Asianet Suvarna News Asianet Suvarna News

BIGG BOSS 10 ಟ್ವಿಸ್ಟ್​ ಟ್ವಿಸ್ಟ್​... ಯಾರು ಒಳಗೆ? ಯಾರು ಹೊರಗೆ? ಪ್ರೇಕ್ಷಕರಿಂದ ವೋಟಿಂಗ್​!

ಇದೇ ಮೊದಲ ಬಾರಿಗೆ ಬಿಗ್​ಬಾಸ್​ನಲ್ಲಿ ಹಲವು ಟ್ವಿಸ್ಟ್​ಗಳಿದ್ದು, ಪ್ರೇಕ್ಷಕರೇ ವೋಟಿಂಗ್​ ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ಏನಿದು ಹೊಸ ವಿಷ್ಯ? 
 

For the first time in Bigg Boss  audience will vote What is new update suc
Author
First Published Oct 8, 2023, 11:23 AM IST

ಕಲರ್ಸ್ ಕನ್ನಡದಲ್ಲಿ ಇಂದು ಬಿಗ್ ಬಾಸ್ ಷೋನ ಗ್ರ್ಯಾಂಡ್​ ಓಪನಿಂಗ್​ ಶುರುವಾಗಲಿದೆ.  ಎಲ್ಲಾ ಸೀಸನ್‌ಗಳಲ್ಲಿ ಕಾಣದ ಹೊಸ ಮನೆಯ ಜೊತೆಗೆ ಹಲವಾರು ಟ್ವಿಸ್ಟ್​ಗಳ ಜೊತೆ ಈ ಬಾರಿ ಬಿಗ್​ಬಾಸ್​ ಶುರುವಾಗಲಿದೆ ಎಂದು ಷೋ ಹೋಸ್ಟ್​ ಮಾಡುವ ಕಿಚ್ಚ ಸುದೀಪ್​ ಹಾಗೂ ಬಿಗ್​ಬಾಸ್​ ತಂಡ ಇದಾಗಲೇ ಹೇಳಿದೆ.  ಈ ಮೊದಲು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾಗಿದ್ದ ಮನೆಗಿಂತ ಈಗ ದೊಡ್ಡ ಆಲದ ಮರದ ಸಮೀಪ, ಬೆಂಗಳೂರು ಹೊರವಲಯದಲ್ಲಿ ನಿರ್ಮಾಣವಾಗಿದೆ ದೊಡ್ಮನೆ. 12 ಸಾವಿರ ಚದರ ಅಡಿ  ಅಳತೆಯಲ್ಲಿ ನಿರ್ಮಾಣವಾಗಿರುವ ಈ ಮನೆ, ಉಳಿದ ಭಾಷೆಗಳ ಬಿಗ್ ಬಾಸ್ ಮನೆಗಿಂತಲೂ ವಿಸ್ತೀರ್ಣದಲ್ಲಿ ಬಹಳಷ್ಟು ದೊಡ್ಡದಾಗಿದೆ ಎಂದು  ಕಲರ್ಸ್ ಕನ್ನಡ ಅಧಿಕೃತವಾಗಿ ಹೇಳಿಕೊಂಡಿದೆ. 16 ಮಂದಿ ಸ್ಪರ್ಧಿಗಳು ಇದರಲ್ಲಿ ಆಡಲಿದ್ದು, ಅವರ ಬಗ್ಗೆ ಬಿಗ್​ಬಾಸ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನೇನು ಕೆಲವೇ ಗಂಟೆಗಳಲ್ಲಿ ಷೋ ಆರಂಭವಾಗಲಿದೆ. ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್​ ಓಪನಿಂಗ್​ ಕಾಣಲಿದ್ದರೆ, ಪ್ರತಿ ರಾತ್ರಿ 9.30ರಿಂದ ಬಿಗ್​ಬಾಸ್​ ಷೋ ನಡೆಯಲಿದೆ.   ಟಿ.ವಿಯಲ್ಲಿ ಬಿಗ್​ಬಾಸ್​ ಅನ್ನು ಕೇವಲ ಒಂದು ಗಂಟೆಯಷ್ಟೇ ವೀಕ್ಷಿಸಬಹುದಾಗಿದೆ. ಆದರೆ ಇದೇ ಮೊದಲ ಬಾರಿಗೆ   'ಬಿಗ್‌ಬಾಸ್ ಕನ್ನಡ' jio cinema ದಲ್ಲಿಯೂ ಪ್ರಸಾರವಾಗಲಿದ್ದು, ದಿನದ ಇಪ್ಪತ್ತನಾಲ್ಕು ಗಂಟೆಯೂ ಮನೆಯಲ್ಲಿ ಏನಾಗುತ್ತಿದೆ ಎಂಬುದರ ನೇರಪ್ರಸಾರವನ್ನು ವೀಕ್ಷಕರು 24 ಗಂಟೆ ಲೈವ್ ಚಾನಲ್‌ನಲ್ಲಿ ನೋಡಬಹುದಾಗಿದೆ! ಇಂಥದ್ದೊಂದು ಹೊಸತನಕ್ಕೆ ಬಿಗ್​ಬಾಸ್ ಕೈ ಹಾಕಿದೆ.  ದೈನಂದಿನ ಸಂಚಿಕೆಗಳು ಮರುದಿನದಿಂದ ಪ್ರತಿ ದಿನ ರಾತ್ರಿ 9.30ರಿಂದ  ಪ್ರಸಾರವಾದರೆ, ದಿನವೂ ಏನಾಗುತ್ತಿದೆ ಎನ್ನುವುದನ್ನು ಜಿಯೋ ಸಿನಿಮಾದ ಮೂಲಕ ನೋಡಬಹುದಾಗಿದೆ. 

BIGGBOSS ಮನೆಯಲ್ಲಿ 73 ಕ್ಯಾಮೆರಾ: 24 ಗಂಟೆಗಳ ಕ್ಷಣ ಕ್ಷಣದ ದೃಶ್ಯ ವಿಕ್ಷಣೆಗೆ ಈ ಬಾರಿ ಅವಕಾಶ!

ಇದರ ಮಧ್ಯೆಯೇ ಇಂದು ಬೆಳಿಗಿನ ಜಾವ ಕಲರ್ಸ್​ ಕನ್ನಡ ವಾಹಿನಿ ಹೊಸದೊಂದು ಪ್ರೋಮೋ ಅನ್ನು ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದೆ. ಟ್ವಿಸ್ಟ್ ಟ್ವಿಸ್ಟ್ & ಟ್ವಿಸ್ಟ್; ಯಾರು ಒಳಗೆ, ಯಾರು ಹೊರಗೆ? ಎನ್ನುವ ಶೀರ್ಷಿಕೆಯಲ್ಲಿ ಈ ಪ್ರೊಮೋ ಕಾಣಿಸಿಕೊಂಡಿದೆ. ಒಬ್ಬ ರಾವಣ, ಹತ್ತು ತಲೆ, ಒಂದು ಷೋ- 10 ಸೀಸನ್​ ಎನ್ನುವ ಮೂಲಕ ಸುದೀಪ್​ ಹಿನ್ನೆಲೆ ಧ್ವನಿ ನೀಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಇದೇ  ಮೊದಲ ಬಾರಿಗೆ ಮನೆಯೊಳಗೆ ಹೋಗುವ ಸ್ಪರ್ಧಿಗಳನ್ನು ಪ್ರೇಕ್ಷಕ ಮಹಾಪ್ರಭುಗಳು ಡಿಸೈಡ್​ ಮಾಡುತ್ತಾರೆ ಎನ್ನುವ ದನಿ ಕೇಳಿಸುತ್ತದೆ. ನಂತರ ಎಂಟ್ರಿ ಕೊಡುವ ಸುದೀಪ್​ ಅವರು, 10ನೇ ಸೀಸನ್​ನ ಆಟ ಈ ವೇದಿಕೆಯಿಂದ ಶುರುವಾಗುತ್ತದೆ ಎಂದಿದ್ದಾರೆ. ನಟ ಕೋಮಲ್‌,  ತ್ರಿವಿಕ್ರಮ್‌, ರ್ಯಾಪರ್‌ ಊರ್ಮಿಳಾ ಇಶಾನಿ, ಭೂಮಿಕಾ ಬಸವರಾಜ್,  ಭಾಗ್ಯಶ್ರೀ,  ಅಭಿನವ್‌ ವಿಶ್ವನಾಥನ್‌, ಟ್ಯಾಟೂ ಆರ್ಟಿಸ್ಟ್‌ ನೀತು ವನಜಾಕ್ಷಿ, ಸ್ನೇಕ್‌ ಶ್ಯಾಮ್‌,  ರಕ್ಷಕ್‌, ಪತ್ರಕರ್ತ ಗೌರೀಶ್‌ ಅಕ್ಕಿ,  ವಿನಯ್‌ ಗೌಡ, ನಮ್ರತಾ ಗೌಡ ಈ ಸಲದ ಬಿಗ್‌ಬಾಸ್‌ನ ಫ್ರೆಶ್‌ ಸ್ಪರ್ಧಿಗಳು ಎಂದು ಹೇಳಲಾಗುತ್ತಿದ್ದರೂ ಕುತೂಹಲಕ್ಕೆ ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ. 

ಅಂದಹಾಗೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಿನದ ಎಪಿಸೋಡಿನ ಹೊರತಾಗಿಯೂ ಹಲವು ವೈವಿಧ್ಯದ ಎಕ್ಸ್​ಕ್ಲೂಸಿವ್​ ಮತ್ತು ಅನ್‌ಸೀನ್ ಮನರಂಜನಾ ಕಂಟೆಂಟ್‌ಗಳು JioCinema ದಲ್ಲಿ ಇರಲಿವೆ ಎಂದು ತಂಡ ಹೇಳಿದೆ. 'ಬಿಗ್ ನ್ಯೂಸ್', 'ಅನ್‌ಸೀನ್ ಕಥೆಗಳು', 'JioCinema ಫನ್ ಫೊಡೇ', 'ಡೀಪ್ ಆಗಿ ನೋಡಿ...' ಹೀಗೆ ಹಲವಾರು ರೂಪದಲ್ಲಿ, ಮನೆಯೊಳಗಿನ ಕುತೂಹಲಕಾರಿ ಘಟನಾವಳಿಗಳನ್ನು ವೀಕ್ಷಕರಿಗೆ ತಲುಪಿಸಲು ವೇದಿಕೆ ಸಜ್ಜುಗೊಂಡಿದೆ. ಮನೆಯೊಳಗೆ ನಡೆಯುವ ನಾಟಕೀಯ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ 'ಲೈವ್ ಶಾರ್ಟ್ ಇನ್ನೊಂದು ವಿಶೇಷ ಆಕರ್ಷಣೆಯಾಗಿದೆ ಎಂದು ಬಿಗ್​ಬಾಸ್​ ತಂಡ ಹೇಳಿದೆ. ಹದಿನಾರು ಸ್ಪರ್ಧಿಗಳು ಭಾಗವಹಿಸಲಿರುವ ಈ ಸೀಸನ್ ನ ಮನೆಯನ್ನು ಕಾಯಲು 73 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮನೆಯೊಳಗಿನ ಕ್ಷಣ ಕ್ಷಣದ ಸನ್ನಿವೇಶಗಳನ್ನು ವೀಕ್ಷಿಸಬಹುದಾಗಿದೆ. 

BIGGBOSS ಮನೆಗೆ ಹೋಗ್ತಿದ್ದಾರಾ 'ಜೊತೆಜೊತೆಯಲಿ' ಅನು ಸಿರಿಮನೆ? ನಟಿ ಹೇಳಿದ್ದೇನು?

 

Follow Us:
Download App:
  • android
  • ios