Asianet Suvarna News Asianet Suvarna News

113 ದಿನವಿದ್ದ 'ಲಕ್ಕಿ ಸ್ಟಾರ್; ಶಮಂತ್‌ಗೆ ಬಿಗ್‌ಬಾಸ್ ಫಿನಾಲೆ ವೀಕ್ ಮಿಸ್!

ಭಾನುವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ಬ್ರೋ ಗೌಡ ಶಮಂತ್.  ಹಾಡಲು ಅವಕಾಶ ಕೊಟ್ಟ ಸುದೀಪ್. 

Colors Kannada BBK8 Shamanth Bro gowda eliminated vcs
Author
Bangalore, First Published Aug 2, 2021, 12:07 PM IST
  • Facebook
  • Twitter
  • Whatsapp

ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಉಳಿದಿದೆ. ಶನಿವಾರದ ಎಲಿಮಿನೇಷನ್‌ನಿಂದ ಶುಭಾ ಪೂಂಜಾ ಹೊರ ಬಂದಿದ್ದಾರೆ, ಭಾನುವಾರ ಶಮಂತ್ ಗೌಡ ಹೊರ ಬಂದಿದ್ದಾರೆ. ಫಿನಾಲೆ ವೀಕ್ ತಲುಪುತ್ತಿರುವ 5 ಸದಸ್ಯರಲ್ಲಿ ಒಬ್ಬರಿಗೆ ಮಿಡ್‌ ವೀಕ್ ಎಲಿಮಿನೇಷನ್‌ ಮಾಡಲಾಗುತ್ತದೆ. 

ಬಿಗ್ ಬಾಸ್‌ ಮನೆಯಲ್ಲಿ ದೆವ್ವದ ಕಾಟ: ಕಪ್ಪು ನೆರಳು ನೋಡಿ ಹೆದರಿದ ಶಮಂತ್?

'ಇಷ್ಟು ದಿನ ನನಗೆ ವೋಟ್ ಹಾಕಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್. ಈ ವಾರ ವೋಟ್ ಹಾಕಿದವರಿಗೆ ಸಾರಿ. ಇಷ್ಟು ದಿನ ಮನೆಯಲ್ಲಿ ಉಳಿದುಕೊಳ್ಳಲು, ಇಂದು ಹೊರ ಬರಲು ನಾನೇ ಕಾರಣ. ಪ್ರಶಾಂತ್ ಸಂಬರಗಿ ಜೊತೆ ಹೆಚ್ಚಿನ ಸಮಯ ಕಳೆದಿರುವುದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ. ಬಿಗ್ ಬಾಸ್ ಜರ್ನಿ ಸೂಪರ್ ಆಗಿದೆ. ಇಷ್ಟು ದಿನ ಹೊರಗಡೆ ಮೂರು ನಾಲ್ಕು ದಿನಕ್ಕೇ ಒಂದು ಹಾಡು ಬರೆಯುತ್ತಿದ್ದೆ. ಆದರೀಗ ದಿನಕ್ಕೊಂದು ಕವನ ಬರೆಯುತ್ತಿರುವ. ಮಾಡುವುದಕ್ಕೆ ತುಂಬಾ ಕೆಲಸ ಇವೆ.ಇನ್ನೂ ಸಾಧನೆ ಮಾಡಬೇಕು ಸರ್,' ಎಂದು ಶಮಂತ್ ವೇದಿಕೆಯ ಮೇಲೆ ಕಿಚ್ಚನೊಂದಿಗೆ ಮಾತುಕತೆ ನಡೆಸಿದ್ದಾರೆ.

Colors Kannada BBK8 Shamanth Bro gowda eliminated vcs

ಬಿಗ್‌ಬಾಸ್ ಸೀಸನ್‌ನಲ್ಲಿ ಬ್ಯಾಕ್ ಟು ಬ್ಯಾಕ್ ವೀಕ್ ಕ್ಯಾಪ್ಟನ್ ಆದ ಏಕೈಕ ಸ್ಪರ್ಧಿ ಶಮಂತ್.  ಇಷ್ಟು ದಿನಗಳ ಕಾಲ ನಾಮಿನೇಟ್ ಆಗಿದ್ದರೂ, ಎಲಿಮಿನೇಟ್ ಆಗಿರಲಿಲ್ಲ. ಪ್ರತಿ ಸಲವೂ ಲಕ್ ಸಹಾಯ ಮಾಡುತ್ತಿದ್ದ ಕಾರಣ 'ಲಕ್ಕಿ ಸ್ಟಾರ್' ಎಂದೇ ಸದಸ್ಯರು ಕರೆಯುತ್ತಿದ್ದರು. 113 ದಿನಗಳ ಕಾಲ ಮನೆಯಲ್ಲಿದ್ದ ಶಮಂತ್‌ ವೇದಿಕೆ ಮೇಲೆ ಬಂದಾಗ ಸುದೀಪ್ ಒಂದು ಹಾಡು ಹಾಡಲು ಹೇಳುತ್ತಾರೆ. ತಾವು ದಿನವೂ ಬರೆಯುತ್ತಿದ್ದ ಹಾಡುಗಳಲ್ಲಿ ತುಂಬಾ ಇಷ್ಟವಾದ ಮಳೆ ಹಾಡನ್ನು ಶಮಂತ್ ಹಾಡುತ್ತಾ, ರಿಯಾಲಿಟಿ ಶೋಗೆ ವಿದಾಯ ಹೇಳಿದ್ದಾರೆ.

Follow Us:
Download App:
  • android
  • ios