ಕಲರ್ಸ್ ಕನ್ನಡದ 'ಕನ್ನಡತಿ' ಧಾರಾವಾಹಿ ಎಲ್ಲರ ಮನ ಗೆಲ್ಲುತ್ತಿದೆ. ಇದೀಗ ಒಂದು ಸಂದಿಗ್ಧದ ತಿರುವಿನಲ್ಲಿ ಕಥೆ ಬಂದು ನಿಂತಿದೆ. ಕಥೆಯ ಮೂರು ಎಳೆಗಳೂ ಒಂದು ತಿರುವಿಗೆ ಬಂದು ನಿಂತಿವೆ. ತಾತ್ಕಾಲಿಕವಾಗಿ ರತ್ನಮಾಲಾ ಕಂಪೆನಿಯ ಎಂಡಿ ಸ್ಥಾನ ಅಲಂಕರಿಸಿರುವ ಸಾನಿಯಾ ಈವರೆಗೆ ಅಗ್ರಿಮೆಂಟ್‌ ಅನ್ನೇ ಓದಿಲ್ಲ. ಅತ್ತೆ ರತ್ನಮಾಲಾ ಅಗ್ನಿಮೆಂಟ್ ಫೈಲ್ ಕೊಟ್ಟರೂ ಧಿಮಾಕಿನಿಂದ ಓದದೇ ನಿರ್ಲಕ್ಷಿಸಿದ್ದಾಳೆ. ಆದರೆ ಅವಳಿಗೀಗ ತನ್ನ ಮೂರ್ಖತನದ ಅರಿವಾಗಿದೆ. ಅದಕ್ಕೋಸ್ಕರ ತೀವ್ರವಾಗಿ ಆ ಅಗ್ರಿಮೆಂಟ್‌ ಫೈಲ್‌ಗೆ ಹುಡುಕಾಟ ನಡೆಸಿದ್ದಾಳೆ. ಆದರೆ ಸಾನಿಯಾಗಿಂತ ಎಷ್ಟೋ ಜಾಣೆಯಾಗಿರುವ ರತ್ನಮಾಲಾ ಫೈಲ್‌ ಅನ್ನು ಸುರಕ್ಷಿತ ಜಾಗದಲ್ಲಿ ಇಟ್ಟಿರೋ ಹಾಗಿದೆ. ಸಾನಿಯಾ ಸದ್ಯ ಈ ಫೈಲ್‌ ಕಾರಣಕ್ಕೆ ತನ್ನ ಗಂಡನಿಂದಲೂ ಛೀಮಾರಿ ಹಾಕಿಸಿಕೊಂಡಿದ್ದಾಳೆ. ತನಗೆ ಇಷ್ಟೆಲ್ಲ ಸ್ಥಾನಮಾನ ಕೊಟ್ಟಿರುವ ಅತ್ತೆ ಬಗ್ಗೆ ಆಕೆಗೆ ಕಿಂಚಿತ್‌ ಮಮಕಾರವೂ ಇಲ್ಲ. ಬದಲಿಗೆ ಅತ್ತೆಯ ಕೆಡುಕನ್ನೇ ಆಶಿಸುತ್ತಿದ್ದಾಳೆ. 

ಮತ್ತೊಂದು ಕಡೆ ವರೂಧಿನಿಗೆ ವಿಚಿತ್ರ ಆಸೆಯಾಗಿದೆ. ಸಾಯುವ ಮೊದಲು ತಾನು ಮದುಮಗಳ ಹಾಗೆ ಅಲಂಕರಿಸಿಕೊಳ್ಳಬೇಕು ಅನ್ನುವ ಆಸೆ. ಅದಕ್ಕಾಗಿ ಸೀರೆ ಉಡಿಸಲು ಜೈಲಿನಲ್ಲಿ ಸಹಖೈದಿಯಾಗಿದ್ದ ಮಹಿಳೆಗೆ ಹೇಳುತ್ತಾಳೆ. ಆಕೆ ಸೇಫ್ಟಿ ಪಿನ್‌ ತರಲು ಕೆಳಗೆ ಬಂದಾಗ ಆಕೆಗೆ ಡಾಕ್ಟರ್ ನಂಬರ್‌ ಸಿಕ್ಕಿದೆ. ವರೂಧಿನಿಯ ಹುಚ್ಚು ವರ್ತನೆಯನ್ನು ಅವರಿಗೆ ಹೇಳಿ ಅವಳನ್ನು ಸಾವಿಂದ ಬಚಾವ್ ಮಾಡುವ ಜೊತೆಗೆ ತಾನೂ ನೆಮ್ಮದಿಯಿಂದಿರಲು ಆಕೆ ನಿರ್ಧರಿಸಿದ್ದಾಳೆ. ಆದರೆ ಈಕೆಯ ಫೋನ್‌ಅನ್ನು ಈಗಾಗಲೇ ವರೂಧಿನಿ ಒಡೆದು ಹಾಕಿದ್ದಾಳೆ. ಹೀಗಾಗಿ ಇಲ್ಲೀವರೆಗೆ ಸ್ವಿಚ್ ಆಫ್‌ ಆಗಿದ್ದ ವರೂಧಿನಿ ಫೋನ್ ಆನ್‌ ಮಾಡಿ ಡಾಕ್ಟರ್‌ಗೆ ಕಾಲ್‌ ಮಾಡಲು ನಿರ್ಧರಿಸಿದ್ದಾಳೆ. ಇದರಿಂದ ಏನೋ ಒಂದು ಅವಾಂತರ ಆಗೋದಂತೂ ಗ್ಯಾರೆಂಟಿ. 

ವಾವ್..! ಹಾಟ್ ಹೋಳಿ ಡ್ರೆಸ್‌ನಲ್ಲಿ ಮಲೈಕಾ ಕೂಲ್ ಕೂಲ್ ...

ಇನ್ನೊಂದು ಕಡೆ ಅಮ್ಮಮ್ಮ ಐಸಿಯುನಲ್ಲಿದ್ದರೆ ಹರ್ಷ ಅವರ ಕೊನೆಯ ಬೇಡಿಕೆಯನ್ನು ಈಡೇರಿಸುವ ಯೋಚನೆ ಮಾಡುತ್ತಿದ್ದಾನೆ. ಒಂದಿಷ್ಟು ಘಟನೆಗಳ ಬಳಿಕ ಹರ್ಷ ಭುವಿಯ ನಡುವಿನ ಸಂಬಂಧ ಗಟ್ಟಿಯಾದಂತಿದೆ. ಇದೀಗ ಇಬ್ಬರೂ ಆಸ್ಪತ್ರೆಯಲ್ಲಿದ್ದಾರೆ. ಅಮ್ಮಮ್ಮನ ಬಗೆಗಿನ ಪ್ರೀತಿ, ಕಾಳಜಿ, ಸದ್ಯದ ಸ್ಥಿತಿಯ ಬಗ್ಗೆ ಇರುವ ಭಯ ಇಬ್ಬರನ್ನೂ ಒಂದು ಮಾಡುತ್ತಿದೆ. ಇಂಥಾ ಟೈಮ್‌ನಲ್ಲೇ ಹರ್ಷನಿಗೆ ಒಂದು ಯೋಚನೆ ಬಂದಿದೆ. ಅದು ತನ್ನ ಮದುವೆ ಯೋಚನೆ. ಅದೇ ಅಮ್ಮಮ್ಮನ ಕೊನೆಯ ಆಸೆ ಕೂಡ. ಈಗ ಹರ್ಷ ಮದುವೆಯ ವಿಚಾರವನ್ನು ಭುವಿಯ ಮುಂದಿಟ್ಟಿದ್ದಾನೆ. ಆಕೆ ಅದಕ್ಕೆ ಇಲ್ಲ ಅಂದಿಲ್ಲ. ಜೊತೆಗೆ ಇವರಿಬ್ಬರ ನಡುವೆ ವರೂಧಿನಿಯನ್ನು ಎಳೆದು ತಂದಿಲ್ಲ. ಆದರೆ ಮಹಾ ಸಂಕೋಚವೊಂದು ಆಕೆಯನ್ನು ಆವರಿಸಿದಂತಿದೆ. ಇಷ್ಟು ತರಾತುರಿಯಲ್ಲಿ ಮದುವೆ ವಿಚಾರ ಚರ್ಚಿಸೋದು ಹೇಗೆ ಅಂತ ಸಂಕೋಚದಲ್ಲೇ ಕೇಳಿದ್ದಾಳೆ.

ಫ್ಯಾಮಿಲಿ ಜೊತೆ ಸನ್ನಿ ಲಿಯೋನ್ ಹೋಳಿ..! ಇಲ್ನೋಡಿ ಫೋಟೋಸ್ ...

 ಅಲ್ಲಿಗೆ ಹರ್ಷನ ಪ್ರಸ್ತಾವಕ್ಕೆ ಭುವಿ ಗ್ರೀನ್‌ ಸಿಗ್ನಲ್‌ ಕೊಟ್ಟಿರೋದು ಸತ್ಯ. ಇವರಿಬ್ಬರ ನಡುವಿನ ನವಿರು ಪ್ರೇಮವನ್ನು ವೀಕ್ಷಕರೂ ಎನ್‌ಜಾಯ್‌ ಮಾಡುತ್ತಿದ್ದಾರೆ. ರೌಡಿಗಳಿಂದ ಹರ್ಷ ಭುವಿಯನ್ನು ರಕ್ಷಿಸುವ, ಅವರಿಬ್ಬರು ಇನ್ನಷ್ಟು ಹತ್ತಿರವಾಗಿರುವ ಎಪಿಸೋಡ್ ಅನ್ನು ಅತ್ಯಧಿಕ ಜನ ವೀಕ್ಷಿಸಿದ್ದಾರೆ. ಈಗಲೂ ಆ ಸೀನ್‌ ನೋಡುವವರಿದ್ದಾರೆ. ಇದೆಲ್ಲ ಆದರೆ ಮೇಲೆ ಭುವಿಗೆ ಹರ್ಷ ಬಗೆಗಿನ ಪ್ರೀತಿ ಕೊಂಚ ಹೆಚ್ಚಾದಂತಿದೆ. ಆಕೆ ಅದನ್ನು ಎಲ್ಲೂ ತೋರಿಸಿಕೊಳ್ಳುತ್ತಿಲ್ಲ. ಹಾಗಂತ ಮದುವೆಗೂ ಪೂರ್ತಿ ಸಹಮತ ಇದ್ದ ಹಾಗಿಲ್ಲ. ತಂಗಿ ಬಿಂದು ಮದುವೆಯ ನಂತರವೇ ತನ್ನ ಮದುವೆ ಅಂತ ಹೇಳುವ ಸಾಧ್ಯತೆ ಇದೆ. ಈ ನಡುವೆ ಸಾನಿಯಾನೂ ಭುವಿಯನ್ನು ಸತಾಯಿಸಲು ರೆಡಿ ಇರುವ ಹಾಗಿದೆ. ಇಂಥ ಸಂದಿಗ್ಧದಲ್ಲಿ ಕನ್ನಡತಿಯ ಕಂಕಣ ಬಲವೂ ಕೂಡಿಬಂದಂತಿದೆ. ಶುಭಸ್ಯ ಶೀಘ್ರಂ ಅಂತಿದ್ದಾರೆ ಕನ್ನಡತಿಯ ಅಭಿಮಾನಿಗಳು. 

ರಶ್ಮಿಕಾ ಮಂದಣ್ಣ ಕೈ ಸೇರಿತು 'ಆ' ಉಂಗುರ; ಕೊಟ್ಟೋರು ಯಾರೋ? ...