ಹೆಣ್ಣು ಸಿಗದ ಗಂಡು ಮಕ್ಕಳಿಗೆ ಭರ್ಜರಿ ಆಫರ್; ಚಂದುಳ್ಳಿ ಚಲುವೆ ಜೊತೆಗೆ 2 ಕೋಟಿ ರೂ. ಬಂಗಲೆ, 50 ಲಕ್ಷ ಎಫ್‌ಡಿ ಉಚಿತ
ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಹಾಗೂ ಮದುವೆಯಾಗೋ ಹುಡ್ಗಿ ಹಣದಲ್ಲೇ ಲೈಫ್ ಸೆಟಲ್ ಮಾಡ್ಕೋಬೇಕು ಎನ್ನುವ ಹುಡುಗರಿಗೆ ಭರ್ಜರಿ ಆಫರ್ ಸಿಕ್ಕಿದೆ ನೋಡಿ.. ಈ ಹುಡುಗಿ ಮದುವೆಯಾದರೆ 2 ಕೋಟಿ ರೂ. ಮೌಲ್ಯದ ಬಂಗಲೆ, 50 ಲಕ್ಷ ರೂ. ಎಫ್‌ಡಿ ಹಣ ಉಚಿತ..
ನವದೆಹಲಿ (ಜೂ.03): ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ ದೇಶದಾದ್ಯಂತ ರೈತರ ಮಕ್ಕಳು, ವಿದ್ಯಾವಂತ ಯುವಕರು ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಸೇರಿದಂತೆ ಕೋಟ್ಯಂತರ ಯುವಜನರು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂದು ಕೊರಗುತ್ತಿದ್ದಾರೆ. ಅಂತಹ ಹೆಣ್ಣು ಸಿಗದ ಹುಡುಗರಿಗೆ ಇಲ್ಲೊಬ್ಬ ವೈದ್ಯರು ಭರ್ಜರಿ ಆಫರ್ ಕೊಟ್ಟಿದ್ದಾರೆ. ತನ್ನ ಮಗಳನ್ನು ಮದುವೆಯಾದರೆ 2 ಕೋಟಿ ರೂ. ಬೆಲೆಬಾಳುವ ಬಂಗಲೆ, ಹುಡುಗಿ ಹೆಸರಿನಲ್ಲಿಟ್ಟಿರುವ 50 ಲಕ್ಷ ರೂ. ಎಫ್‌ಡಿ ಹಣ ಸೇರಿದಂತೆ ಇನ್ನಿತರೆ ಉಡಿಗೊರೆಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಹೌದು, ಈ ಆಫರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಓಪನ್ ಆಗಿ ನೀಡಲಾಗಿದೆ. ವೈದ್ಯರಾಗಿರುವ ಹುಡಗಿಯ ತಂದೆ ತನ್ನ ಮಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಮಾತನಾಡಿದ ಅವರು, ನನ್ನ ಮಗಳನ್ನು ಮದುವೆ ಮಾಡಿಕೊಳ್ಳುವ ಹುಡುಗನಿಗೆ ನನ್ನ ಹಿಂದೆ ಕಾಣುತ್ತಿರುವ ಈ 2 ಕೋಟಿ ರೂ. ಮೌಲ್ಯದ ದೊಡ್ಡ ಬಂಗಲೆ, ನಾನು ಕಟ್ಟಿಸಿರುವ ದೊಡ್ಡ ಕ್ಲಿನಿಕ್ ಹಾಗೂ ಮಗಳ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿರುವ 50 ಲಕ್ಷ ರೂ. ಮೌಲ್ಯದ ಹಣವನ್ನು ನಿಮಗೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಮಗಳ ಚುನಾವಣಾ ಫಲಿತಾಂಶದ ಟೆನ್ಷನ್ ಬಿಟ್ಟು ಮೀನುಗಳಿಗೆ ಕಾಳು ಹಾಕಿದ ಮಿನಿಸ್ಟರ್ ಜಾರಕಿಹೊಳಿ!
ತಂದೆಯ ಮಾತಿನ ನಂತರ ಮದುವೆ ಮಾಡಿಕೊಳ್ಳುವ ಹುಡುಗಿ ಮಾತನಾಡಿ, ಹುಡುಗ ಕಪ್ಪು, ಬಿಳಿಪು, ಎಣ್ಣೆಗೆಂಪು ಯಾವುದೇ ಬಣ್ಣವಿದ್ದರೂ ಪರವಾಗಿಲ್ಲ. ಆದರೆ, ಹುಡುಗ ಒಳ್ಳೆಯ ಗುಣಗಳನ್ನು ಹೊಂದಿರಬೇಕು. ಮುದುವೆಯಾದ ನಂತರ ನನ್ನನ್ನು ಹಾಗೂ ಈ ಚಿಕ್ಕ ಹುಡುಗಿಯನ್ನು ಜೊತೆಯಲ್ಲಿ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳಬೇಕು. ಒಳ್ಳೆಯ ಗುಣಗಳನ್ನು ಹೊಂದಿರುವ ಯುವಕರು ಈ ರೀಲ್ಸ್ ನೋಡಿದಾಕ್ಷಣ ಕಾಮೆಂಟ್ ಬಾಕ್ಸ್‌ನಲ್ಲಿ ಫೋನ್ ನಂಬರ್ ಹಾಕಿ, ನಾವು ನಿಮಗೆ ಕರೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ತಂದೆ ಮಗಳು ಮದುವೆಗಾಗಿ ಭರ್ಜರಿ ಆಫರ್ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಂ ವಿಡಿಯೋ ಮಿಲಿಯನ್‌ಗಟ್ಟಲೆ ವಿವ್ಸ್ ಪಡೆದುಕೊಂಡಿದೆ. ಜೊತೆಗೆ, 3.90 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಸಾವಿರಾರು ಕಾಮೆಂಟ್ಸ್‌ಗಳು ಬಂದಿದ್ದು, ಹಲವು ಜನರು ತಮ್ಮ ಮೊಬೈಲ್ ನಂಬರ್ ಹಾಕಿ ಪ್ಲೀಸ್ ನೀವು ನನಗೆ ಕರೆ ಮಾಡಿ ನಾನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ನೋಡಿ ಈ ಹುಡುಗಿ ಸೆಕೆಂಡ್ ಹ್ಯಾಂಡ್, ಪಕ್ಕದಲ್ಲಿರುವ ಮಗು ಅವಳದ್ದೇ ಎಂದು ಕಾಮೆಂಟ್ ಮಾಡಿದ್ದಾರೆ.
ಶಿವಮೊಗ್ಗ ಗಲಾಟೆ: ಒಂದು ಮಟನ್ ಪೀಸ್‌ಗಾಗಿ ಗ್ರಾಹಕನ ಬುರುಡೆ ಬಿಚ್ಚಿದ ಅಪ್ರಾಪ್ತ
ಮೋಸದ ಜಾಲವೂ ಇರಬಹುದು ಹುಷಾರ್!
ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಂ ಖಾತೆಯನ್ನು ಪರಿಶೀಲನೆ ಮಾಡಿದರೆ ಇದೊಂದು ಫೇಕ್ ಅಕೌಂಟ್ ಎಂಬುದು ಗೊತ್ತಾಗುತ್ತದೆ. ಹೀಗಾಗಿ, ರೀಲ್ಸ್ ನೋಡಿದವರು ಕಾಮೆಂಟ್‌ನಲ್ಲಿ ತಮ್ಮ ಮೊಬೈಲ್ ನಂಬರ್ ಹಂಚಿಕೊಳ್ಳುವುದು ಅಪಾಯಕಾರಿ ಎಂಬುದು ಗೊತ್ತಾಗುತ್ತದೆ. ನಿಮ್ಮ ನಂಬರ್‌ಗೆ ಕರೆ ಮಾಡಿ ಯಾವುದಾದರೂ ಮೂಲದಿಂದ ಒಟಿಪಿ ಅಥವಾ ಇನ್ನಾವುದೇ ಲಿಂಕ್ ಕಳಿಸಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಲಪಟಾಯಿಸಬಹುದು. ಮದುವೆ ಮಾಡಿಕೊಳ್ಳುವ ಮುನ್ನ ಸಣ್ಣಪುಟ್ಟ ಖರ್ಚು ಎಂದ್ಹೇಳಿ ನಿಮ್ಮಿಂದ ಹಣ ಪಡೆದು ವಂಚನೆಯನ್ನೂ ಮಾಡಬಹುದು. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳಿಗೆ ನಿಮ್ಮ ವೈಯಕ್ತಿಕ ಮೊಬೈಲ್ ನಂಬರ್, ಬ್ಯಾಂಕ್ ವಿವರ ಇನ್ನಿತರ ಮಾಹಿತಿಗಳನ್ನು ಹಂಚಿಕೊಳ್ಳದೇ ಇರುವುದು ಉತ್ತಮ.