ಎಲ್ಲರೂ ಆಕೆಯನ್ನು ಅನಾಥೆ ಎಂದುಕೊಂಡಿದ್ದಾರೆ. ಮಾಧವನ ಮಗ ಅವಿಯ ಮಡದಿಯಾಗಿ ಬಂದಿದ್ದಾಳೆ. ಅವಿ ಕೂಡ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ತುಂಬಾ  ಪ್ರೀತಿ ಮಾಡುತ್ತಿದ್ದಾನೆ. ಇನ್ನು ತುಳಸಿಗೋ ಆ ಮನೆಯಲ್ಲಿ ಮಾಧವ್​ನನ್ನು ಬಿಟ್ಟರೆ ತುಂಬಾ ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುವವಳು ಇದೇ ಪೂರ್ಣಿ. ಈಕೆಗೂ ತುಳಸಿಯೇ ಅಮ್ಮ. ಆದರೆ ಈಕೆ ಅನಾಥಾಶ್ರಮದಿಂದ ಬಂದವಳು ಎನ್ನುವ ಕಾರಣಕ್ಕೆ ದೀಪಿಕಾ ಆಗ್ಗಾಗ್ಗೆ ಚುಚ್ಚುವುದು ಉಂಟು.

ಪುಟ್ಟಕ್ಕನಿಗಿಂದು ಹುಟ್ಟುಹಬ್ಬದ ಸಂಭ್ರಮ: ರಾಷ್ಟ್ರೀಯ ಕಲಾವಿದೆಯಾಗಿ ಮಿಂಚಬೇಕಿದ್ದ ನಟಿಗೆ ಸಿಕ್ಕಿಲ್ಲವೇ ಅವಕಾಶ?
 
ಈಗ ಆ ಮಗುವಿನ ರಹಸ್ಯ ಬಯಲಾಗಿದೆ. ಅವಳೇ ಪೂರ್ಣಿ ಎನ್ನುವ ಸತ್ಯ ತೋರಿಸಲಾಗಿದೆ.  ಈಕೆ ವಿಲನ್​ ದೀಪಿಕಾಳ ಅಕ್ಕನೇ ಇದ್ದಿರಬಹುದು. ಆಕೆಯ ಅಪ್ಪನಿಗೆ ಪೂರ್ಣಿ ಅಕ್ರಮವಾಗಿ ಹುಟ್ಟಿರುವ ಮಗು ಇದ್ದಿರಬಹುದು, ಇಲ್ಲವೇ ಮದುವೆಗೂ ಮುನ್ನ ದೀಪಿಕಾ ಅಮ್ಮನಿಗೆ ಇದು ಹುಟ್ಟಿದ್ದಿರಬಹುದು. ಖಂಡಿತವಾಗಿಯೂ ಪೂರ್ಣಿ ಇದೇ ಶ್ರೀಮಂತರ ಮನೆಯ ಮಗಳು ಎನ್ನುತ್ತಿದ್ದ ವೀಕ್ಷಕರ ಮಾತು ನಿಜವಾಗಿದೆ.  ಆದರೆ ಆಸ್ತಿಗಾಗಿ ಮಗಳನ್ನು ಒಪ್ಪಿಕೊಂಡಂತೆ ಮಾಡುವ ಜನಾರ್ದನನ ಬಣ್ಣ ಹೇಗೆ ಬಯಲಾಗುತ್ತದೆ ಎನ್ನುವುದು ಈಗಿರುವ ಸತ್ಯ. 

ಇದು ಸೀರಿಯಲ್​ ಕಥೆಯಾದರೆ, ಇನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಪೂರ್ಣಿ ತೊಟ್ಟಿರುವ ಸೀರೆಯ ಮೇಲೆ ನೆಟ್ಟಿಗರ ಕಣ್ಣು ಹೋಗಿದೆ. ಪೂರ್ಣಿ ಮನೆಗೆ ಬಂದಾಗ ನೇರಳೆ ಬಣ್ಣದ ಸೀರೆಯನ್ನು ತೊಟ್ಟಿದ್ದಾಳೆ. ಇದೇ ಪ್ರೊಮೋದ ಕೊನೆಯಲ್ಲಿ ಆಕೆಯ ಸೀರೆಯ ಬಣ್ಣ ಹಸಿರಾಗಿದೆ. ಇದು ಶೂಟಿಂಗ್ ವೇಳೆ ಆಗಿರುವ ಎಡವಟ್ಟಾ, ಅಥ್ವಾ ಇನ್ನೇನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸಾಮಾನ್ಯವಾಗಿ ಒಂದೇ ದೃಶ್ಯದ ಶೂಟಿಂಗ್​ಗಳನ್ನು ಬೇರೆ ಬೇರೆ ದಿನಗಳಲ್ಲಿಯೂ ಮಾಡುವುದು ಉಂಟು. ಅಂಥ ಸಂದರ್ಭಗಳಲ್ಲಿ ನಟ-ನಟಿಯರು ಬಟ್ಟೆ, ಹೇರ್​ಸ್ಟೈಲ್​ ಇತ್ಯಾದಿಗಳ ಮೇಲೆ ಜಾಗೃತೆ ವಹಿಸಲಾಗುತ್ತದೆ. ಆದರೆ ಇದೀಗ ಪೂರ್ಣಿ ಸೀರೆಯ ವಿಷಯದಲ್ಲಿ ಎಡವಟ್ಟು ಆಗಿದ್ಯಾ ಎನ್ನುವುದು ಸೀರಿಯಲ್​ ಪ್ರೇಮಿಗಳ ಪ್ರಶ್ನೆ. 

ಶಾಹೀದ್​ಗೆ ಇಬ್ಬರು ಅಪ್ಪಂದಿರು, ಮೂವರು ಅಮ್ಮಂದಿರು! ಚಾಕಲೇಟ್​ ಹೀರೋ ಫ್ಯಾಮಿಲಿ ಕಥೆಯೇ ಕುತೂಹಲ

Latest Videos
Follow Us:
Download App:
  • android
  • ios