15 ಜನರ ನಡುವೆ ನಡೆದ ಮದುವೆ, ಎಲ್ಲಾ ಕೆಲಸ ನಮ್ಮದೆ: ಡ್ಯಾನಿಶ್ ಸೇಠ್
ಲಾಕ್‌ಡೌನ್ ವೇಳೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡ್ಯಾನಿಶ್ ಸೇಠ್ ಮದುವೆ ಮತ್ತು ಸಂಗಾತಿ ಬಗ್ಗೆ ಮಾತನಾಡಿದ್ದಾರೆ.
ಎಲ್ಲಿ ನೋಡಿದರೂ ಡ್ಯಾನಿಶ್ ಸೇಠ್ ಕಾಮಿಡಿ ವಿಡಿಯೋಗಳೇ ವೈರಲ್ ಆಗುತ್ತಿದ್ದ ಸಮಯದಲ್ಲಿ ಡ್ಯಾನಿಶ್ ತಮ್ಮ ಬಾಳ ಸಂಗಾತಿ ಪ್ರಪೋಸ್ ಮಾಡಿದ ಫೋಟೋ ಹಂಚಿಕೊಂಡರು. ವಾ! ಫೈನಲಿ ಡ್ಯಾನಿ ಲೈಫ್‌ಗೆ ಬ್ಯೂಟಿಫುಲ್ ವೈಫ್ ಬಂದರು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಗೆಳತಿಯೊಂದಿಗೆ ಹೊಸ ಬಾಳಿಗೆ ಕಾಲಿಟ್ಟ ಡ್ಯಾನಿಶ್, ಶುಭಾಶಯಗಳ ಮಹಾಪೂರ
ಜೂನ್ 10ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡ್ಯಾನಿಶ್ ಸೇಠ್ ಮತ್ತು ಅನ್ಯಾ, ಜೂನ್ 9ರಂದೇ ಮದುವೆ ನೋಂದಣಿ ಮಾಡಿಸಿದ್ದರು. ಇಬ್ಬರು ಮದುವೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಡ್ಯಾನಿಶ್ ಫೋಟೋಗೆ ನಾನ್ ಸ್ಟಾಪ್ ಮೆಸೇಜ್ ಹಾಗೂ ಫೋನ್ ಕಾಲ್ ಬರುತ್ತಿದೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಡ್ಯಾನಿಶ್ ಮದುವೆ ಬಗ್ಗೆ ಮಾತನಾಡಿದ್ದಾರೆ.
'ಅನ್ಯಾ ಮತ್ತು ನನ್ನನ್ನು ಸೇರಿಸಿ ನಮ್ಮ ಮದುವೆಯಲ್ಲಿ ಒಟ್ಟು 15 ಮಂದಿ ಮಾತ್ರ ಭಾಗಿಯಾಗಿದ್ದರು. ಮದುವೆ ಪ್ಲಾನ್ ಮಾಡುವುದಕ್ಕೆ ಅನ್ಯಾ ತಂದೆ ಸಹಾಯ ಮಾಡಿದ್ದರು. ನನ್ನ ಸ್ನೇಹಿತ ರೋಹಿತ್ ನಮ್ಮ ಮದುವೆ ಫೋಟೋಗಳನ್ನು ಸೆರೆ ಹಿಡಿದ. ಹೂವಿನ ಡೆಕೋರೇಷನ್‌ನಿಂದ ಎಲ್ಲವೂ ನಾವೇ ಮಾಡಿಕೊಂಡೆವು. ಸಾಕಷ್ಟು ಜನರ ನಮಗೆ ಮೆಸೇಜ್ ಮಾಡುತ್ತಿದ್ದಾರೆ ಒಬ್ಬರಿಗೆ ರಿಪ್ಲೈ ಮಾಡುವಷ್ಟರಲ್ಲಿ ಮತ್ತೊಬ್ಬರ ಮೆಸೇಜ್ ಬರುತ್ತದೆ. ನಾವಿಬ್ಬರೂ ವೈಯಕ್ತಿಕ ಜೀವನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ ಆದರೆ ಮದುವೆ ಫೋಟೋ ಪೋಸ್ಟ್ ಮಾಡಿದೆವು ಅಷ್ಟೆ. ಮದುವೆಗೆ ಜೂನ್ 10 ನಿಗಧಿ ಮಾಡಲಾಗಿತ್ತು. ಲಾಕ್‌ಡೌನ್ ಇರಲಿ ಇಲ್ಲದಿರಲಿ ನಾವು ಸರಳ ಮದುವೆ ಆಗುವುದಕ್ಕೆ ನಿರ್ಧಾರ ಮಾಡಿದ್ದೆವು' ಎಂದು ಡ್ಯಾನಿಶ್ ಸೇಠ್ ಮಾತನಾಡಿದ್ದಾರೆ.