ಬೀಪ್ ಪದಗಳಿಂದ ಬಿಗ್ ಬಾಸ್ ನಿಂದಿಸಿದ ಅರವಿಂದ್-ದಿವ್ಯಾ ಫ್ಯಾನ್ಸ್‌ಗೆ ಉತ್ತರ ಕೊಟ್ಟ ಗುಂಡ್ಕಲ್!
ತಮ್ಮ ನೆಚ್ಚಿನ ಸ್ಟಾರ್‌ಗಳಿಗೆ ಜನಪ್ರಿಯತೆ ತಂದುಕೊಟ್ಟ ವಾಹಿನಿ ಹಾಗೂ ಶೋ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳಿಗೆ ಉತ್ತರ ಕೊಟ್ಟರು ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್.
ಬಿಗ್‌ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫಿನಾಲೆಯ ಇಬ್ಬರೂ ಸ್ಪರ್ಧಿಗಳು 40 ಲಕ್ಷಕ್ಕೂ ಹೆಚ್ಚು ವೋಟ್‌ಗಳನ್ನು ಪಡೆದಿದ್ದರು. ಅಲ್ಲದೇ ಇಬ್ಬರ ನಡುವೆ ಕೇವಲ 1 ಲಕ್ಷ ಮತಗಳ ವ್ಯತ್ಯಾಸ ಕಂಡು ಬಂದಿರುವುದು. ಸೀಸನ್ 8ರ ವಿಜೇತ ಮಂಜು ಪಾವಗಡ ಹಾಗೂ ಎರಡನೇ ಸ್ಥಾನವನ್ನು ಕೆಪಿ ಅರವಿಂದ್ ಪಡೆದುಕೊಂಡಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಫಿನಾಲೆ ವೀಕ್‌ನಲ್ಲಿದ್ದರೂ ಫಿನಾಲೆ ತಲುಪಿಲ್ಲ ಎಂಬ ಕಾರಣಕ್ಕೆ ಅವರ ಫ್ಯಾನ್ ಪೇಜ್‌ಗಳು ಶೋ ಅನ್ನೇ ನಿಂದಿಸುತ್ತಿದ್ದಾರೆ. ಇದರ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾತನಾಡಿದ್ದಾರೆ.
ದಿವ್ಯಾ- ಅರವಿಂದ್ ಒಂದೇ ಬಣ್ಣದ ಬಟ್ಟೆ, ಡಿಸೈನ್ ನೋಡಿ ನೆಟ್ಟಿಗರು ಶಾಕ್?'ತುಂಬಾ ಇನ್‌ಟೆನ್ಸ್ ಫೈಟ್ ಇರುವಾಗ ವೋಟ್‌ಗಳ ಸಂಖ್ಯೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಬರುವ ವೋಟ್‌ಗಳಿಗಿಂತ ಈ ಸಲ ಬಂದಿರುವ ವೋಟ್‌ಗಳು ಡಬಲ್ ಆಗಿದೆ. ಈ ಸಲ ಸ್ಪರ್ಧೆ ಅಷ್ಟು ತೀವ್ರವಾಗಿತ್ತು. ಒನ್ ಸೈಡೆಡ್ ಇರುವಾಗ ಈ ರೀತಿ ಆಗುವುದಿಲ್ಲ. ಇದರ ಬಗ್ಗೆ ನಮಗೆ ಖುಷಿಯಿದೆ. ಯಾಕೆಂದರೆ ಅಷ್ಟು ಜನರು ಈ ರಿಯಾಲಿಟಿ ಶೋ ಬಗ್ಗೆ ಆಸಕ್ತಿ ತೋರಿಸಿದ್ದಾರೆ,' ಎಂದು ಪರಮೇಶ್ವರ್ ಹೇಳಿದ್ದಾರೆ.
ದಿವ್ಯಾ ಉರುಡುಗ- ಅರವಿಂದ್ ಫ್ಯಾನ್ಸ್‌ಗೆ ಉತ್ತರ:
'ವೈಷ್ಣವಿ ಹಾಗೂ ದಿವ್ಯಾ ಅವರಿಗೆ ಒಂದಿಷ್ಟು ವೋಟ್‌ಗಳ ವ್ಯತ್ಯಾಸವಿತ್ತು.ಅದನ್ನು ನಾವು ಬದಲಾಯಿಸುವುದಕ್ಕೆ ಆಗಲ್ಲ. ವೈಷ್ಣವಿ ಅವರನ್ನು ಉಳಿಸಿಕೊಂಡರೆ, ನಿಮ್ಮ ಸೀರಿಯಲ್ ಆರ್ಟಿಸ್ಟ್ ಅಲ್ವಾ? ಎಂದು ಪ್ರಶ್ನಿಸುತ್ತಾರೆ. ಇಲ್ಲ ಅಂದ್ರೆ ಸ್ಕ್ರಿಪ್ಟ್ ಶೋ ಎನ್ನುತ್ತಾರೆ. ಮಂಜು ಅವರಿಗೆ 45 ಲಕ್ಷ ವೋಟ್ ಬಂದಿವೆ, ಅರವಿಂದ್ ಅವರಿಗೆ 43 ಲಕ್ಷ ವೋಟ್ಸ್ ಬಂದಿವೆ. ಯಾರೇ ಗೆದ್ದರೂ ಉಳಿದವರು ನನ್ನನ್ನು ಬೈಯ್ಯತ್ತಾರೆ. ಇಂಡಿಯಾವನ್ನು ಪ್ರತಿನಿಧಿಸಿರುವ ವ್ಯಕ್ತಿ, ಚಾಂಪಿಯನ್ ಎಷ್ಟು ಸಾಧನೆ ಮಾಡಿದ್ದಾರೆ ಎಂದು ಜನರಿಗೆ ಗೊತ್ತಾಗಿದ್ದು ಬಿಗ್ ಬಾಸ್‌ನಿಂದ. ಇಬ್ಬರೂ ನನಗೆ ಥ್ಯಾಂಕ್ಸ್ ಹೇಳಿಲ್ಲ. ಅರವಿಂದ್ ಹಾಗೂ ದಿವ್ಯಾ ಫ್ಯಾನ್ಸ್‌ಗೆ ನನ್ನದೊಂದು ಪ್ರಶ್ನೆ ಇದೆ. ಅವರಿಬ್ಬರೂ ಭೇಟಿ ಆಗಿದ್ದು ನಮ್ಮ ಶೋನಲ್ಲಿ, ದಿವ್ಯಾ ಅವರನ್ನು ಮಾತನಾಡಿಸಿ ಕೂರಿಸಿ ಕರೆದುಕೊಂಡು ಬಂದಿದ್ದು ನಾನು, ಅರವಿಂದ್ ಅವರನ್ನು ಕರೆದುಕೊಂಡು ಬಂದಿದ್ದು ನಾನು. ಇವತ್ತಿಗೆ ಇಷ್ಟು ಬೈಯುತ್ತಿದ್ದಾರೆ ಅಲ್ವಾ? ಕಾಮೆಂಟ್ ಮಾಡಿ ಅವರು ಯಾರೂ ಅರವಿಂದ್ ಅವರಿಗೆ ಏನೂ ಮಾಡಿಲ್ಲ. ಅವರಿಬ್ಬರೂ ಒಂದಾಗಲು ಕಾರಣ ಆಗಿದ್ದ ನನ್ನನ್ನ ಅವರ ಫ್ಯಾನ್ಸ್ ಬಾಯಿಗೆ ಬಂದ್ಹಾಗೆ ಬೈಯುತ್ತಾರೆ,' ಎಂದು ಮಾತನಾಡಿದ್ದಾರೆ.