ಸ್ನೇಹಿತೆಯ ನಂಬರ್‌ನ ವಿಭಿನ್ನವಾಗಿ ಸೇವ್ ಮಾಡಿಕೊಂಡ ಕಿಶನ್. ಯಾಕೆ ನಮ್ರತಾ ಆ ಪದವನ್ನು ಪದೇ ಪದೇ ಬಳಸುತ್ತಾರೆ?

ಕನ್ನಡ ಕಿರುತೆರೆ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಕಿಶನ್ ಮತ್ತು ನಮ್ರತಾ ಗೌಡ ಸ್ನೇಹಿತರಾಗಿ ಪರಿಚಯ ಆಗಿದ್ದು. ಅದಾದ ಮೇಲೆ ಇಬ್ಬರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು, ಆದರೆ ಬೇರೆ ಬೇರೆ ಸೀಸನ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಸೀಸನ್ 10ರಿಂದ ನಮ್ರತಾ ಗೌಡ ಹೊರ ಬಂದ ಮೇಲೆ ಸಣ್ಣ ಬ್ರೇಕ್ ತೆಗೆದುಕೊಂಡು ಯಾವ ಪ್ರಾಜೆಕ್ಟ್‌ಗೂ ಸಹಿ ಮಾಡಿಲ್ಲ, ಬದಲಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ರೀಲ್ಸ್‌, ಶಾರ್ಟ್ಸ್‌ ಆಂಡ್ ಯೂಟ್ಯೂಬ್ ವ್ಲಾಗ್‌ಗಳನ್ನು ಕ್ರಿಯೇಟ್ ಮಾಡುತ್ತಿದ್ದಾರೆ.

ಕೆಲವು ದಿನಗಳಿಂದ ಕಿಶನ್ ಮತ್ತು ನಮ್ರತಾ ಗೌಡ ಟ್ರೆಂಡ್‌ನಲ್ಲಿ ಇರುವ ಹಾಡುಗಳಿಗೆ ಡ್ಯಾನ್ಸ್‌ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಕೆಲವೊಂದು ರೆಟ್ರೋ ಲುಕ್ ಆಗಿರುತ್ತದೆ ಕೆಲವು ಹಾಟ್ ವಿಡಿಯೋ ಆಗಿರುತ್ತದೆ ಆದರೆ ಇದಕ್ಕೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಮ್ರತಾ ಅವಕಾಶವಿಲ್ಲದೆ ಈ ರೀತಿ ರೀಲ್ಸ್ ಮಾಡಲು ಶುರು ಮಾಡಿದ್ದಾರೆ, ನಮ್ರತಾ ಮತ್ತು ಕಿಶನ್ ಲವ್ ಮಾಡುತ್ತಿದ್ದಾರೆ ಅಥವಾ ನಮತ್ರಾ ಈ ರೀತಿ ದುಡಿಮೆ ದಾರಿ ಹಿಡಿದ್ದಾರೆ ಎಂದು. ಟ್ರೋಲ್‌ ಪೇಜ್‌ಗಳಲ್ಲಿ ಇರುವ ಗಾಸಿಪ್‌ಗಳಿಗೆ ನಮ್ರತಾ ಉತ್ತರ ಕೊಟ್ಟಿದ್ದಾರೆ. ಇದೆಲ್ಲಾ ಕೇವಲ ಮನೋರಂಜನೆ ದೃಷ್ಟಿ ಎಂದಿದ್ದಾರೆ.

ಬಿಗ್ ಬಾಸ್ ಕಾರ್ತಿಕ್ ತಂಗಿ ಮಗನ ಫೋಟೋ ವೈರಲ್; ಮೇಕಪ್ ಹಾಕದಿದ್ದರೂ ಎಷ್ಟು ಲಕ್ಷಣ ಎಂದ ನೆಟ್ಟಿಗರು!

ನಮ್ರತಾ ನಂಬರ್:

ಖಾಸಗಿ ರೇಡಿಯೋ ಚಾನೆಲ್‌ನಲ್ಲಿ ನಡೆದ ಸಂದರ್ಶನದಲ್ಲಿ ಕಿಶನ್ ಮತ್ತು ನಮತ್ರಾ ತಮ್ಮ ಫ್ರೆಂಡ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಏನೇ ಆದರೂ ಅಥವಾ ಏನೇ ನಡೆದರೂ ನಮ್ರತಾ ಮಾತಿಗೆ ಮುಂಚೆ What the F*** ಪದವನ್ನು ಬಳಸುತ್ತಾರೆ ಹೀಗಾಗಿ ನಾನು ಆಕೆ ನಂಬರ್‌ನ ನಮ್ರತಾ ****** ಅಂತ ಸೇವ್ ಮಾಡಿಕೊಂಡಿದ್ದೀನಿ ಎಂದು ಕಿಶನ್ ಹೇಳುತ್ತಾರೆ. ಅಯ್ಯೋ ನಮ್ಮ ಸ್ನೇಹದ ಬಗ್ಗೆ ಮಾತನಾಡಿ ಅಂದ್ರೆ ಮಾನ ಮರ್ಯಾದೆ ತೆಗೆಯುತ್ತಿದ್ದೀರಿ ಎಂದು ನಮ್ರತಾ ಕೋಪ ಮಾಡಿಕೊಳ್ಳುತ್ತಾರೆ. ಮನೆ ಪಕ್ಕದಲ್ಲೇ ಇದ್ದರೂ ನಮ್ರತಾ ನನಗೆ ಕರೆ ಮಾಡುವುದಿಲ್ಲ, ತಿಂಡಿ ತಿನ್ನಲು ಸುತ್ತಾಡಲು ಬೇರೆ ಬೇರೆ ಸ್ನೇಹಿತರು ಇದ್ದಾರೆ ನಾನು ಲೆಕ್ಕನೇ ಇಲ್ಲ ಎಂದು ಕಿಶನ್ ದೂರು ಹೇಳುತ್ತಿದ್ದರು.