ವೈರಲ್ ವಿಡಿಯೋವೊಂದರಲ್ಲಿ, ಸಿನಿಮಾ ಶೂಟಿಂಗ್ ವೇಳೆ ಬೃಹತ್ ತಿಮಿಂಗಿಲವೊಂದು ನಟಿಯನ್ನು ನುಂಗುವ ಭಯಾನಕ ದೃಶ್ಯವಿದೆ. ಆದರೆ ಇದು ಕೇವಲ ಚಿತ್ರೀಕರಣದ ಭಾಗವಾಗಿದ್ದು, ಕೃತಕವಾಗಿ ಸೃಷ್ಟಿಸಿದ ತಿಮಿಂಗಿಲವನ್ನು ಬಳಸಲಾಗಿದೆ. ನಟಿ ಸುರಕ್ಷಿತವಾಗಿದ್ದು, ಇದು ಎಐ ತಂತ್ರಜ್ಞಾನದ ಕಮಾಲ್ ತೋರಿಸುತ್ತದೆ.
ಸಿನಿಮಾ, ಸೀರಿಯಲ್ಗಳಲ್ಲಿ ಮಾಡುವ ಆ್ಯಕ್ಷನ್ ಸೀನ್ ಎನ್ನೋದು ಎನ್ನೋದು ಪರದೆಯ ಮೇಲೆ ನೋಡಿದಷ್ಟು ಭಯಾನಕವೂ ಆಗಿರಲಿಲ್ಲ, ಕೆಲವೊಮ್ಮೆ ಅಂದುಕೊಂಡಷ್ಟು ಸುಲಭವೂ ಆಗಿರಲ್ಲ. ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಹಾಗೆಂದು ಎಲ್ಲವೂ ಅಷ್ಟೊಂದು ಕಷ್ಟವೂ ಇರುವುದಿಲ್ಲ.
ಅಲ್ಲಿ ಆಗಿದ್ದೇನು?
ಈಗೊಂದು ವಿಡಿಯೋ ವೈರಲ್ ಆಗಿದೆ. ಇದು ಬಹುಶಃ ಇಂಗ್ಲಿಷ್ ಮೂವಿಯದ್ದು ಎಂದು ಅದನ್ನು ನೋಡಿದರೆ ತಿಳಿಯುತ್ತದೆ. ಇದರ ಶೂಟಿಂಗ್ ಮಾಡುವಾಗ, ಬೃಹತ್ ತಿಮಿಂಗಲವೊಂದು ನಟಿಯನ್ನೇ ನುಂಗಿಬಿಟ್ಟಿದೆ. ಇದನ್ನು ಹಾಗೆಯೇ ನೋಡಿದ್ರೆ ಭಯಾನಕ ಎನ್ನಿಸುವುದು ಉಂಟು. ಇದೊಂದು ಶೂಟಿಂಗ್ ಎನ್ನುವುದು ತಿಳಿಯದೇ, ಅಥವಾ ತಿಳಿದರೂ ಅದನ್ನು ಸುಮ್ಮನೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವವರು ತುಂಬಾ ಮಂದಿ ಇದ್ದಾರೆ. ನಿಜಕ್ಕೂ ನಟಿಯನ್ನು ತಿಮಿಂಗಲ ತಿಂದೇ ಬಿಡ್ತು ಎನ್ನುವ ರೀತಿಯಲ್ಲಿ ಇದು ಕಾಣಿಸುವ ಕಾರಣ, ಒಂದಿಷ್ಟು ಲೈಕ್ಸ್, ಶೇರ್ಸ್ಗಾಗಿ ಸುಳ್ಳೆ ಶೀರ್ಷಿಕೆ ಕೊಟ್ಟು ವೈರಲ್ ಮಾಡಿ ಬಿಡುತ್ತಾರೆ. ಇದರ ನೈಜತೆ ಅರಿವಿಲ್ಲದೇ ನೆಟ್ಟಿಗರು ಕಮೆಂಟ್ ಮಾಡೋದೇನು, ಶೂಟಿಂಗ್ ಮಾಡುವವರಿಗೆ ಬೈಯೋದೇನು... ಹೀಗೆ ನಡೆದೇ ಇರುತ್ತದೆ.
ಅದೇ ರೀತಿಯ ಹಾರಿಬಲ್ ಎನ್ನಿಸುವ ಶೂಟಿಂಗ್ ಇದಾಗಿದೆ. ಇಲ್ಲಿ ಮಹಿಳೆ ನೀರಿನಲ್ಲಿ ಕೈ ಹಾಕುತ್ತಿದ್ದಂತೆಯೇ ದೊಡ್ಡ ತಿಮಿಂಗಲವೊಂದು ಆಕೆಯನ್ನು ನುಂಗಿ ಬಿಡುತ್ತದೆ. ಅದು ಭಯಾನಕ ಎನ್ನಿಸುತ್ತೆ, ಜೊತೆಗೆ ನೈಜವೂ ಎನ್ನಿಸಿಬಿಡುತ್ತದೆ. ಆದರೆ ಅದು ಶೂಟಿಂಗ್ ಎಂದು ತಿಳಿದಾಗ, ಹಾಗೂ ಅಲ್ಲಿದ್ದವರು ಕಟ್ ಕಟ್ ಎಂದಾಗ ಇವೆಲ್ಲವೂ ಪೂರ್ವಯೋಜಿತ ಎನ್ನುವುದು ತಿಳಿಯುತ್ತದೆ. georgewuai ಎನ್ನುವ ಚಾನೆಲ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ.
ಎಐ ಯುಗ
ಅಷ್ಟಕ್ಕೂ ಅದು ನೈಜ ತಿಮಿಂಗಲ ಆಗಿರುವುದೇ ಇಲ್ಲ. ಅದನ್ನು ಕೃತಕವಾಗಿ ಸೃಷ್ಟಿ ಮಾಡಲಾಗಿರುತ್ತದೆ. ಹೇಳಿ ಕೇಳಿ ಇದು ಎಐ ಯುಗ. ಎಐ ಮೂಲಕ ತಿಮಿಂಗಲವನ್ನು ಸೃಷ್ಟಿ ಮಾಡಲಾಗಿರುತ್ತದೆ. ಅದು ನಿಜವಾಗಿಯೂ ಮಹಿಳೆಯನ್ನು ನುಂಗುವಂತೆ ಕಾಣಿಸುತ್ತದೆ. ಈ ಶೂಟಿಂಗ್ ಬಳಿಕ ತಿಮಿಂಗಲದ ಬಾಯಿಯೊಳಗಿಂದ ನಗುತ್ತಾ ಮಹಿಳೆ ನಾನು ಚೆನ್ನಾಗಿದ್ದೇನೆ ಎಂದಾಗಲೇ ಇದು ಕೃತಕ ತಿಮಿಂಗಲ, ಅಲ್ಲಿ ಏನೂ ಆಗಿಲ್ಲ. ಇದು ಆ ಸಿನಿಮಾದ ಭಾಗವಷ್ಟೇ ಎಂದು ತಿಳಿಯೋದು.



