'ಯೇ ರಿಷ್ತಾ ಕ್ಯಾ ಕೆಹ್ಲತಾ ಹೈ' ಧಾರಾವಾಹಿ ಮೂಲಕ ಮನೆ-ಮನಗಳಲ್ಲಿ ಜನಪ್ರಿಯತೆ ಪಡೆದಿರುವ ಉತ್ತರಾಖಂಡದ  ರಾಜವಂಶದ ನಟಿ ಮೋಹೆನಾ ಕುಮಾರಿ ಸಿಂಗ್ ಕುಟುಂಬದವರಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದುಬಂದಿದೆ.  

ಅತ್ತೆಯಿಂದ ಕೊರೋನಾ:

ಮೋಹೆನಾ ಅವರ ಅತ್ತೆಗೆ ಕೆಲಸ ದಿನಗಳ ಹಿಂದೆ ಆರೋಗ್ಯದಲ್ಲಿ ಏರು ಪೇರಾಗಿ ಜ್ವರ ಕಾಣಿಸಿಕೊಂಡಿತ್ತು, ಇದು ಸಾಮಾನ್ಯ ಜ್ವರ ಆಗಿರಬೇಕು ಎಂದು ತಿಳಿದುಕೊಂಡು ಸುಮ್ಮನಾಗಿದ್ದಾರೆ ಆದರೆ ಕಡಿಮೆಯಾಗದ ಕಾರಣ ಪರೀಕ್ಷೆಗೆ  ಒಳಪಡಿಸಿದ ನಂತರ ಕೊರೋನಾ ಎಂದು ತಿಳಿದು ಬಂದಿದೆ. 

ಈ ಕಾರಣಕ್ಕೆ ಕುಟುಂಬಸ್ಥರು ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ ಕೆಲವರಿಗೆ ನೆಗೆಟಿವ್ ಕೆಲವರಿಗೆ ಪಾಸಿಟಿವ್ ಬಂದಿದೆ ಎಂದು ಸ್ವತಃ ಮೋಹೆನಾ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮೋಹೆನಾ ಅತ್ತೆ ಸಂಪರ್ಕದಲ್ಲಿದ್ದು ಜೊತೆ ಕೆಲಸ ಮಾಡುತ್ತಿದ್ದ 17 ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಹಾಗೂ ಅವರಲ್ಲಿ ಕೆಲವರಿಗೆ ಕೊರೋನಾ ಲಕ್ಷಣಗಳು ಕಂಡು ಬಂದಿದ್ದು ತಪಾಸಣಾ ವರದಿಗೆ ಕಾಯಬೇಕಿದೆ.

ಮೋಹೆನಾ ಮಾತು:

'ಮೊದಲೇ ಅವರಿಗೆ ಆರೋಗ್ಯ ತಪಾಸಣೆ ಮಾಡಿದೆವು ಆಗ ನೆಗೆಟಿವ್‌ ಬಂದಿತ್ತು. ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ ಮಾಮೂಲಿ ಆರೈಕೆ ಮಾಡುತ್ತಿದ್ದೆವು ಆದರೂ ಜ್ವರ ಕಡಿಮೆಯಾಗದೆ ಇದ್ದಾಗ ಮತ್ತೊಮ್ಮೆ ಚೆಕ್ ಮಾಡಿಸಿದಾಗ  ಪಾಸಿಟಿವ್ ಎಂದು ತಿಳಿಯಿತು. ಸೋಂಕಿನ  ಲಕ್ಷಣಗಳು ಕುಟುಂಬಸ್ಥರಿಗೆ ಇಲ್ಲದಿದ್ದರೂ ಕೆಲವರಿಗೆ ಪಾಸಿಟಿವ್ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಜನರಲ್ಲಿ ಸೋಂಕು ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಎಂದು ತಿಳಿದು ಬರುತ್ತಿದೆ. ನಮ್ಮೆಲ್ಲರಲ್ಲೂ ಈಗ ಕಾಣಿಸಿಕೊಂಡ ಕಾರಣ ಗಂಭೀರ ಪರಿಸ್ಥಿತಿ ಏನು ಇಲ್ಲ. ನಮ್ಮ ಕುಟುಂಬಸ್ಥರ ಬಗ್ಗೆ ಅನೇಕು ನೆಗೆಟಿವ್‌ ಸುದ್ದಿ ಹರಡಿಸುತ್ತಿದ್ದಾರೆ ಇದು ನಮಗೆ  ಕೆಟ್ಟ ಹೆಸರು ತರುವುದಕ್ಕೆ ಈ ಸಮಯದಲ್ಲಿ ಮಾಡುತ್ತಿರುವ ಪ್ಲಾನ್. ಆದರೆ ದುರಾದೃಷ್ಟ ನಮ್ಮ ಅತ್ತೆ ಮಾವ ಅವರಲ್ಲಿ ಅನೇಕರಿಗೆ ಸಹಾಯ ಮಾಡಿದ್ದಾರೆ. ಏನೇ ಇರಲಿ ನಮ್ಮಲಿರುವುದು  ಸಣ್ಣ ಪುಟ್ಟ ಲಕ್ಷಣಗಳು ನಾವು ಆದರೂ ಎಚ್ಚರದಿಂದ ಇದ್ದೇವೆ.

ನನ್ನ ಫ್ಯಾಮಿಲಿಯಲ್ಲಿ ನಮ್ಮ ಭಾವ ಅವರನ್ನು ಹೊರತು ಪಡಿಸಿ ಎಲ್ಲರಿಗೂ ಪಾಸಿಟಿವ್ ಬಂದಿದೆ. ಡೆಹ್ರೂಡೂನ್‌ನಲ್ಲಿ ಒಮ್ಮೆ ಬಿಸಿಲು, ಒಮ್ಮೆ ಮಳೆ, ಒಮ್ಮೆ ಶೀತದ ವಾತಾವರಣ ಹೀಗೆ ದಿನವೂ ಬದಲಾಗುತ್ತಿರುವುದರಿಂದ ಜ್ವರ ಬಂದರೂ ಅದು ಕೊರೋನಾ ಮಾತ್ರವಲ್ಲದೆ ವಾತಾವರಣದಿಂದಲೂ ಆಗಿರುತ್ತದೆ.

ಸಚಿವನ ಪತ್ನಿ:

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹರಿದ್ವಾರದಲ್ಲಿ ರಾಜಕುಮಾರಿ ಮೋಹೆನಾ ಹಾಗೂ ಸುಯೇಶ್ ರಾವತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸುಯೇಶ್‌ ರಾವತ್‌ ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಲ್ ಮಹಾರಾಜ್‌ ಅವರ ಮಗ.  ಮೋಹೆನಾ ಕುಮಾರಿ ತಂದೆ ಮಧ್ಯಪ್ರದೇಶದ ರೇವಾ ಸಂಸ್ಥಾನದ ರಾಜ.